March 22, 2024

Bhavana Tv

Its Your Channel

ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ರಾಜ್ಯ ಹಾಗೂ ವಿಭಾಗ ಮಟ್ಟಕ್ಕೆ ಆಯ್ಕೆ

ಭಟ್ಕಳ: 2022-23 ಸಾಲಿನ ಪ್ರೌಢ ಶಾಲೆಯ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾ ಕೂಟ ದಲ್ಲಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಅಳವೆಕೋಡಿ ಸಣಬಾವಿ, ಭಟ್ಕಳ್ ಇಲ್ಲಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಾದ ಕು.ಭಾರತಿ ವೆಂಕಟ್ರಮಣ ದೇವಾಡಿಗ 800ಮೀ, 400ಮೀ.ಓಟದಲ್ಲಿ ಪ್ರಥಮ. ಕು.ದೀಕ್ಷಾ ಶನಿವಾರ ದೇವಾಡಿಗ.1500ಮೀ.ಓಟ ಪ್ರಥಮ, ಕು.ನಾಗಶ್ರೀ ದೇವಾಡಿಗ 3000ಮೀ ಪ್ರಥಮ, 1500ಮೀ.ದ್ವಿತೀಯ, ಕುಮಾರ ಕೇಶವ ಮಂಜುನಾಥ ನಾಯ್ಕ್ 800ಮೀ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಅದೇ ರೀತಿ ಬಾಲಕಿಯರ ಕಬಡ್ಡಿ ತಂಡ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ತರಬೇತಿಯನ್ನು ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ವೆಂಕಟೇಶ ಗುಬ್ಬಿಹಿತ್ತಲ ಹಾಗೂ ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಸರ್ವ ಸದಸ್ಯರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,ಶ್ರೀದುರ್ಗಾದೇವಿ ಚಾರಿಟೇಬಲ್ ಟ್ರಸ್ಟಿನ ಪದಾಧಿಕಾರಿಗಳು,ಶಾಲಾಮೂಖ್ಯಾದ್ಯಾಪಕರು& ಶಿಕ್ಷಕರು, ಯುವಕ ಸಂಘದ ಅಧ್ಯಕ್ಷ ರು ಮತ್ತು ಸದಸ್ಯರು. ಅಭಿನಂದನೆಯನ್ನು ಸಲ್ಲಿಸಿದ್ದಾರೆ.

error: