December 6, 2022

Bhavana Tv

Its Your Channel

ಸರ್ಕಾರಿ ಪ್ರೌಢಶಾಲೆ ಚಿತ್ತಾರ ವಿದ್ಯಾರ್ಥಿನಿಯರು ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ

ಭಟ್ಕಳ: ಸರಕಾರಿ ಪ್ರೌಢಶಾಲೆ ಚಿತ್ತಾರ ವಿದ್ಯಾರ್ಥಿನಿಯರು 28-09-2022 ರಂದು ಎಸ್‌ಡಿಎಂ ಕಾಲೇಜ್ ಆಟದ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಬಿಜಾಪುರದಲ್ಲಿ ನಡೆಯುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಐದು ವಿದ್ಯಾರ್ಥಿನಿಯರು ಆಯ್ಕೆ ಆಗಿರುತ್ತಾರೆ. ಆಯ್ಕೆ ಆದ 9ನೇ ತರಗತಿಯ ವಿದ್ಯಾರ್ಥಿನಿಯರಾದ ರಕ್ಷಿತಾ ನಾಯ್ಕ, ವಿದ್ಯಾಶ್ರೀ ಗೌಡ , ತನುಜಾ ನಾಯಕ, ಇಂಚರ ಗೌಡ, ಹಾಗೂ ಮನೀಷ ಮೊಗೇರ ಇವರಿಗೆ ಪ್ರೌಢಶಾಲಾ ಮುಖ್ಯಾಧ್ಯಾಪಕರಾದ ದೀಪಕ ನಾಯ್ಕ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಾಲ ಲಮಾಣಿ ಹಾಗೂ ಎಲ್ಲಾ ಶಿಕ್ಷಕರು ಎಸ್ ಡಿ ಎಂ ಸಿ ಸದಸ್ಯರು ಊರ ನಾಗರಿಕರು ಶುಭಾಶಯವನ್ನು ವ್ಯಕ್ತಪಡಿಸಿರುತ್ತಾರೆ ಈ ವಿದ್ಯಾರ್ಥಿಗಳನ್ನು ಸಿದ್ಧಪಡಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಗೋಪಾಲ ಲಮಾಣಿಯವರಿಗೂ ಊರ ನಾಗರಿಕರು ಶುಭಾಶಯಗಳು ಕೋರಿರುರುತ್ತಾರೆ ಈ ವಿದ್ಯಾರ್ಥಿಗಳು ಸಪ್ಟೆಂಬರಲ್ಲಿ ನಡೆದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ದೊಡ್ಡವರೊಂದಿಗೆ ಸ್ಪರ್ಧಿಸಿ ಅಲ್ಲಿಯೂ ದ್ವಿತೀಯ ಸ್ಥಾನವನ್ನು ಪಡೆದು ಸಾಧನೆ ಮಾಡಿರುತ್ತಾರೆ ಈ ವಿದ್ಯಾರ್ಥಿಗಳು ವಿಭಾಗ ಮಟ್ಟದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸೋಣ

About Post Author

error: