February 1, 2023

Bhavana Tv

Its Your Channel

ಜಿ.ಎಸ್.ಬಿ ವ್ಯಾಪಾರಸ್ಥರಿಗೆ ಉದ್ಯಮಶೀಲತೆ ಮಾಹಿತಿ ಶಿಬಿರ

ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಭಟ್ಕಳ ತಾಲೂಕಾ ಜಿ.ಎಸ್.ಬಿ ವ್ಯಾಪಾರಸ್ಥರಿಗೆ
ವ್ಯಾಪಾರ ಹಾಗೂ ಬಂಡವಾಳ ಹೂಡಿಕೆಯ ಕುರಿತು ವಿಶೇಷ ಶಿಬಿರವನ್ನು ಶ್ರೀ ಶಾಂತೇರಿ ಕಾಮಾಕ್ಷಿ ಸಭಾಗೃಹದಲ್ಲಿ ಆಯೋಜಿಸಲಾಯಿತು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾದ ಹುಬ್ಬಳ್ಳಿಯ ಖ್ಯಾತ ಉದ್ದಿಮೆದಾರ ಆರ್ಕಿಟೆಕ್ಟ್ ಆಗಿರುವ ಶ್ರೀ ಜಿತೇಂದ್ರ ನಾಯಕ “ತಂತ್ರಜ್ಞಾನ ಆಧಾರಿತ ಉದ್ದಿಮೆ – ಆಧುನಿಕ ವ್ಯಾಪಾರ” ದ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಭಟ್ಕಳ ತಾಲೂಕಾ ವ್ಯಾಪಾರಿ ಸಂಘದ ಅಧ್ಯಕ್ಷರಾದ ಶ್ರೀ ಶ್ರೀಧರ ವಸಂತ ಶಾನಭಾಗ ಮಾತನಾಡಿ 21ನೇ ಶತಮಾನದಲ್ಲಿ ಗ್ರಾಮೀಣ ಭಾಗದ ವ್ಯಾಪಾರಸ್ಥರು ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿಸುತ್ತಾ ವಿವಿಧ ಬಗೆಯ ನೂತನ ಉದ್ದಿಮೆಗಳನ್ನು ಪರಿಚಯಿಸಿದರು.
ತೆರಿಗೆ ಸಲಹಾಗಾರರೂ ಹಾಗೂ ಹಿರಿಯ ವಾಣಿಜ್ಯ ಉಪನ್ಯಾಸಕರಾದ ಶ್ರೀ ಮಂಜುನಾಥ ಪ್ರಭು ರವರು ಫ್ಯಾಮಿಲಿ ಬ್ಯುಸಿನೆಸ್,ಆದಾಯ ತೆರಿಗೆ, ಜಿ.ಎಸ್.ಟಿ ಕುರಿತು ಸವಿಸ್ತಾರ ಮಾಹಿತಿ ನೀಡಿದರು.
ಜಿ.ಎಸ.ಬಿ ಅಧ್ಯಕ್ಷರಾದ ಸುಬ್ರಾಯ ಕಾಮತ, ಮಹಿಳಾ ಸಮಿತಿಯ ಮುಖ್ಯಸ್ಥೆ ಶ್ರೀಮತಿ ನೀತಾ ಕಾಮತ, ಜಿ.ಎಸ.ಎಸ ಅಧ್ಯಕ್ಷರಾದ ಕಲ್ಪೇಶ ಪೈ,
ಗೌರವಾಧ್ಯಕ್ಷರಾದ ನರೇಂದ್ರ ನಾಯಕ, ಪದ್ಮನಾಭ ಪೈ, ಗಣಪತಿ ಪ್ರಭು, ಕಿರಣ ಶಾನಭಾಗ, ಸಮಾಜ ಪ್ರಮುಖರಾದ ಜಯಂತಿ ಪ್ರಭು, ಗೋಪಿನಾಥ ಪ್ರಭು, ಸಮಿತಿ ಸದಸ್ಯರಾದ ಗಿರಿಧರ ನಾಯಕ, ದೀಪಕ ನಾಯಕ, ಪ್ರವೀಣ ನಾಯಕ, ಕೃಷ್ಣಾನಂದ ಪ್ರಭು ಹಾಗೂ ಭಟ್ಕಳ-ಶಿರಾಲಿ-ಮುರ್ಡೇಶ್ವರ ಭಾಗದ ನೂರಾರು ವ್ಯಾಪಾರಸ್ಥರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀನಾಥ ಪೈ ಸ್ವಾಗತಿಸಿದರು, ಸಹಕಾರ್ಯದರ್ಶಿ ಗುರುದಾಸ ಪ್ರಭು ಕಾರ್ಯಕ್ರಮ ನಿರೂಪಿಸಿದರು.

About Post Author

error: