March 29, 2024

Bhavana Tv

Its Your Channel

ಮಟ್ಕಾ ಎಂಬ ಮಾಯಾ ಬಜಾರ್‌ಗೆ ಬಲಿಯಾಗುತ್ತಿರುವ ಭಟ್ಕಳ, ಭಟ್ಕಳ ನಗರ ಭಾಗದ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಜರುಗುತ್ತಿದೆ ಓಸಿ ಆಟ

ಭಟ್ಕಳ: ಅಕ್ರಮ ಚಟುವಟಿಕೆಗಳಲ್ಲಿ ಒಂದಾದ ಮಟ್ಕಾ ದಂಧೆ ಭಟ್ಕಳ ತಾಲ್ಲೂಕಿನ ಗೊರಟೇ ಕ್ರಾಸ್ ದಿಂದ ಬೈಲೂರು ಕ್ರಾಸ್ ತನಕವೂ ನಿರಂತರವಾಗಿ ಯಾವುದೇ ಅಂಜಿಕ ಅಳಕು ಇಲ್ಲದೇ ಇಲಾಖೆ ಭಯವಿಲ್ಲದೆ ರಾಜ್ ರೋಷವಾಗಿ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ.

ಬೆಳಿಗ್ಗೆ ಇಂದ ಆರಂಭವಾಗುವ ಜೂಜಾಟದ ಚಟುವಟಿಕೆ, ತಡರಾತ್ರಿಯವರೆಗೂ ಚಾಲ್ತಿಯಲ್ಲಿರುತ್ತದೆ. ಸರ್ಪನಕಟ್ಟೇ,ಹಳೆ ಬಸ್ ಸ್ಟಾಂಡ್,ಸAಶುದ್ದೀನ್ ಸರ್ಕಲ್, ಬಂದರ್,ಶಿರಾಲಿ ಮುಡೇಶ್ವರ ಬಾಗದಲ್ಲಿ ಮುಗ್ಧ ಜನರ ದಾರಿತಪ್ಪಿಸುವ ಕೆಲಸವಾದಂತಹ ಅಕ್ರಮ ಮಟ್ಕಾ ಅಡ್ಡೆಗಳು ಬೀದಿಗೆ ಒಂದರAತೆ ತಲೆಯೆತ್ತಿ ನಿಂತಿವೆ. ಬಹುತೇಕವಾಗಿ ಗೂಡಂಗಡಿ,ಪಾನ್ ಬೀಡಾ ಶಾಪ್ ನಂಥ ಸಣ್ಣಪುಟ್ಟ ಅಂಗಡಿಗಳಲ್ಲಿ ಈ ಆಟಗಳು ನಡೆಯುತ್ತವೆ. ಆಟದಂಗಡಿಗಳಲ್ಲಿ ಇವುಗಳ ಖರೀದಿಗಿಂತಲೂ ಆಟಕ್ಕಾಗಿ ಹಣ ಹಾಕಲು ಬರುವವರೇ ಹೆಚ್ಚು. ‘ವಾಟ್ಸ್ ಆಪ್ ಗುಂಪುಗಳು ಇತ್ತೀಚಿಗೆ ಈ ದಂಧೆಗೆ ಬಳಕೆಯಾಗುತ್ತಿವೆ ಸಂಖ್ಯೆಗೆ ಇಂತಿಷ್ಟು ಎಂದು ಹಣವನ್ನೂ ‘ಪೇಟಿಎಂ’ನAಥ ನಗದು ವರ್ಗಾವಣೆ ಆಪ್‌ಗಳಿಂದ ವರ್ಗಾಯಿಸಿಕೊಳ್ಳಲಾಗುತ್ತದೆ. ಭಟ್ಕಳ ತಾಲ್ಲೂಕಿನಲ್ಲಿ ಈ ಅಕ್ರಮ ದಂಧೆ ನಿಂತಿಲ್ಲ ಪ್ರತಿ ವರ್ಷವೂ ಪೊಲೀಸ್ ಇಲಾಖೆ ಓಸಿ, ಮಟ್ಕಾ ಆಡಿದವರ ಮೇಲೆ ಕಾರ್ಯಾಚರಣೆ ನಡೆಸಿ, ನೂರಾರು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸುತ್ತಿದೆ. ಕಾರ್ಯಾಚರಣೆಯ ವೇಳೆ ಲಕ್ಷಗಟ್ಟಲೆ ಹಣವನ್ನು ಜಪ್ತಿಪಡಿಸಿಕೊಂಡು,ಮುAದೆ ಇಂಥ ಚಟುವಟಿಕೆಗಳನ್ನು ನಡೆಸದಂತೆ ಎಚ್ಚರಿಕೆಯನ್ನೂ ನೀಡುತ್ತದೆ ಹೀಗಿದ್ದರೂ ತಾಲ್ಲೂಕಿನಲ್ಲಿ ಈ ಅಕ್ರಮ ದಂಧೆ ನಿಂತಿಲ್ಲ.
ಈ ಅಕ್ರಮ ಒಸಿ ಆಟವನ್ನು ನಿಯಂತ್ರಿಸಲು ನಿರ್ಗಮಿತ ಎಸ್ ಪಿ ಡಾ.ಸುಮನ್ ಪೆನ್ನೇಕರ ಅವರು ಸಾಕಷ್ಟು ಪ್ರಯತ್ನಿಸಿ ಹತೋಟಿಯಲ್ಲಿಟ್ಟಿದ್ದರು ಬಾಲ ಮುದುರಿಕೊಂಡು ತೆಪ್ಪಗಿದ್ದರು. ಪುನಃ ಮಟ್ಕಾ ಅಡ್ಡೆಗಳು ತಲೆಯೆತ್ತಿದ್ದು ಇದರಿಂದಾಗಿ ಸಾರ್ವಜನಿಕರು ನಷ್ಟ ಅನುಭವಿಸುತ್ತಿದ್ದಾರೆ.
ಈ ಅಕ್ರಮ ಆಟಕ್ಕೆ ಬಲಿಯಾಗುತ್ತಿರುವ ಬಹುತೇಕ ಜನರು ಬಡವರಾಗಿದ್ದಾರೆ. ಪ್ರತಿನಿತ್ಯ ದುಡಿಯುವುದೇ 300-500 ರು. ಆದರೆ ಹೆಚ್ಚಿನ ಹಣದಾಸೆಗೆ ದುಡಿದ ಸಂಪೂರ್ಣ ಹಣವನ್ನು ಮಟ್ಕಾ ಆಟದಲ್ಲಿ ತೊಡಗಿಸಿ ಖಾಲಿ ಕೈಯಿಂದ ಮನೆಗೆ ಹಿಂತಿರುಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಸಾರ್ವಜನಿಕರ ದಿವಾಳಿ ಎಬ್ಬಿಸುವ ಮಟ್ಟಾ ದಂಧೆಯನ್ನು ನಿಯಂತ್ರಿಸಲು ಸಂಬAಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಮುಂದಾಗಬೇಕು ಇನ್ನಾದರೂ ಈ ಕುರಿತು ಎಚ್ಚರಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಪ್ರಜ್ಞಾವಂತರು ಸಲಹೆ ನೀಡುತ್ತಿದ್ದಾರೆ.

error: