April 13, 2024

Bhavana Tv

Its Your Channel

ಮಾಲಕ-ಚಾಲಕರ ಸಂಘ ಭಟ್ಕಳದ ವತಿಯಿಂದ ವಿವಿಧ ಅಧಿಕಾರಿಗಳಿಗೆ ಮನವಿ

ಭಟ್ಕಳ: ಭಟ್ಕಳದ ಕೆಲವು ರಿಕ್ಷಾಗಳು ತಮಗೆ ನೀಡಲಾಗಿದ್ದ ಪರ್ಮಿಟ್ ಪರಿಧಿಯನ್ನು ಮೀರಿ ಇತರೆ ತಾಲೂಕು ಪ್ರದೇಶಗಳಿಗೆ ಭಾಡಿಗೆಗೆ ಜನರನ್ನು ಹತ್ತಿಸಿಕೊಂಡು ಹೋಗುತ್ತಿರುವುದನ್ನು ನಿಲ್ಲಿಸುವಂತೆ ಟ್ಯಾಕ್ಸಿ ಮಾಲಕ-ಚಾಲಕರ ಸಂಘ ಭಟ್ಕಳದ ವತಿಯಿಂದ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಭಟ್ಕಳದ ಕೆಲವು ರಿಕ್ಷಾಗಳು ತಮಗೆ ನೀಡಲಾಗಿದ್ದ ಪರ್ಮಿಟ್ ಪರಿಧಿಯನ್ನು ಮೀರಿ ಬೈಂದೂರು, ತಾಸಿ, ಕುಂದಾಪುರ, ಕೊಲ್ಲೂರು, ಉಡುಪಿ, ಸಿಗಂದೂರು ಇತ್ಯಾದಿ ಪ್ರದೇಶಗಳಿಗೆ ಭಾಡಿಗೆಗೆ ಜನರನ್ನು ಹತ್ತಿಸಿಕೊಂಡು ಹೋಗುತ್ತಿರುವುದರಿಂದ ಹಳದಿ ಬೋರ್ಡ್ ಟ್ಯಾಕ್ಸಿಗಳಿಗೆ ತುಂಬಾ ಹಾನಿಯಾಗುತ್ತಿದೆ ಎಂದು ಟ್ಯಾಕ್ಸಿ ಮಾಲಕ-ಚಾಲಕರ ಸಂಘ ಭಟ್ಕಳದ ವತಿಯಿಂದ ಕುಂದಾಪುರ ಡಿ.ವೈ.ಎಸ್.ಪಿ., ಬೈಂದೂರು ಸರ್ಕಲ್ ಇನ್ಸಪೆಕ್ಟರ್, ಭಟ್ಕಳ ಡಿ.ವೈ.ಎಸ್.ಪಿ.,ಸರ್ಕಲ್ ಇನ್ಸಪೆಕ್ಟರ್, ಹೊನ್ನಾವರದ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಆಟೋ ರಿಕ್ಷಾಗಳಿಗೆ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಸೀಮಿತ ಕಿ.ಮೀ.ಗಳಿಗಷ್ಟೇ ಪರ್ಮಿಟ್ನ ನಿಡುವುದರಿಂದ ಕಾನೂನು ತೊಡಕು ಕೂಡಾ ಉಂಟಾಗುತ್ತದೆ. ಅಟೋ ರಿಕ್ಷಾಗಳಲ್ಲಿ ಪ್ರಯಾಣಿಕರನ್ನು ದೂರ ದೂರ ಕರೆದೊಯ್ಯವಾಗ ಯಾವುದೇ ರೀತಿಯ ಅಪಘಾತ, ಇತ್ಯಾದಿ ಸಂಭವಿಸಿದಲ್ಲಿ ಅದಕ್ಕೆ ಯಾವುದೇ ರೀತಿಯ ವಿಮಾ ಪರಿಹಾರ ದೊರೆಯುವುದಿಲ್ಲ, ಇದರಿಂದ ಅಟೋ ಚಾಲಕರು,
ಮಾಲಕರು ಸಂಕಷ್ಟಕ್ಕೆ ಸಿಲುಕುವುದಲ್ಲದೇ ಪ್ರಯಾಣಿಕರೂ ಕೂಡಾ ದುಬಾರಿ ಬೆಲೆ ತೆರಬೇಕಾಗುತ್ತದೆ.
ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು. ತಮ್ಮ ಪರ್ಮಿಟ್ ವ್ಯಾಪ್ತಿಯನ್ನು ಮೀರಿ ಸಂಚರಿಸುವ ಆಟೋಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಉಪಾಧ್ಯಕ್ಷ ಫೈರೋಜ್ ಹುಸೇನ್ ಸಾಬ್, ಗಣೇಶ ದೇವಾಡಿಗ, ಸೂರ್ಯಕಾಂತ ಸುಬ್ರಾಯ ನಾಯ್ಕ, ಮೊಹಮ್ಮದ್,ಮನವಿ ನೀಡುವ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಜಗದೀಶ ನಾಯ್ಕ, ಅದಾನ್, ಮೊಹಮ್ಮದ್ ಮುಸ್ತಾಕ್, ಆಮೀನುದ್ದೀನ್, ಗಣಪತಿ ಸುಕಪ್ಪ ನಾಯ್ಕ, ನಾರಾಯಣ ತಿಮ್ಮಯ್ಯ ನಾಯ್ಕ, ಶಫೀಕ್ ಅಹಮ್ಮದ್ ಮುಂತಾದವರು ಉಪಸ್ಥಿತರಿದ್ದರು

error: