April 18, 2024

Bhavana Tv

Its Your Channel

ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಭಟ್ಕಳದಲ್ಲಿ ಪವಿತ್ರ ಮಣ್ಣು ಸಂಗ್ರಹ

ಭಟ್ಕಳ: ನಾಡ ಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ರಾಜ್ಯದ ಎಲ್ಲೆಡೆಯಿಂದ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹ ಅಭಿಯಾನ ಆರಂಭವಾಗಿದ್ದು ಭಟ್ಕಳದಲ್ಲೂ ಮೃತ್ತಿಕೆ ಸಂಗ್ರಹಿಸಲು ಕೇಂಪೆಗೌಡ ರಥ ಆಗಮಿಸಿದೆ.

ನಾಡಪ್ರಭು ಕೆಂಪೇಗೌಡರ 108 ಅಡಿಯಲ್ಲಿ ಕಂಚಿನ ಪ್ರತಿ ಉದ್ಘಾಟನೆಯ ಅಂಗವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪವಿತ್ರ ಮೃತ್ತಿಕೆ (ಮಣ್ಣು ಸಂಗ್ರಹ ಅಭಿಯಾನ) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ನ.3ರಂದು ಕೆಂಪೆಗೌಡ ರಥ ಮುರ್ಡೇಶ್ವರಕ್ಕೆ ಬಂದಿತ್ತು. ಶುಕ್ರವಾರ ಮುರ್ಡೇಶ್ವರದ ದೇವಸ್ಥಾನದಲ್ಲಿ ಬೆಳಿಗ್ಗೆ 09-00 ರಿಂದ ಬೆಳಿಗ್ಗೆ 10.30 “ಪವಿತ್ರ ಮೃತ್ತಿಕಾ ಸಂಗ್ರಹಣಾ ಕಾರ್ಯಕ್ರಮ” ನಡೆಯಿತು.ನಂತರ ಕಾಯ್ಕಿಣಿ ಗ್ರಾಮಪಂಚಾಯಿತಿ, ಬೇಂಗ್ರೆ ಗ್ರಾಮಪಂಚಾಯಿತಿ, ಶಿರಾಲಿ ಗ್ರಾಮಪಂಚಾಯಿತಿ ಮೃತ್ತಿಕೆ ಸಂಗ್ರಹಿಸಿ ಬಳಿಕ ಭಟ್ಕಳ ತಾಲೂಕಾ ಕೇಂದ್ರದಲ್ಲಿ “ಪವಿತ್ರ ಮೃತ್ತಿಕಾ ಸಂಗ್ರಹಣಾ ಕಾರ್ಯಕ್ರಮ” ನಡೆಯಿತು. ಈ ಕಾರ್ಯಕ್ರಮದಲ್ಲಿ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್, ತಹಸೀಲ್ದಾರ ಸುಮಂತ ಬಿ.ಇ., ಸೇರಿದಂತೆ ಇತರ ತಾಲೂಕಾಮಟ್ಟದ ಅಧಿಕಾರಿಗಳು ಇದ್ದರು.

error: