April 20, 2024

Bhavana Tv

Its Your Channel

ಭಟ್ಕಳದಲ್ಲಿ ಫೆ. 3 ರಿಂದ 9ರವರೆಗೆ ಮಕ್ಕಳ ಪುಸ್ತಕ ಮೇಳ

ಭಟ್ಕಳ: ಇದಾರ ಎ ಆ ಅತ್ಪಾಲ್ ಸಂಘಟನೆಯ ವತಿಯಿಂದ ಫೆ. 3 ರಿಂದ 9ರವರೆಗೆ ಭಟ್ಕಳ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಮಕ್ಕಳ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘಟನೆಯ ಪ್ರಮುಖ ಮೌಲಾನಾ ಗಾಝಿ ನದ್ವಿ, ಮಕ್ಕಳನ್ನು ಪುಸ್ತಕದೆಡೆಗೆ ಕರೆ ತರುವ ನಿಟ್ಟಿನಲ್ಲಿ ಕಳೆದ 7 ವರ್ಷಗಳಿಂದ ನಮ್ಮ ಪ್ರಯತ್ನ ನಡೆ- ಯುತ್ತಿದ್ದು, ಪುಸ್ತಕ ಮೇಳ ಅದರ ಭಾಗವಾಗಿದೆ. ಕನ್ನಡ, ಉರ್ದು, ಅರೇಬಿಕ್, ಇಂಗ್ಲಿಷ್ ಇತ್ಯಾದಿ ಭಾಷೆಗಳ ಮಕ್ಕಳ ಸಾಹಿತೈ ಕೃತಿಗಳನ್ನು ಮೇಳದಲ್ಲಿ ಪಡೆದುಕೊಳ್ಳಬಹುದಾಗಿದೆ. ದೇಶದ ವಿವಿದೆಡೆಯಿಂದ ಮಕ್ಕಳ ಪುಸ್ತಕಗಳ ಪ್ರಕಾಶಕರು, ಮಕ್ಕಳ ಸಾಹಿತ್ಯ ಬರಹಗಾರರು, ಕವಿಗಳು, ಮಕ್ಕಳ ನಿಯತಕಾಲಿಕಗಳ ಸಂಪಾದಕರು ಪುಸ್ತಕ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೇಳದಲ್ಲಿ ಪುಸ್ತಕಗಳ ಜೊತೆಗೆ ಮಕ್ಕಳ ಪ್ರತಿಭಾ ಪ್ರದರ್ಶನ, ಚಿತ್ರಕಲೆ, ನಾಟಕ, ಆಟೋಟಗಳಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ವಿಜೇತರಿಗೆ ಪ್ರತಿ ದಿನ ಬಹುಮಾನವನ್ನು ವಿತರಿಸಲಾಗುತ್ತದೆ. ಪ್ರತಿ 200 ರುಪಾಯಿ ಮೌಲ್ಯದ ಪುಸ್ತಕ ಖರೀದಿಗೆ ಒಂದು ಟೋಕನ್ ನೀಡಲಾಗುತ್ತಿದ್ದು, ಮಕ್ಕಳು ಆಟವಾಡಲು ಪ್ರವೇಶ ನೀಡಲಾಗುತ್ತದೆ. ಭಟ್ಕಳದಲ್ಲಿ ನಡೆಸಲಾಗುವ ಈ ಮಕ್ಕಳ ಪುಸ್ತಕ ಮೇಳ ದೇಶದಲ್ಲಿಯೇ ಅನನ್ಯವಾಗಿದ್ದು, ದೇಶದ ವಿವಿಧ ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ. ಭಟ್ಕಳ ತಾಲೂಕಿನ ಸುತ್ತಮುತ್ತಲಿನ ಜನರು ಈ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ವಿನಂತಿಸಿಕೊAಡರು. ಆರಂಭದಲ್ಲಿ ಮಕ್ಕಳನ್ನು ಮೊಬೈಲ್ ಫೋನ್ ಲೋಕದಿಂದ ಪುಸ್ತಕದ ಕಡೆಗ ಎಳೆತಂದು ಜ್ಞಾನವನ್ನು ವೃದ್ಧಿಸುವ ನಿಟ್ಟಿನಲ್ಲಿ ‘ಫೂಲ್’ ಹೆಸರಿನ ಉರ್ದು ಮಕ್ಕಳ ನಿಯತಕಾಲಿಕದಿಂದ ಆರಂಭಿಸಲಾಯಿತು. ನಂತರ ಮಕ್ಕಳ ಗ್ರಂಥಾಲಯ, ಯೂ ಟ್ಯೂಬ್ ಸ್ಟುಡಿಯೋ ಸಹ ಮಕ್ಕಳನ್ನು ಆಕರ್ಷಿಸುತ್ತಿದೆ. ಮಕ್ಕಳ ಪಾಲಕರು ಈ ಬಗ್ಗೆ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು. ಮೌಲಾನಾ ಸಮಾನ್ ಖಲೀಫಾ ನದ್ವಿ, ಮೌಲಾನಾ ಮೌಝಾಮ್ ಶಾಬಂದ್ರಿ ನದ್ವಿ, ಮೌಲಾನಾ ಸವೂದ್ ಸಿಂಗೇಟಿ ನದ್ವಿ ಉಪಸ್ಥಿತರಿದ್ದರು.

error: