April 24, 2024

Bhavana Tv

Its Your Channel

ರಾಜ್ಯೋತ್ಸವ ಮಾಸದಲ್ಲಿ ಹಲವು ವಿಶಿಷ್ಟ ಕಾರ್ಯಕ್ರಮ ಸಂಘಟಿಸಿ ಎಲ್ಲರ ಗಮನ ಸೆಳೆದ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್

ಕಾರ್ಯಕ್ರಮ ಸಂಘಟನೆಯಲ್ಲಿ ಸಹಕರಿಸಿದವರಿಗೆ ಭಟ್ಕಳ ತಾಲೂಕು ಕಸಾಪದಿಂದ ಕೃತಜ್ಞತೆ.

ಭಟ್ಕಳ.: ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ರಾಜ್ಯೋತ್ಸವ ಮಾಸದಲ್ಲಿ ವಿಶಿಷ್ಟ ಕಾರ್ಯಕ್ರಮಗಳ ಸಂಘಟಿಸಿ ಎಲ್ಲರ ಗಮನ ಸೆಳೆದಿದೆ.
ರಾಜ್ಯೋತ್ಸವ ಮಾಸವಾದ ನವೆಂಬರ ತಿಂಗಳಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಪರಿಕಲ್ಪನೆಯ ಅಡಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕು ಘಟಕಗಳ ಮೂಲಕ ನವೆಂಬರ ಮಾಸದುದ್ದಕ್ಕೂ ಪ್ರತಿದಿನ ಕನ್ನಡದ ಕಾರ್ಯಕ್ರಮಗಳನ್ನು ಸಂಘಟಿಸಿತ್ತು. ಇದರ ಅಡಿಯಲ್ಲಿ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂದರ್ಭೋಚಿತ ಮತ್ತು ಸಕಾಲಿಕವಾದ ಎಂಟು ವಿವಿಧ ಕಾರ್ಯಕ್ರಮ ಸಂಘಟಿಸಿ ಶಾಲಾ ಕಾಲೇಜುಗಳಲ್ಲಿ, ಕನ್ನಡದ ಮನಸುಗಳಲ್ಲಿ ಕನ್ನಡದ ಕಂಪನ್ನು ಪಸರಿಸುವಲ್ಲಿ ಯಶಸ್ವಿಯಾಗಿದೆ.
ತಾಲೂಕಿನ ಶ್ರೀವಲಿ ಪ್ರೌಢಶಾಲೆಯಲ್ಲಿ ಕನ್ನಡ ನಾಡುನುಡಿಗೆ ಸಂಬAಧಿಸಿದ ಸಮೂಹ ಗೀತ ಗಾಯನ ಸ್ಪರ್ಧೆ, ಜನತಾ ವಿದ್ಯಾಲಯ ಮುರ್ಡೇಶ್ವರದ ಸಹಯೋಗದಲ್ಲಿ ಕನಕದಾಸ ಜಯಂತಿ ಆಚರಣೆ, ಸರ್ಕಾರಿ ಪ್ರೌಢಶಾಲೆ ಕುಂಟವಾಣಿಯಲ್ಲಿ ಸುಂದರ ಕೈಬರೆಹ ಸ್ಪರ್ಧೆ ಮತ್ತು ದಾಸವಾಣಿ ಗಾಯನ ಸ್ಪರ್ಧೆ, ಸರ್ಕಾರಿ ಪ್ರೌಢಶಾಲೆ ಬೆಳಕೆಯಲ್ಲಿ ಕನ್ನಡ ನಾಡು-ನುಡಿ ವಿಷಯದ ಪ್ರಬಂಧ ಸ್ಪರ್ಧೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ದಿ ನ್ಯೂ ಇಂಗ್ಲೀಷ್ ಪ.ಪೂ.ಕಾಲೇಜಿನಲ್ಲಿ ಏಕತಾ ಸಪ್ತಾಹದ ಭಾಷಾ ಸೌಹಾರ್ಧತಾ ದಿನದ ಅಂಗವಾಗಿ ಬಹುಭಾಷಾ ಕವಿಗೋಷ್ಠಿ, ಏಕತಾ ಸಪ್ತಾಹದ ಸಾಂಸ್ಕೃತಿಕ ಏಕತಾ ದಿನದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ, ಭುವನೇಶ್ವರಿ ಕನ್ನಡ ಸಂಘ ಆಸರಕೇರಿಯ ಸಹಯೋಗದಲ್ಲಿ ಮುರ್ಡೇಶ್ವರ ಮಂಜುನಾಥ ಅವರ ಕವನ ಸಂಕಲನ ಮತ್ತು ಪ್ರಬಂಧ ಸಂಕಲನ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ,ದುರ್ಗಾಪರಮೇಶ್ವರಿ ಪ್ರೌಢಶಾಲೆ ಅಳ್ವೆಕೋಡಿಯ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಕನ್ನಡ ನಾಡು ನುಡಿ ಸಂಬAಧಿತ ರಸಪ್ರಶ್ನೆ ಸ್ಪರ್ಧೆ ಹೀಗೆ ನವೆಂಬರ ಮಾಸದಲ್ಲಿ ಎಂಟು ವಿಶಿಷ್ಟ ಹಾಗೂ ವೈವಿದ್ಯಮಯ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದೆ.
ಈ ಎಲ್ಲ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಕಸಾಪ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆ, ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ಜಾರ್ಜ ಫರ್ನಾಂಡೀಸ್, ಗೌರವ ಕೋಶಾಧ್ಯಕ್ಷ ಮರ್ತುಜಾ ಹುಸೇನ್, ಹಿರಿಯ ಸಾಹಿತಿಗಳಾದ ಡಾ. ಸಯ್ಯದ ಝಮಿರುಲ್ಲಾ ಷರೀಫ್, ಡಾ.ಆರ್.ವಿ.ಸರಾಫ್, ಮಾನಾಸುತ, ನಾರಾಯಣ ಯಾಜಿ, ಶ್ರೀಧರ ಶೇಟ್ ಶಿರಾಲಿ ಹಾಗೆಯೆ ಎಲ್ಲ ಹಿರಿ-ಕಿರಿಯ ಸಾಹಿತಿಗಳು, ಎಂ.ಪಿ.ಬAಢಾರಿ, ನಾರಾಯಣ ನಾಯ್ಕ, ಸುರೇಶ ಮುರ್ಡೇಶ್ವರ, ಪೆಟ್ರಿಕ ಟೆಲ್ಲಿಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೇವಿದಾಸ ಮೊಗೇರ, ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರುಗಳು, ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕ ಬಂಧುಗಳು, ವಿವಿಧ ಸಂಘ ಸಂಸ್ಥೆಗಳು, ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ, ಭುವನೇಶ್ವರಿ ಕನ್ನಡ ಸಂಘ, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಎಲ್ಲ ಕನ್ನಡದ ಮನಸುಗಳ ಪ್ರೀತಿಯ ಮಾರ್ಗದರ್ಶನ ಮತ್ತು ಸಹಕಾರವು ಬಹುಮುಖ್ಯವಾಗಿದೆ. ಕನ್ನಡದ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಕನ್ನಡ ಸಾಹಿತ್ಯ ಪರಿಷತ್ತಿನ ಭಟ್ಕಳ ತಾಲೂಕು ಘಟಕದ ಪರವಾಗಿ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಕೃತಜ್ಞತೆ ತಿಳಿಸಿದ್ದಾರೆ. ಎಲ್ಲರ ಪ್ರೀತಿಯ ಸಹಕಾರ ಕನ್ನಡದ ಕೆಲಸ ಮಾಡಲು ನಮ್ಮ ಕಸಾಪ ಘಟಕಕ್ಕೆ ಉತ್ಸಾಹವನ್ನು ತುಂಬಿದೆ. ಈ ಹಿಂದಿನ ಅವಧಿಯಲ್ಲಿ ಭಟ್ಕಳ ತಾಲೂಕು ಪರಿಷತ್ತಿಗೆ ಅತಿಹೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸಿದ ಕಾರಣಕ್ಕಾಗಿ “ಸಾಹಿತ್ಯ ಸಾರಥ್ಯ” ಎಂಬ ಜಿಲ್ಲಾ ಮಟ್ಟದ ಪ್ರಶಸ್ತಿ ಬಂದಿರುವುದಕ್ಕೂ ಕೂಡ ಎಲ್ಲರ ಸಹಕಾರವೇ ಕಾರಣ. ಆ ಪ್ರಶಸ್ತಿಯು ನಮ್ಮ ತಾಲೂಕಿನ ಎಲ್ಲಕನ್ನಡದ ಮನಸುಗಳಿಗೆ ಸಂದ ಪ್ರಶಸ್ತಿಯಾಗಿದೆ. ಇನ್ನು ಮುಂದೆಯೂ ಕೂಡ ಕನ್ನಡಪರ ಕೆಲಸಗಳನ್ನು ಮಾಡಲು ಎಲ್ಲರ ಸಲಹೆ ಸೂಚನೆ, ಮಾರ್ಗದರ್ಶನ, ಸಹಕಾರ ಸದಾ ಇರಲಿ ಎಂದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಕೋರಿದ್ದಾರೆ.

error: