April 24, 2024

Bhavana Tv

Its Your Channel

ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ತುಕ್ಕು ಹಿಡಿದ ಸ್ಥಿತಿಯಲ್ಲಿ ನಿಂತಿರುವ 108 ಆಂಬುಲೆನ್ಸ್ :ಮುರುಡೇಶ್ವರಕ್ಕೆ ನೀಡಲು ಅಧಿಕಾರಿಗಳು ಹಿಂದೇಟು

ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಭಾಗದ ಜನರಿಗಾಗಿ ಕಾದಿರಿಸಿದ 108 ಆಂಬುಲೆನ್ಸ್, ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ತುಕ್ಕು ಹಿಡಿಯುತ್ತಿದೆ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಬೇರೆ ಆಸ್ಪತ್ರೆಗೆ ತೆರಳಲು ಖಾಸಗಿ ವಾಹನಕ್ಕೆ ದುಪ್ಪಟ್ಟು ಬೆಲೆ ತೆರಬೇಕಾಗುತ್ತಿದೆ. ಮುರುಡೇಶ್ವರ ಮಾವಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಆರು ಗ್ರಾಮ ಪಂಚಾಯಿತಿಗಳಿವೆ. ಈ ವ್ಯಾಪ್ತಿಯ ಜನರಿಗೆ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಚಿಕಿತ್ಸೆಗಾಗಿ ಭಟ್ಕಳಕ್ಕೆ ಧಾವಿಸಬೇಕಾಗುತ್ತದೆ. ಮುರುಡೇಶ್ವರ ವಿಶ್ವಪ್ರಸಿದ್ದ ಪ್ರವಾಸಿ ತಾಣ. ನಿತ್ಯ ಇಲ್ಲಿ ಸಾವಿರಾರು ಪ್ರವಾಸಿಗರೂ ಪ್ರತಿನಿತ್ಯ ಭೇಟಿ ನೀಡುತ್ತಾರೆ. ಸಮುದ್ರದ ಕಡಲಿಗೆ ಇಳಿಯುವ ಪ್ರವಾಸಿಗರು ಅಸ್ವಸ್ಥರಾದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಭಟ್ಕಳಕ್ಕೆ ಕರೆತರಲು 108 ವಾಹನವಿಲ್ಲ.
ಈ ಮೊದಲು ಮುರುಡೇಶ್ವರದಲ್ಲಿ ಒಂದು 108 ಆಂಬುಲೆನ್ಸ್ ವಾಹನ ಸೇವೆಯಲ್ಲಿತ್ತು. ಅದು ಶಿಥಿಲಾವಸ್ಥೆ ತಲುಪಿದ ಕಾರಣ ಆರು ತಿಂಗಳ ಹಿಂದೆ ಗುಜರಿಗೆ ಹಾಕಲಾಗಿತ್ತು. ಕಳೆದ ಜನವರಿಯಲ್ಲಿ ವೆಂಟಿಲೇಟರ್ ವ್ಯವಸ್ಥೆಯುಳ್ಳ ಹೊಸ 108 ಆಂಬುಲೆನ್ಸ್ ವಾಹನವನ್ನು ಕೇಂದ್ರ ಸರ್ಕಾರ ನೀಡಿತ್ತು. ಈ ಹೊಸ ವಾಹನ ಭಟ್ಕಳಕ್ಕೆ ಬಂದ ಮೇಲೆ ಹಳೆ ವಾಹನವನ್ನು ಮುರುಡೇಶ್ವರಕ್ಕೆ ನೀಡಲು ನಿರ್ಧರಿಸಲಾಗಿತ್ತು.
ಈ ನಿಟ್ಟಿನಲ್ಲಿ ಅಧಿಕಾರಿಗಳು ಇದಕ್ಕೆ ಕ್ರಮವಹಿಸದ ಕಾರಣ ಈ ವಾಹನ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಿಂತು ಹತ್ತು ತಿಂಗಳು ಕಳೆಯಿತು ವಾಹನದ ಒಂದೊAದು ಭಾಗವೂ ತುಕ್ಕು ಹಿಡಿಯುತ್ತಿದೆ.

ಮುರುಡೇಶ್ವರ ದಲ್ಲಿ ಸಾಕಷ್ಟು ಪ್ರವಾಸಿಗರು ಬರುತ್ತಿದ್ದು ಸಮುದ್ರಲ್ಲಿ ಈಜಲು ಹೋಗಿ ನೀರಿನಲ್ಲಿ ಕೊಚ್ಚಿ ಕೊಂಡು ಹೋಗುತ್ತಿದ್ದು ಪ್ರಾಣವನ್ನು ರಕ್ಷಣೆ ಮಾಡಲು ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಅವಶ್ಯಕತೆ ಇದ್ದು ತಾಲ್ಲೂಕಿನಲ್ಲಿ ಈಗ ಒಂದು ಮಾತ್ರ 108 ಕಾರ್ಯ ನಿರ್ವಹಿಸುತ್ತಿದೆ ಈಗಿರುವ ವಾಹನ ರೋಗಿಯನ್ನು ತುರ್ತು ಸಂದರ್ಭದಲ್ಲಿ ಬೇರೆ ಆಸ್ಪತ್ರೆಗಳಿಗೆ ತೆದೆದುಕೊಂಡು ಹೋದರೆ, ಇಲ್ಲಿ ಬದಲಿ ವಾಹನದ ಅನಿವಾರ್ಯತೆ ಇದೆ ಎಂದು ಪತ್ರಕರ್ತ ರಾಮಚಂದ್ರ ಕಿಣಿ ಹೇಳಿದ್ದಾರೆ.

error: