April 18, 2024

Bhavana Tv

Its Your Channel

ಮುರುಡೇಶ್ವರದಲ್ಲಿ ಮಾರ್ಚ ಒಂದನೇ ತಾರೀಕಿನಂದು ಭಟ್ಕಳ ತಾಲೂಕಾ 10ನೇ ಸಾಹಿತ್ಯ ಸಮ್ಮೇಳನ.

ಭಟ್ಕಳ : ಭಟ್ಕಳ ತಾಲೂಕಾ 10ನೇ ಸಾಹಿತ್ಯ ಸಮ್ಮೇಲನವು ಇಲ್ಲಿನ ಮುರ್ಡೇಶ್ವರದ ಡಾ.ಆರ್.ಎನ್.ಶೆಟ್ಟಿ ಸಭಾಭವನದ ಡಾ.ಆರ್.ಎನ್.ಶೆಟ್ಟಿ ವೇದಿಕೆಯಲ್ಲಿ ನಡೆಯಲಿದೆ. ಮಾನಾಸುತ ಶಂಭು ಹೆಗಡೆ ಈ ಬಾರಿಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಮ್ಮೇಳನದ ದಿನ ಮುಂಜಾನೆ 8 ಗಂಟೆಗೆ ರಾಷ್ಟçಧ್ವಜಾರೋಹಣವನ್ನು ಮಾದೇವಿ ಮೊಗೇರ್ ಗ್ರಾ.ಪಂ.ಮಾವಳ್ಳಿ 1 ಅಧ್ಯಕ್ಷರು, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ನಾಡ ದ್ವಜಾರೋಹಣವನ್ನು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ನೆರವೇರಿಸಲಿದ್ದಾರೆ. ಈ ವೇಳೆ ರಾಘವೇಂದ್ರ ನಾಯ್ಕ, ಅಧ್ಯಕ್ಷರು ಮಾವಳ್ಳಿ 2, ಉಪಾಧ್ಯಕ್ಷೆ ನಾಗರತ್ನ ಮೊಗೇರ್, ಗ್ರಾ.ಪಂ.ಮಾವಳ್ಳಿ 1ರ ಉಪಾಧ್ಯಕ್ಷೆ ಸಬೀನಾ ಅಬ್ದುಲ ಸತ್ತಾರ ಸಯ್ಯದ ಉಪಸ್ಥಿತರಿರಲಿದ್ದಾರೆ. ನಂತರ 8.30ಕ್ಕೆ ಜನಪದ ಕಲಾ ತಂಡಗಳು, ವಿವಿಧ ಇಲಾಖೆಗಳ ಸ್ತಬ್ದಚಿತ್ರಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಮುರ್ಡೇಶ್ವರದ ಜನತಾ ವಿದ್ಯಾಲಯದಿಂದ ಹೊರಟು ಆರ್.ಎನ್.ಎಸ್. ಸಭಾಂಗಣವನ್ನು ತಲುಪಲಿದೆ. ಮೆರವಣಿಗೆಗೆ ಪೋಲೀಸ ಉಪಾಧೀಕ್ಷಕ ಶ್ರೀಕಾಂತ ಕೆ ಚಾಲನೆ ನೀಡಲಿದ್ದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ, ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಶಂಕ್ರಳ್ಳಿ, ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ರಮೇಶ ನಾಯ್ಕ ಉಪಸ್ಥಿತರಿರಲಿದ್ದಾರೆ. 10 ಗಂಟೆಗೆ ಸಮ್ಮೇಳನದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಡಾ.ಶ್ರೀಪಾಧ ಶೆಟ್ಟಿ ನೆರವೇರಿಸಲಿದ್ದು , ಶಾಸಕ ಸುನಿಲ ನಾಯ್ಕ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಆಶಯನುಡಿಗಳನ್ನಾಡಲಿದ್ದಾರೆ.
ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಶ್ರೀಪಾಧ ಕಾಮತ್ ದ್ವಾರವನ್ನು, ಕಾರ್ಮಿಕ ಇಲಾಖೆೆಯ ರಾಜ್ಯಪ್ರತಿನಿಧಿ ಸದಸ್ಯೆ ಶಿವಾನಿ ಶಾಂತಾರಾಮ ಕಿಶೋರ ನಾಯ್ಕ ದ್ವಾರವನ್ನು ಹಾಗೂ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್. ಶ್ರೀ ಮಂಜುನಾಥ ದೇವಾಡಿಗ ದ್ವಾರವನ್ನು ಉದ್ಘಾಟಿಸಲಿದ್ದಾರೆ. ಮುಡೇಶ್ವರ ಗ್ರಾಮೀನ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಸ್.ಕಾಮತ್ ಚಿತ್ರಕಲಾ ಪ್ರದರ್ಶನವನ್ನು, ಹಿರಿಯ ಸಾಹಿತಿ ಡಾ.ಆರ್.ವಿ ಸರಾಫ್ ಪುಸ್ತಕ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಧ್ವಜ ಹಸ್ತಾಂತರಿಸಲಿರುವ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶ್ರೀಧರ ಶೇಟ್ ಶಿರಾಲಿ, ಮುಖ್ಯ ಅತಿಥಿಗಳಾಗಿ ಮುರ್ಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಸತೀಶ ಆರ್. ಶೆಟ್ಟಿ, ತಹಸೀಲ್ದಾರ ಅಶೋಕ ಭಟ್, ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಪಿ.ಆರ್.ನಾಯ್ಕ, ಜಾರ್ಜ ಫರ್ನಾಂಡೀಸ್, ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಗೌರವ ಆಮಂತ್ರಿತರಾಗಿ ಯಕ್ಷರಕ್ಷೆಯ ಐ.ಆರ್.ಭಟ್, ಲಯನ್ಸ ಕ್ಲಬ್‌ನ ಅಧ್ಯಕ್ಷ ಎಂ.ವಿ.ಹೆಗಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಲ್ಲಾಸ ನಾಯ್ಕ, ಉಪಸ್ಥಿತರಿರಲಿದ್ದಾರೆ. ಈ ಸಂದರ್ಬದಲ್ಲಿ ಸಮ್ಮೇಳನಾಧ್ಯಕ್ಷ ಮಾನಾಸುತ ಅವರ ಪುಟ್ಟದೀಪ ಕವನ ಸಂಕಲನ, ಗಂಗಾಧರ ನಾಯ್ಕ ಅವರ ಭಾನುಭಾವ ಹನಿಗವಿತೆಗಳ ಸಂಕಲನ, ಶ್ರೀಧರ ಶೇಟ್ ಶಿರಾಲಿಯವರ ಕಾವ್ಯಜ್ಯೋತಿ ಬದುಕು ಬೆಲಗುವ ಬರಹಲ ಕೃತಿ, ಶಂಕರ ಕೆ.ನಾಯ್ಕ ಅವರ ನೆನಪುಗಳು ಕೃತಿಗಳು ಬಿಡುಗಡೆಗೊಳ್ಳಲಿವೆ. ಮಧ್ಯಾಹ್ನ 2 ರಿಂದ 3ಗಂಟೆಯವರೆಗೆ ವಿಚಾರಗೋಷ್ಠಿ ನಡೆಯಲಿದ್ದು. ಆರ್.ಎನ್.ಎಸ್.ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ದಿನೇಶ ಗಾಂವಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಭಟ್ಕಳದ ಐತಿಹಾಸಿಕ ಹಿನ್ನೆಲೆಯ ಕುರಿತು ಡಾ.ಭಾಗೀರತಿ ನಾಯ್ಕ ಹಾಗೂ ಭಟ್ಕಳ ತಾಲೂಕಿನ ಪ್ರವಾಸೊದ್ಯಮದ ಅಭಿವೃದ್ದಿಯ ಸಾಧ್ಯತೆ ಮತ್ತು ಸವಾಲುಗಳ ಕುರಿತು ವಿರೇಂದ್ರ ಶಾನಭಾಗ ವಿಷಯಮಂಡನೆ ಮಾಡಲಿದ್ದಾರೆ. ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ, ಆರ್.ಎನ್.ಎಸ್.ಪದವಿ ಕಾಲೇಜಿನ ಪ್ರಾಂಶುಪಾಲ ಸಂಜಯ ಕೆ.ಎಸ್., ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ ನಾಯಕ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಬ್ಬಿರ ದಫೇದಾರ ಇವರ ಗೌರವ ಉಪಸ್ಥಿತಿ ಇರಲಿದೆ. 3ಗಂಟೆಯಿAದ 4.30ರ ತನಕ ಕವಿಗೋಷ್ಠಿ ನಡೆಯಲಿದ್ದು ಪ್ರೊ.ಆರ್.ಎಸ್.ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕಿನ ಸುಮಾರು 26 ಕವಿಗಳು ಕವನ ವಾಚಿಸಲಿದ್ದಾರೆ. ಸಂಜೆ 4.30ರಿಮದ 5.30ರ ತನಕ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಸಂವಾದ ನಡೆಯಲಿದ್ದು ಮಾನಾಸುತರ ಕಾವ್ಯದ ಕುರಿತು ಪೂರ್ಣಿಮಾ ಕರ್ಕಿಕರ್, ಪ್ರಕಾಶನದ ಕುರಿತು ಪತ್ರಕರ್ತರಾದ ರಾಧಾಕೃಷ್ಣ ಭಟ್ ಮಾತನಾಡಲಿದ್ದಾರೆ. ವೇದಿಕೆಯಲ್ಲಿ ಹಿರಿಯ ಸಾಹಿತಿ ನಾರಾಯಣ ಯಾಜಿ, ಡಾ.ಆರ್.ನರಸಿಂÀ ಮೂರ್ತಿ, ಭಾವನಾ ವಾಹನಿಯ ಭವಾನಿಶಂಕರ ನಾಯ್ಕ ಇವರ ಗೌರವ ಉಪಸ್ಥಿತಿ ಇರಲಿದ್ದು ಸಂವಾದದಲ್ಲಿ ಪ್ರಾಂಸುಪಾಲರು, ಉಪನ್ಯಾಸಕರು, ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ. ಸಾಯಂಕಾಲ 5.30ಕ್ಕೆ ಸಮಾರೋಪ ಸಮಾರಂಭ ಮತ್ತು ಸನ್ಮಾನ ಸಮಾರಂಭ ನಡೆಯಲಿದ್ದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ ಸಮರೋಪ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮಂಕಾಳು ವೈದ್ಯ, ಜೆ.ಡಿ.ನಾಯ್ಕ, ಕಾಸ್ಕಾರ್ಡ ಬ್ಯಾಂಕ್‌ಮಾಜಿ ಮಾಜಿ ಉಪಾಧ್ಯಕ್ಷರು ಈಶ್ವರ ಎನ್,ನಾಯ್ಕ, ತಂಜೀಮ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲ ಶಾಬಂದ್ರಿ, ಆರ್.ಎನ್.ಎಸ್.ಸಮೂಹ ಸಂಸ್ಥೆಗಳ ನಿರ್ದೇಶಕ ನಾಗರಾಜ ಶೆಟ್ಟಿ, ಕರ್ನಾಟಕ ಜರ್ನಲಿಸ್ಟ ಯುನಿಯನ್ ಜಿಲ್ಲಾಧ್ಯಕ್ಷ ಮನಮೋಹನ ನಾಯ್ಕ,ಪತ್ರಕರ್ತರ ಸಮಗದ ಅಧ್ಯಕ್ಷ ವಿಷ್ಣು ದೇವಾಡಿಗ, ಸ್ಪಂದನ ಚಾರಿಟೇಬಲ್ ಟ್ರಸ್ಟನ ಅಧ್ಯಕ್ಷ ರಾಘವೇಂದ್ರ ನಾಯ್ಕ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಯಕ್ಷಗಾನ,ಸಮಾಜಸೇವೆ, ಶಿಕ್ಷಣ, ಕ್ರೀಡೆ, ವೈದ್ಯಕೀಯ ಮುಂತಾದ ಕ್ಷೇತ್ರದ ಸುಮಾರು 14 ಜನ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಸಾಯಂಕಾಲ 7ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕಿನ ಶಿಕ್ಷಕರ ಬಳಗದಿಂದ ಕಲೆಗೆ ಸಾವಿಲ್ಲ ಕಲಾವಿದನಿಗೆ ಸುಖವಿಲ್ಲ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಸಮ್ಮೇಳನವನ್ನು ವ್ಯವಸ್ಥಿತವಾಗಿ ಆಯೋಜಿಸಲು ಶಾಸಕ ಸುನೀಲ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಿಕೊಂಡಿದ್ದು ಸಹಾಯಕ ಆಯುಕ್ತರಾದ ಮಮತಾದೇವಿ ಜಿ.ಎಸ್. ಹಾಗೂ ತಹಶೀಲ್ದಾರ ಅಶೋಕ ಭಟ್ ಕಾರ್ಯಾಧ್ಯಕ್ಷರಾಗಿ ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ನಾಯ್ಕ, ಉಪಾಧ್ಯಕ್ಷರಾಗಿ ಮಾವಳ್ಳಿ 1 ಮತ್ತು 2ರ ಗ್ರಾ.ಪಂ.ಅಧ್ಯಕ್ಷರಾದ ಮಾದೇವಿ ಮೊಗೇರ, ರಾಘವೇಂದ್ರ ನಾಯ್ಕ ಡಾ.ಐ.ಆರ್.ಭಟ್, ಎಂ.ವಿ.ಹೆಗಡೆ, ಎಸ್.ಎಸ್.ಕಾಮತ್ ಮುರ್ಡೇಶ್ವರ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ ಮೊಗೇರ,ಕಾರ್ಯದರ್ಶಿಯಾಗಿ ನಾರಾಯಣ ನಾಯ್ಕ, ಸಯ್ಯದ ಗೌಸ ಮೊಹೀಯುದ್ದೀನ
ಕೊಶಾಧ್ಯಕ್ಷರಾಗಿ ಶ್ರೀಧರ ಶೇಟ್, ಸಂಘಟನಾ ಕಾರ್ಯದರ್ಶಿಗಳಾಗಿ ಎಂ.ಪಿ.ಭAಢಾರಿ, ಪ್ರಕಾಶ ಶಿರಾಲಿ, ಸದಸ್ಯರಾಗಿ ಸಂತೋಷ ಆಚಾರ್ಯ, ಗಜಾನನ ಶೇಟ್ಟಿ, ಫಿಲಿಪ್ ಅಲ್ಮೇಡ, ಡಾ.ಅಮೀನುದ್ದೀನ ಗೌಡ ಇದ್ದಾರೆ. ವಿವಿಧ ಜವಾಬ್ದಾರಿಗಲನ್ನು ನಿರ್ವಹಿಸಲು ಐ.ವಿ.ಹೆಗಡೆ, ನಾರಾಯಣ ನಾಯ್ಕ, ಮಂಜುಳಾ ಶಿರೂರು, ಪರಮೇಶ್ವರ ನಾಯ್ಕ, ಸುರೇಶ ಮುರ್ಡೆಶ್ವರ, ಜಯಶ್ರೀ ಆಚಾರ್ಯ, ನೇತ್ರಾವತಿ ಆಚಾರ್ಯ, ಮಂಜುಳಾ ಶಿರೂರು, ಸಂಜಯ ಗುಡಿಗಾರ, ಸಿ.ಡಿ.ಪಡುವಣಿಯರನ್ನೊಳಗೊಂಡ ವೇದಿಕೆ ನಿರ್ವಹಣಾ ಸಮಿತಿ, ಪ್ರಹ್ಲಾದ ನಾಂiÀiಕ, ಶಿವಾನಂದ ನಾಯಕ, ಜಯಂತ ಗೌಡ, ಘನಶ್ಯಾಮ ನಾಯ್ಕ, ಕೃಷ್ಣಮೂರ್ತಿ ಶೆಟ್ಟಿ, ಗಣೇಶ ನಾಯ್ಕ ಇವರನ್ನೊಳಗೊಂಡ ಮೆರವಣಿಗೆ ನಿರ್ವಹಣಾ ಸಮಿತಿ, ಅಶೋಕ ನಾಯ್ಕ, ವಾಸುದೇವ ಪೂಜಾರಿ, ಎಂ,ಎಸ್.ನಾಯ್ಕ, ವೆಂಕಟೇಶ ನಾಯ್ಕ,ಆಸರಕೇರಿ, ವಿನಾಯಕ ಚಿತ್ರಾಪುರ ಇವರನ್ನೊಳಗೊಂಡ ಊಟೋಪಚಾರ ಸಮಿತಿ, ಎಂ.ಪಿ.ಭAಢಾರಿ ಗಣಪತಿ ಕಾಯ್ಕಿಣಿ, ಉಮೇಶ ಕೆರೆಕಟ್ಟೆ, ರಾಘವೇಂದ್ರ ಗಾಯತೊಂಡೆ, ಮಾರುತಿ ನಾಯ್ಕ, ಶಿವರಾಮ ಬಳೇಗಾರ ಇವರನ್ನೊಳಗೊಂಡ ನಗರಾಲಂಕಾರ ಮತ್ತು ದ್ವಾರಗಳ ನಿರ್ವಹಣಾ ಸಮಿತಿ ರಚಿಸಿಕೊಂಡು ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಭಟ್ಕಳ ತಾಲೂಕಾ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, sಸಾಹಿತ್ಯಾಸಕ್ತರು ಹಾಗೂ ಎಲ್ಲ ಕನ್ನಡದ ಮನಸುಗಳು ಹಾಗೂ ಸಾಹಿತ್ಯಾಸಕ್ತರೆಲ್ಲರು ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಕೋರಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ, ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್, ಕಾರ್ಯಕಾರಿ ಸಮಿತಿ ಸದಸ್ಯ ಸಂತೋಷ ಆಚಾರ್ಯ ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ ಉಪಸ್ಥಿತರಿದ್ದರು.

ಸಮ್ಮೇಳನಾಧ್ಯಕ್ಷ ಮಾನಾಸುತ ಶಂಭು ಹೆಗಡೆಯವರ ಪರಿಚಯ:
ವೃತ್ತಿಯಲ್ಲಿ ಭಟ್ಕಳದ ಅರ್ಬನ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿರುವ ಮಾನಾಸುತ ಶಂಭುಹೆಗಡೆ ಪ್ರವೃತಿಯಲ್ಲಿ ಸಾಹಿತಿ. ಇವರ ಕಾವ್ಯನಾಮ ಮಾನಾಸುತ. ಇವರ ಕವನ ಮತ್ತು ಚುಟುಕುಗಳ ಜೇನಹನಿ, ಚುಟುಕುಬಳ್ಳಿ, ನಾಲ್ಕುಸಾಲು ಎಂಬ ಮೂರು ಕೃತಿಗಳು ಬಿಡುಗಡೆಗೊಂಡಿವೆ.
ಮಾಳ್ಕೋಡು ನಾರಾಯಣ ಹೆಗಡೆಯವರ ಅಸಂಖ್ಯಾತ ಅಪ್ರಕಟಿತ ಕೃತಿಗಳಲ್ಲಿ ಈ ವರೆಗೆ 10 ಕೃತಿಗಳನ್ನು ತಮ್ಮದೇ ಆದ ಶಾಂಭವಿ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಕವಿಯಾಗಿ ಸಾಹಿತಿಯಾಗಿ ಸಾಹಿತ್ಯ ವಲಯ ದಲ್ಲಿ ಗುರುತಿಸಿಕೊಂಡು ತಾಲೂಕು ಹಾಗು ಜಿಲ್ಲಾ ಮಟ್ಟದ ಸಮ್ಮೇಳನಗಳಲ್ಲಿ ಕವಿತೆಯನ್ನು ವಾಚಿಸಿದ್ದಾರೆ. ಎರಡು ಬಾರಿ ತಾಲೂಕು ಸಮ್ಮೇಳನಗಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದಾರೆ. ಈ ಬಾರಿ ಉಳವಿಯಲ್ಲಿ ನಡೆದ ಉ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಗೌರವ ಉಪಸ್ಥಿತಿ ಪಡೆದಿದ್ದಾರೆ.

error: