April 25, 2024

Bhavana Tv

Its Your Channel

ಬೈಕ್ ನಿಯಂತ್ರಣ ತಪ್ಪಿ ವ್ಯಕ್ತಿಯೊಬ್ಬರಿಗೆ ಢಿಕ್ಕಿ , ಹಿಂಬದಿ ಸವಾರ ಕುಸಿದು ಬಿದ್ದು ಸಾವು

ಭಟ್ಕಳ: ಚಲಿಸುತ್ತಿದ್ದ ಮೋಟಾರ್ ಬೈಕ್ ವೊಂದು ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಢಿಕ್ಕಿ ಹೊಡೆದು ಮುಗುಚಿ ಬಿದ್ದ ಪರಿಣಾಮವಾಗಿ ಹಿಂಬದಿಯ ಸವಾರ ಕುಸಿದು ಬಿದ್ದ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಪೈ ಇಲೆಕ್ಟಿಕಲ್ಸ್ ಸಮೀಪ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಡೆದಿದೆ.

ಮೃತ ಬಾಲಕನನ್ನು ತಾಲೂಕಿನ ಬಂದ ರೋಡ್ 5ನೇ ಕ್ರಾಸ್ ಅಬ್ದುಲ್ಲಾ ಫೈಜ್ ಆಫ್ರಿಕಾ ಎಂದು ಗುರುತಿಸಲಾಗಿದೆ. ಈತ ಶಿರಾಲಿಯ ಕಡೆಯಿಂದ ಭಟ್ಕಳ ಪಟ್ಟಣದೆಡೆಗೆ ಪ್ರಯಾಣಿಸುತ್ತಿದ್ದ ಎಂದು ತಿಳಿದು ಬಂದಿದೆ. ಅಪಘಾತ ಸ್ಥಳದಲ್ಲಿ ಕುಸಿದು ಬಿದ್ದಿದ್ದ ಬಾಲಕನನ್ನು ಜಾಲಿ ಕ್ರಾಸ್ ಲೈಫ್ ಕೇರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರ ಒಳಗೆ ಬಾಲಕನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಎಸ್‌ಐ ಹನುಮಂತ ಕುಡಗುಂಟಿ ಸಿಬ್ಬಂದಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: