March 26, 2024

Bhavana Tv

Its Your Channel

ಭಟ್ಕಳ ತಾಲೂಕು ಆಶಾ ಕಾರ್ಯಕರ್ತೆಯರ ಸಮಾವೇಶ

ಭಟ್ಕಳ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತಯರ ಸಂಘ (ರಿ) ಇದರ ವತಿಯಿಂದ ಭಟ್ಕಳ ತಾಲೂಕಿನ ಶಿರಾಲಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಆಶಾ ಕಾರ್ಯಕರ್ತೆಯರ ಸಮಾವೇಶ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಂಗಾಧರ ಬಡಿಗೇರ, ರಾಜ್ಯ ಆಶಾಕಾರ್ಯಕರ್ತಯರ ಸಂಘಟಿತ ಹೋರಾಟದಿಂದಾಗಿ ಆಶಾ ಕಾರ್ಯಕರ್ತೆಯರು ಪಡೆಯುತ್ತಿದ್ದ ಪ್ರೋತ್ಸಾಹ ಧನ ರೂ. 500 ರಿಂದರೂ. 5000ಕ್ಕೆ ಏರಿಕೆಯಾಗಿದೆ. ಆಶಾ ಕಾರ್ಯಕರ್ತಯರ ಬಗ್ಗೆ ಸರಕಾರದ ನಿರ್ಲಕ್ಷ್ಯ ಮುಂದುವರೆದಿದ್ದು ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ಆರ್‌ಸಿಎಚ್ ಪೋರ್ಟಲ್‌ನಿಂದಾಗಿ ಆಶಾ ಕಾರ್ಯಕರ್ತೆಯರಿಗೆ ದುಡಿದಷ್ಟು ಹಣ ದೊರೆಯುತ್ತಿಲ್ಲ. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರ ಕುಟುಂಬಗಳ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಸರಕಾರ ಕೂಡಲೇ ಆಶಾ ಕಾರ್ಯಕರ್ತೆಯರಿಗೆ ರೂ. 12 ಸಾವಿರ ಮಾಸಿಕ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಭಟ್ಕಳದಲ್ಲಿ ನೂತನ ಸಮಿತಿ:
ಆಶಾ ಕಾರ್ಯಕರ್ತೆಯರ ಭಟ್ಕಳ ತಾಲೂಕು ಸಮಿತಿಯನ್ನು ರಚಿಸಲಾಗಿದ್ದು, ಅನಿತಾ ರಾಜಕುಮಾರ ಅಧ್ಯಕ್ಷರಾಗಿ, ಉಪಾಧ್ಯಕ್ಷರುಗಳಾಗಿ ದೀಪಾ ಮೊಗೇರ, ರೇಖಾ ಆಜಾರಿ, ಸುಶೀಲಾ ಖಾರ್ವಿ, ಪದ್ಮಾವತಿ ನಾಯ್ಕ, ಗಾಯಿತ್ರಿ ನಾಯ್ಕ, ಕಾರ್ಯದರ್ಶಿಯಾಗಿ ಜಯಂತಿ ಮಿಂಚಿ, ಜಂಟಿ ಕಾರ್ಯದರ್ಶಿಗಳಾಗಿ ಚಂದ್ರಾವತಿ, ಜಲಂಧರಿ ಚಿತ್ತಾಪುರ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶೈನಾಝ್ ಮೋಮಿನ್, ನಾಗರತ್ನ, ಶೋಭಾ, ನಿರ್ಮಲಾ, ಜಯಲಕ್ಷ್ಮೀ, ಕುಸುಮಾ, ಪದ್ಮಾವತಿ ಅವರನ್ನು ಆಯ್ಕೆ ಮಾಡಲಾಯಿತು.

error: