April 25, 2024

Bhavana Tv

Its Your Channel

ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಏಕಾಏಕಿ ಬದಲಾವಣೆ, ಮಾಜಿ ಶಾಸಕ ಮಂಕಾಳ ವೈದ್ಯ ವಿರುದ್ಧ ನೇರ ಆರೋಪ

ಭಟ್ಕಳ: ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಏಕಾಏಕಿ ಬದಲಾವಣೆ ಮಾಡಿ ನೂತನ ಬ್ಲಾಕ್ ಅಧ್ಯಕ್ಷರ ಆಯ್ಕೆ ಮಾಡುವಂತೆ ಕೆ.ಪಿ.ಸಿ.ಸಿ. ಅಧ್ಯಕ್ಷ ರ ಆದೇಶಕ್ಕೆ ಇಲ್ಲಿನ ಮಾಜಿ ಶಾಸಕ ಮಂಕಾಳ ವೈದ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅವರೇ ನೇರ ಕಾರಣ ಎಂದು ನಿರ್ಗಮಿತ, ಮಾಜಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಅಸಮಾಧಾನದೊಂದಿಗೆ ನೇರವಾಗಿ ಆರೋಪಿಸಿದ್ದಾರೆ

ಅವರು ಮಂಗಳವಾರದAದು ರಂಗೀನಕಟ್ಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ನಮಗಾದ ಅಸಮಾಧಾನದ ಕುರಿತು ಮುಖಂಡರ ಸಮ್ಮುಖದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

‘ಕಳೆದ ನಾಲ್ಕುವರೆ ವರ್ಷದಿಂದ ಪಕ್ಷದ ಬ್ಲಾಕ್ ಅಧ್ಯಕ್ಷನಾಗಿ ನಿಷ್ಠೆ, ಪ್ರಾಮಾಣಿಕತೆಯಿಂದ ಯಾವುದೇ ತಾರತಮ್ಮವಿಲ್ಲದೇ ಪಕ್ಷದ ಸಂಘಟನೆಯನ್ನು ಮಾಡುತ್ತಾ ಬಂದಿದ್ದು, ಕಳೆದ ಎರಡು ದಿನದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪತ್ರಿಕೆಯಲ್ಲಿ ಏಕಾಏಕಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ವೆಂಕಟೇಶ ನಾಯ್ಕ ಚಿತ್ರಾಪುರ ಎಂಬುವವರನ್ನು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಮಾಡಿದ ಆದೇಶ ಪ್ರತಿಯನ್ನು ನೋಡಿದ್ದು, ಏಕಾಏಕಿಯಾಗಿ ಮಾಡಿದ ಆದೇಶ ನೋಡಿ ಆಶ್ಚರ್ಯವಾದರು ಬದಲಾವಣೆ ಪಕ್ಷದ ಹಾಗೂ ಪ್ರಕ್ರತಿಯ ನಿಯಮ ಅದರಿಂದ ನನಗೇನು ಬೇಸರವಿಲ್ಲ. ನಾನು ಈಗಲೂ ಮುಂದೆಯೂ ಸಹ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನನ್ನ ಕೆಲಸವನ್ನು ಮುಂದುವರೆಸಲಿದ್ದೇನೆ ಎಂದರು,

ಆದರೆ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಸಾಮಾಜಿಕ, ಜಾತ್ಯಾತೀತ ನಿಲುವಿನಲ್ಲಿ ನಂಬಿಕೆ ಇಟ್ಟಂತಹ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತದ ಅಡಿಯಲ್ಲಿ ತಾಲೂಕಿನಲ್ಲಿ ಇತರ ಜಾತಿ ಹಾಗೂ ಸಮುದಾಯದಲ್ಲಿ ಹಲವಾರು ಹಿರಿಯ ಹಾಗೂ ಸಮರ್ಥ ನಾಯಕರಿದ್ದಾಗಿಯೂ ಕೂಡ ಅವರನ್ನು ಗಣನೆಗೆ ತೆಗೆದುಕೊಂಡು ಅವರಲ್ಲಿ ಒಬ್ಬರನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಮಾಡದೇ ಪುನಃ ನಾಮಧಾರಿ ಸಮಾಜದ ಮತ್ತೊಬ್ಬ ವ್ಯಕ್ತಿಯನ್ನು ಪಕ್ಷದ ಬ್ಲಾಕ್ ಅಧ್ಯಕ್ಷ ರನ್ನಾಗಿ ಮಾಡಿ ನಮ್ಮ ನಮ್ಮಲ್ಲಿಯೇ, ನನ್ನ ಸಂಬAಧಿಯನ್ನೆ ಆಯ್ಕೆ ಮಾಡಿ ಸಂಬAಧಗಳನ್ನು ಒಡೆದು ಆಳುವ ತನ್ನ ನೀತಿಯನ್ನು ಮಂಕಾಳ ವೈದ್ಯ ಅವರು ಪ್ರದರ್ಶಿಸುತ್ತಿದ್ದಾರೆ. ಇದು ಪಕ್ಷದ ಹಿತದ್ರಷ್ಟಿಯಿಂದ ಸರಿಯಲ್ಲ. ಆದಾಗಿಯೂ ನಾನು ಹೊಸದಾಗಿ ನೇಮಕಗೊಂಡ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ ಚಿತ್ರಾಪುರ ಅವರಿಗೆ ನನ್ನ ಸಂಪೂರ್ಣ ಸಹಾಯ ಸಹಕಾರವನ್ನು ಇನ್ನು ಮುಂದೆಯೂ ನೀಡಲಿದ್ದೇನೆ ಎಂದರು.

ನನ್ನನ್ನು ತರಾತುರಿಯಲ್ಲಿ ಪಕ್ಷದ ನಿಯಮವನ್ನ ಗಾಳಿಗೆ ತೂರಿ ಹೇಳದೇ ಕೇಳದೇ ಪಕ್ಷದ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಲು ನಾನು ಪಕ್ಷಕ್ಕೆ ನಿಷ್ಠನಾಗಿ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ಚಾಚು ತಪ್ಪದೇ ಪಕ್ಷವನ್ನ ಕಳೆದ ನಾಲ್ಕುವರೆ ವರ್ಷಗಳಿಂದ ಬಲವರ್ಧನೆ ಮಾಡಿದ್ದಕ್ಕಾಗಿಯೇ ಅಥವಾ ನಾನು ಮಾಜಿ ಶಾಸಕ ಮಂಕಾಳ ವೈದ್ಯ ಅವರ ಕೈಗೊಂಬೆಯಾಗಿ ಅವರು ಹೇಳಿದಂತೆ ಮಾಡದೇ ಪಕ್ಷದ ಸಭೆ, ಸಮಾರಂಭಗಳನ್ನು ಅವರ ಮನೆಯಲ್ಲಿ ಮಾಡದೇ ಪಕ್ಷದ ಕಚೇರಿಯಲ್ಲಿ ಮಾಡಿರುವುದೇ ಅವರ ಅಸಮಾಧಾನಕ್ಕೆ ಕಾರಣವಾಗಿ ನನ್ನನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದಾರೆಯೇ.? ನಾನು ಅಧ್ಯಕ್ಷನಾದಾಗಿನಿಂದ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಪಕ್ಷದ ಸಭೆ ಸಮಾರಂಭಗಳಿಗೆ ಮಾಜಿ ಶಾಸಕ ಜೆ.ಡಿ.ನಾಯ್ಕ, ಮಾಜಿ ಮಂತ್ರಿಗಳಾದ ಆರ್.ಎನ್.ನಾಯ್ಕ ಹಾಗೂ ಇತರ ಕೆಲವು ನಿಷ್ಠಾವಂತ ಕಾಂಗ್ರೆಸ್ ಮುಖಂಡರನ್ನು ಕರೆಯಬಾರದು ಎಂದು ನನ್ನನ್ನು ಒತ್ತಾಯಿಸುತ್ತಿದ್ದರು. ಈ ವಿಚಾರವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅವರಿಗೂ ಸಹ ತಿಳಿಸಿದಾಗ ಅವರು ಕೂಡ ಅದಕ್ಕೆ ಸರಿಯಾಗಿ ಸ್ಪಂದಿಸಿಲ್ಲವಾಗಿದೆ. ಆದರೆ ನಾನು ಪಕ್ಷದ ಹಿತದ್ರಷ್ಟಿಯಿಂದ ಅವರೆಲ್ಲರನ್ನು ಕೂಡ ಪಕ್ಷದ ಸಭೆ ಸಮಾರಂಭಗಳಿಗೆ ಕರೆದು ಪಕ್ಷದ ಸಂಘಟನೆಗೆ ಅವರನ್ನು ತೊಡಗಿಸಿಕೊಂಡಿರುವುದೇ ನನ್ನನ್ನು ಬದಲಾವಣೆ ಮಾಡುವುದಕ್ಕೆ ಕಾರಣವಾಗಿದೆಯೇ ಎಂದು ಹೇಳಿದರು.

ಅದೇ ರೀತಿ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಕಳೆದ ನಾಲ್ಕೂವರೆ ವರ್ಷಗಳಿಂದ ಯಾವುದೇ ಡಿ.ಸಿ.ಸಿ. ಸಭೆಗೂ ಕೂಡ ಬಾರದೇ ಪಕ್ಷದಿಂದ ಅಂತರವನ್ನು ಕಾಯ್ದುಕೊಂಡಿರುವುದನ್ನು ತಿಳಿದಿರುವ ಜಿಲ್ಲಾಧ್ಯಕ್ದ ಭೀಮಣ್ಣ ನಾಯ್ಕ ಅವರ ಬಳಿ ಹಲವಾರು ಬಾರಿ ನಾನು ಮಂಕಾಳ ವೈದ್ಯರ ನಡೆಯ ಬಗ್ಗೆ ತಿಳಿಸಿ ಸರಿಪಡಿಸುವಂತೆ ಕೇಳಿಕೊಂಡಾಗ ಅವರು ಕೂಡ ಈ ವಿಚಾರದಲ್ಲಿ ತನ್ನ ಅಸಹಾಯಕತೆಯನ್ನು ನನ್ನ ಬಳಿ ಹೇಳಿಕೊಂಡಿದ್ದರು. ಈ ಎಲ್ಲಾ ವಿಚಾರ ಗೊತ್ತಿದ್ದಾಗಿಯೂ ಕೂಡ ಜಿಲ್ಲಾಧ್ಯಕ್ಷರು ಈ ವಿಚಾರವನ್ನ ಪಕ್ಷದ ವರಿಷ್ಠರಿಗೆ ತಿಳಿಸಿ ವರದಿ ಮಾಡದೇ ಕೆ.ಪಿ.ಸಿ.ಸಿ. ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೇ ಭೀಮಣ್ಣ ನಾಯ್ಕ ಅವರು ತಮ್ಮ ಸ್ವಹಿತಾಸಕ್ತಿಗಾಗಿ ಇಬ್ಬರು ಮಾಜಿ ಶಾಸಕರುಗಳ ಕೈಗೊಂಬೆಯAತೆ ಕೆಲಸ ಮಾಡಿ ಜಿಲ್ಲೆಯ ಉಳಿದ ಕ್ಷೇತ್ರದಲ್ಲಿ ಸ್ವ ಜಾತಿ ಮುಖಂಡರನ್ನು ನಿರ್ಲಕ್ಷಿಸಿ ಕಾಂಗ್ರೆಸ್ ಪಕ್ಷದಿಂದ ದೂರ ಉಳಿಯುವಂತೆ ಮಾಡುತ್ತಾ ಬಂದಿದ್ದಾರೆ ಎಂದು ಭೀಮಣ್ಣ ನಾಯ್ಕ ಹಾಗೂ ಮಂಕಾಳ ವೈದ್ಯರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಬ್ಲಾಕ ಅಧ್ಯಕ್ಷನಾದ ದಿನದಿಂದ ಇಲ್ಲಿಯ ತನಕ ಪಕ್ಷದ ನಿರ್ದೇಶನದಂತೆ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ಅದಕ್ಕಿಂತ ಪೂರ್ವದಲ್ಲಿ ಕಾಂಗ್ರೆಸನಿAದ ಕಡೆಗಣಿಸಲ್ಪಟ್ಟ ತಾಲೂಕಿನ ಎಲ್ಲಾ ಹಿರಿಯ-ಕಿರಿಯ ಕಾಂಗ್ರೆಸ್ ಮುಖಂಡರನ್ನು ಸಂಪರ್ಕಿಸಿ ಅವರನ್ನು ಪಕ್ಷದ ವೇದಿಕೆಯಡಿಯಲ್ಲಿ ಕರೆ ತಂದು ಪ್ರತಿಯೊಂದು ಬೂತ್ ಗಳಿಗೆ ಹೋಗಿ ಸಮಿತಿಗಳನ್ನು ರಚಿಸಿ ಪಕ್ಷದ ಕಾರ್ಯಕರ್ತ ಪಡೆಯನ್ನು ಸಜ್ಜುಗೊಳಿಸಿದ್ದೇನೆ. ಪಕ್ಷದ ಸಾಕಷ್ಟು ಕಾರ್ಯಕ್ರಮ, ಬೆಲೆ ಏರಿಕೆ ಕುರಿತಾದ ಪ್ರತಿಭಟನೆ, ಕೆ.ಪಿ.ಸಿ.ಸಿ. ಅಧ್ಯಕ್ಷರನ್ನು ಇ.ಡಿ. ಇಲಾಖೆ ಬಂಧಿಸಿದ ವಿರುದ್ದ, ಅಗ್ನಿಪಥ್ಣ ಕ್ರಷಿ ಕಾಯ್ದೆ ವಿರುದ್ದ ಪಕ್ಷದ ನಿರ್ದೇಶನದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಯ ವಿರುದ್ದ ಪ್ರತಿಭಟನೆ ಹಾಗೂ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಮುಂತಾದ ಕಾರ್ಯಕ್ರಮವನ್ನು ಮುಖಂಡರ, ಕಾರ್ಯಕರ್ತರ ಸಹಾಯದೊಂದಿಗೆ ಎಲ್ಲಾ ಖರ್ಚು ವೆಚ್ಚ ನಾನೇ ಸ್ವಂತ ಹಣದಿಂದ ಖರ್ಚು ಮಾಡಿ ಪಕ್ಷ ಬಲವರ್ಧನೆಗೆ ಕೆಲಸ ಮಾಡಿದ್ದೇನೆ.

ಆದರೆ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಇದ್ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಕ್ಷೇತ್ರಕ್ಕೆ ಪಕ್ಷದ ರಾಜ್ಯ ಘಟಕದ ನಾಯಕರು ಪದಾಧಿಕಾರಿಗಳು ಭೇಟಿ ನೀಡಿದಾಗ ಮಾತ್ರ ಮುಖ ತೋರಿಸಿ ಹಾಜರಾತಿ ಹಾಕಿ ಹೋಗಿದ್ದು, ಪಕ್ಷದ ಸಹಾಯ ಸಹಕಾರಕ್ಕಾಗಲಿ ಅಥವಾ ಪಕ್ಷ ಸಂಘಟನೆಯ ಕುರಿತಾಗಿ ನನ್ನೊಂದಿಗೆ ಚರ್ಚೆ ಮತ್ತು ವಿಚಾರ ವಿನಿಮಯ ಸಲಹೆಯನ್ನು ನೀಡಿಲ್ಲವಾಗಿದೆ. ಇನ್ನು ಪಕ್ಷದ ನಿರ್ದೇಶನದ ಸಾಕಷ್ಟು ಕಾರ್ಯಕ್ರಮಕ್ಕೆ ನಾನು ಪಕ್ಷದ ಕಾರ್ಯಕ್ರಮ ಮಾಡಲು ಕಾರ್ಯಕರ್ತರನ್ನು ಸೇರಿಸಿಕೊಂಡು ಮಂಕಾಳ ವೈದ್ಯ ಅವರ ಬರುವಿಕೆಗಾಗಿ ಕಾಯುತ್ತ ಕರೆ ಮಾಡಿದ್ದು ಕೊನೆ ಗಳಿಗೆಯಲ್ಲಿ ತಾನು ಬೇರೆ ಕಡೆಯಲ್ಲಿ ಇರುವುದಾಗಿ ಹೇಳಿ ನೀವು ಕಾರ್ಯಕ್ರಮ ಮುಂದುವರೆಸಿಕೊAಡು ಹೋಗಿ ಎಂದು ಹೇಳಿ ಪಕ್ಷದ ಕಾರ್ಯಕ್ರಮದಿಂದ ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ ಎಂದರು.

ಪಕ್ಷದ ಕಾರ್ಯಕ್ರಮವನ್ನು ಯಾವುದೇ ಮುಖಂಡರ ಮನೆಯಲ್ಲಿ ನಡೆಸಬಾರದು. ಎಲ್ಲವೂ ಪಕ್ಷದ ಕಚೇರಿಯಲ್ಲಿ ನಡೆಸಬೇಕೆಂಬ ಆದೇಶವನ್ನು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಸೂಚಿಸಿದ್ದರು. ಅದರಂತೆ ಎಲ್ಲಾ ಕಾರ್ಯಕ್ರಮವನ್ನು ಸಹ ಕಚೇರಿಯಲ್ಲಿ ಅಥವಾ ಸಭಾಭವನದಲ್ಲಿ ನಡೆಸಿಕೊಂಡು ಬಂದಿದ್ದರಿAದ ಮಾಜಿ ಶಾಸಕ ಮಂಕಾಳ ವೈದ್ಯ ಅವರಿಗೆ ಅಸಮಾಧಾನಗೊಂಡು ಸಾಕಷ್ಟು ಕಾರ್ಯಕ್ರಮಕ್ಕೆ ಬಾರದೇ ಇದ್ದ ಘಟನೆಗಳು ಹೆಚ್ಚಾಗಿವೆ.

ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಾವಣೆ ಮಾಡುವಲ್ಲಿಯೂ ಸಹ ಮಾಜಿ ಶಾಸಕ ಮಂಕಾಳ ವೈದ್ಯ ಅವರು ನನಗೆ ಸಹಕಾರ ಮಾಡಿದ್ದಾಗಲಿ ಅಥವಾ ಅವರ ಬೆಂಬಲಿಗರಿಗೆ ಹೇಳಿ ಸದಸ್ಯತ್ವ ನೋಂದಾವಣೆ ಮಾಡಿಸಿದ್ದಾಗಲಿ ಇಲ್ಲ. ಬದಲಾಗಿ ತನ್ನ ಹಿಂಬಾಲಕರಿಗೆ ಸೂಚಿಸಿ ಸದಸ್ಯತ್ವವನ್ನು ನೋಂದಣಿ ಮಾಡದೇ ಇರುವಂತೆ ಮಾಡಿದ್ದಾರೆ. ಆದಾಗಿಯೂ ಸಹ 15 ಸಾವಿರಕ್ಕೂ ಅಧಿಕ ಹೆಚ್ಚು ಸದಸ್ಯತ್ವ ಮಾಡುವಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸಹಕರಿಸಿದ್ದಾರೆ.

ಕಳೆದ ಮೂರು ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ಪ್ರಚಾರಕ್ಕೂ ಬಾರದೇ ಅಂತರ ಕಾಯ್ದುಕೊಂಡಿದ್ದಾರೆ. ಅಕ್ಟೋಬರ್ 6 2022 ರಂದು ನಡೆದ ಭಾರತ ಜೋಡೋ ಯಾತ್ರೆಯ ಪೂರ್ವಭಾವಿ ಸಭೆಯನ್ನು ಸಹ ಮಾಜಿ ಶಾಸಕ ಮಂಕಾಳ ವೈದ್ಯ ಅವರು ನನ್ನ ಗಮನಕ್ಕೆ ತರದೇ ಸಭೆ ನಡೆಸಿದ್ದಾರೆ. ಹಾಗೂ ಕಚೇರಿಯಲ್ಲಿ ನಡೆಯುವ ಸಭೆಗೆ ಯಾರು ತೆರಳಬಾರದು ಎಂದು ತಾಕೀತು ಮಾಡಿದ್ದಾರೆ. ನವೆಂಬರ್ 19 2022 ರಂದು ಕುಮಟಾದಲ್ಲಿ ನಡೆದ ಡಿ.ಸಿ.ಸಿ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಐವನ್ ಡಿಸೋಜಾ ಅವರು ಬ್ಲಾಕ್ ಮಟ್ಟದ ಕಾಂಗ್ರೆಸ್ ಮುಖಂಡರಹ ಹಾಗೂ ಕಾರ್ಯಕರ್ತರ ಸಭೆ ನಡೆಸಲು ತಿಳಿಸಿದಂತೆ ನಾನು ಸಭೆಯ ಕುರಿತು ನೋಟಿಸನ್ನು ಕಾಂಗ್ರೆಸ್ ಗ್ರೂಪನಲ್ಲಿ ಹಾಕಿದ ಒಂದು ತಾಸಿನಲ್ಲಿ ಅರ್ಧ ಗಂಟೆಯ ಒಳಗೆ ಮಾಜಿ ಶಾಸಕರು ತಮ್ಮ ಮನೆಗೆ ಮುಖಂಡರು ಕಾರ್ಯಕರ್ತರು ಸಭೆಗೆ ಬರಬೇಕೆಂದು ತಿಳಿಸುವುದರ ಮೂಲಕ ಭಟ್ಕಳ ದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತನ್ನ ಪ್ರತ್ಯೇಕ ಬಣದ ರಾಜಕೀಯ ನಡೆಸುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದರು.

ನಂತರ ಮಾತನಾಡಿದ ಮಾಜಿ ಶಾಸಕ ಜೆ.ಡಿ.ನಾಯ್ಕ ‘ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕೇವಲ ಓರ್ವ ಮಾಜಿ ಶಾಸಕರ ಪೋಟೋ ಬಳಕೆಯ ಬಗ್ಗೆ ಸಂತೋಷ ನಾಯ್ಕ ಅವರಲ್ಲಿ ಖಂಡಿಸಿದ್ದು, ಪಕ್ಷದಿಂದ ಆಯ್ಕೆಯಾಗಿ ಗೆದ್ದ ಮಾಜಿ ಶಾಸಕ ಹಾಗೂ ಮಾಜಿ ಮಂತ್ರಿಗಳೆಲ್ಲರ ಪೋಟೊ ಬಳಸಿ ಖರ್ಚು ವೆಚ್ಚಗಳನ್ನು ಎಲ್ಲರಿಗೂ ಹಾಕಿ ಎಂದು ತಾಕೀತು ಮಾಡಿದರು.
ಈಗ ಹೊಸಗಾಗಿ ಪಕ್ಷದ ಬ್ಲಾಕ್ ಅಧ್ಯಕ್ಷರ ನೇಮಕ ಬದಲಾವಣೆಯ ಬಗ್ಗೆ ನಮ್ಮ ಆಕ್ಷೇಪ ಇಲ್ಲ ಆದರೆ ಏಕಾಏಕಿ ಯಾವುದೇ ಸೂಚನೆ ಅಥವಾ ಈ ಹಿಂದಿನ ಬ್ಲಾಕ ಅಧ್ಯಕ್ಷರಿಂದಾಗ ತಪ್ಪುಗಳ ಬಗ್ಗೆ ವಿವರಿಸಿ ನೋಟಿಸ್ ನೀಡಿ ಬದಲಾವಣೆ ಮಾಡಬಹುದಾಗಿತ್ತು. ಈ ಪ್ರಕ್ರಿಯೆಗೆ ನನ್ನ ಖಂಡನೆಯಿದೆ. ಪಕ್ಷ ಸಂಘಟನೆಯಲ್ಲಿ ಹೊಡೆದಾಟ ಕೈ ಕಾಲು ಮೀಲಾಯಿಸುವ ಹಂತದಲ್ಲಿ ನಾನು ಹೋಗುವುದಿಲ್ಲ ಕಾರಣ ಅದು ಪಕ್ಷ ಸಂಘಟನೆಯ ಹಾದಿಯಲ್ಲ. ಈಗಿನ ರಾಜಕೀಯ ನೀತಿ ರೀತಿಯಲ್ಲಿ ಸಾರ್ವಜನಿಕ ಜೀವನದಿಂದ ನಿವ್ರತ್ತಿ ಪಡೆಯುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ ಹಾಗೂ ಇದು ನನ್ನ ಕೊನೆಯ ಚುನಾವಣೆ ಎಂದ ಅವರು ಬ್ಲಾಕ್ ಅಧ್ಯಕ್ಷರಾಗಿದ್ದ ಸಂತೋಷ ನಾಯ್ಕ ಅವರ ಬದಲಾವಣೆಯ ವಿಧಾನ ಸರಿಯಿಲ್ಲ ಹಾಗೂ ಚುನಾವಣಾ ವೇಳೆಯಲ್ಲಿ ಬ್ಲಾಕ್ ಅಧ್ಯಕ್ಷರ ಬದಲಾವಣೆ ಮಾಡದಂತೆಯೂ ಸಹ ಕೆ.ಪಿ.ಸಿ.ಸಿ. ಅಧ್ಯಕ್ಷರ ಜೊತೆಗೆ ಮಾತನಾಡಿದ್ದೇನೆ. ಸಂತೋಷ ನಾಯ್ಕ ಅವರಿಗೆ ಆದ ರೀತಿಗೆ ಅವರ ಬೇಸರಕ್ಕೆ ನಮ್ಮೆಲ್ಲರ ಸಹ ಮತವಿದೆ. ಪಕ್ಷದ ಚೌಕಟ್ಟು ಮೀರಿ ಈ ಬ್ಲಾಕ್ ಅಧ್ಯಕ್ಷರ ಬದಲಾವಣೆ ನಡೆದಿದೆ ಎಂದು ನೇರವಾಗಿ ಆರೋಪಿಸಿದರು.

ಈ ಸಂಧರ್ಭದಲ್ಲಿ ಪಕ್ಷದ ಮುಖಂಡರಾದ ಮಹಾಬಲೇಶ್ವರ ನಾಯ್ಕ, ಸತೀಶ ಕುಮಾರ ನಾಯ್ಕ, ಸುಲೇಮಾನ್, ಟಿ.ಡಿ.ನಾಯ್ಕ, ಮಹೇಶ ನಾಯ್ಕ ಮುಂತಾದವರು ಇದ್ದರು.

error: