March 29, 2024

Bhavana Tv

Its Your Channel

ಭಟ್ಕಳದ ಲೈಟ್ ಹೌಸ್ ನಲ್ಲಿ ಭದ್ರತೆಗೆ ನಿವೃತ್ತ ಸೈನಿಕರ ಪುನಃ ನಿಯೋಜನೆಗೆ ಒತ್ತಾಯ

ಉತ್ತರಕನ್ನಡ ಜಿಲ್ಲೆಯ ಭಟ್ಕಳ ಲೈಟ್ ಹೌಸ್ ನಲ್ಲಿ ಭಟ್ಕಳ ಬಂದರಿನ ಸುತ್ತಲಿನ ಸಂಪೂರ್ಣ ರಕ್ಷಣಾ ಮಾಹಿತಿಗಾಗಿ ರಾಡಾರ್ ವ್ಯವಸ್ಥೆಯಿದ್ದು, ಇದರ ನಿರ್ವಹಣೆಯನ್ನು ಇಂಡಿಯನ್ ಕೋಸ್ಟಗಾರ್ಡ್ ಅಧೀನದಲ್ಲಿ ಬಿಇಎಲ್ ಮಾಡುತ್ತಿದೆ. ರಾಡಾರ್ ವ್ಯವಸ್ಥೆ ಲೈಟ್ ಹೌಸ್ ನ ಒಳಗಡೆ ಇದ್ದು ಲೈಟ್ ಹೌಸ್ ನ ಸಂಪೂರ್ಣ ಜಾಗ ಅತಿಸೂಕ್ಷ್ಮ ಪ್ರದೇಶವಾಗಿದ್ದು ಅದರ ಸಂಪೂರ್ಣ ಸೆಕ್ಯುರಿಟಿ ವ್ಯವಸ್ಥೆಗಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮೂವರು ನಿವೃತ್ತ ಸೈನಿಕರನ್ನು ನಿಯೋಜಿಸಲಾಗಿತ್ತು.

ಈಗಿರುವ ಭಟ್ಕಳದ ಲೈಟ್ ಹೌಸ್ ಮಿನಿಸ್ಟಿç ಆಫ್ ಶಿಪ್ಪಿಂಗ್ ನ ಆಡಳಿತಕ್ಕೆ ಒಳಪಟ್ಟಿದ್ದು, ಭಟ್ಕಳ ಲೈಟ್ ಹೌಸ್ ನಲ್ಲಿ ಅತಿಸೂಕ್ಷ್ಮ ಭದ್ರತಾ ವ್ಯವಸ್ಥೆಯನ್ನು ಕಾಯ್ದುಕೊಂಡು ಹೋಗಬೇಕಾದವರು, ಕಳೆದ ಒಂದುವರೆ ತಿಂಗಳ ಹಿಂದೆ ಉತ್ತಮ ರಕ್ಷಣಾ ಕರ್ತವ್ಯ ಮಾಡಿಕೊಂಡು ಬಂದಿದ್ದAತಹ ಮೂವರೂ ಮಾಜಿ ಸೈನಿಕರನ್ನು ಏಕಾಏಕಿ ಕೆಲಸದಿಂದ ತೆಗೆದಿರುತ್ತಾರೆ. ಅಲ್ಲದೇ, ಇಲ್ಲಿಯವರೆಗೆ ಯಾವುದೇ ಸೂಕ್ತ ರಕ್ಷಣಾ ಭದ್ರತೆಯ ಸಿಬ್ಬಂದಿಗಳನ್ನು ನಿಯೋಜಿಸದೇ ಭದ್ರತಾ ನಿರ್ಲಕ್ಷ್ಯ ಮಾಡುತ್ತಿರುವ ಗಂಭೀರ ವಿಷಯ ಗಮನಕ್ಕೆ ಬಂದಿದೆ.

ಮಿನಿಸ್ಟಿç ಆಫ್ ಶಿಪ್ಪಿಂಗ್ ನ ಲೈಟ್ ಹೌಸ್ ನ ಡೈರೆಕ್ಟರ್ (ಗೋವಾ) ಮತ್ತು ಇಂಡಿಯನ್ ಕೋಸ್ಟ್ ಗಾಡ್ ð ಇಲಾಖೆಯ ಡೈರೆಕ್ಟರ್ ಮಧ್ಯದ ಸಮನ್ವಯ ಕೊರತೆಯಿಂದ ಇಂದು ಭಟ್ಕಳ ಲೈಟ್ ಹೌಸ್ ನಲ್ಲಿರುವ ರಾಡಾರ್ ವ್ಯವಸ್ಥೆಯ ರಕ್ಷಣೆ ವಿಷಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಅಷ್ಟೇ ಅಲ್ಲದೇ, ಯಾವುದೇ ರಕ್ಷಣಾ ಸಿಬ್ಬಂದಿ ಇಲ್ಲದಿದ್ದ ಈ ಸಮಯದಲ್ಲೂ ಸಹ ಲೈಟ್ ಹೌಸ್ ನ ಮುಖ್ಯ ನಿರ್ವಾಹಕರು ಸಾರ್ವಜನಿಕರಿಂದ ಹಣ ಪಡೆದು ಲೈಟ್ ಹೌಸ್ ಒಳಗಡೆ ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಮಾಡಿಕೊಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಸಂಬAಧಪಟ್ಟ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಈಗಾಗಲೇ, ಜಿಲ್ಲಾ ಮಾಜಿ ಸೈನಿಕರ ಪ್ರಕೋಷ್ಟದ ವತಿಯಿಂದ, ಜಿಲ್ಲಾಧಿಕಾರಿಯವರನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ, ಸೂಕ್ತ ತನಿಖೆ ಮಾಡಿ ಕೂಡಲೇ ಪ್ರಸ್ತುತ ನಿವೃತ್ತ ಸೈನಿಕರನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿ, ಭದ್ರತಾ ನಿರ್ಲಕ್ಷ್ಯ ಕ್ಕೆ ಅವಕಾಶ ಮಾಡಿಕೊಟ್ಟವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲು ಸಂಬAಧಿಸಿದ ಇಲಾಖೆಗೆ ಸೂಚಿಸುವಂತೆ ಮನವಿ ಮಾಡಲಾಯಿತು.

error: