September 22, 2023

Bhavana Tv

Its Your Channel

ಪೊಲ್ ವಾಲ್ಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಚಿತ್ರಾಕ್ಷಿ ಮರಾಠಿ

ಭಟ್ಕಳ: ಸರಕಾರಿ ಪ್ರೌಢಶಾಲಾ ಚಿತ್ತಾರ 8 ನೇ ತರಗತಿಯ ವಿದ್ಯಾರ್ಥಿನಿಯಾದ ಚಿತ್ರಾಕ್ಷಿ ಮರಾಠಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿನಿಯರ ಪೊಲ್ ವಾಲ್ಟ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.

ಇವಳಿಗೆ ಮುಖ್ಯಾದ್ಯಾಪಕರಾದ ದೀಪಕ್ ನಾಯ್ಕ್,ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಾಲ ಲಮಾಣಿ,ಹಾಗೂ ಎಲ್ಲಾ ಶಿಕ್ಷಕರು ಊರ ನಾಗರಿಕರು ವಿದ್ಯಾರ್ಥಿನಿಗೆ ಅಭಿನಂದನೆಗಳನ್ನು ತಿಳಿಸುತ್ತಾರೆ.ಅಡಿಕೆಕುಳಿ ಕುಗ್ರಾಮದ ವಿದ್ಯಾರ್ಥಿನಿಯ ಸಾಧನೆ ರಾಜ್ಯ ಮಟ್ಟದಲ್ಲೂ ಗೆಲುವು ಸಾಧಿಸಲಿ ಎಂದು ಹಾರೈಸುತ್ತೇವೆ.

error: