September 27, 2023

Bhavana Tv

Its Your Channel

ಹಾಡುವಳ್ಳಿ ಭೀಕರ ಕೊಲೆ ನಡೆದ ಸ್ಥಳಕ್ಕೆ ಆರೋಪಿಗಳನ್ನ ಕರೆತಂದ ಪೊಲೀಸರು

ಭಟ್ಕಳ ತಾಲೂಕಿನ ಹಾಡುವಳ್ಳಿ ಭೀಕರ ಕೊಲೆ ಪ್ರಕರಣಕ್ಕೆ ಸಂಬOಧಿಸಿದOತೆ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ನಂತರ ಪೊಲೀಸರು ಆರೋಪಗಳನ್ನು ಮನೆಗೆ ಕರೆದುಕೊಂಡು ಹೋಗಿ ಮನೆಯ ಕೋಣೆಯಲ್ಲಿನ ಮಹಡಿ ಮೇಲೆ ಬಚ್ಚಿಡಲಾಗಿದ್ದ ಕೊಲೆಗೆ ಬಳಸಿದ ಕತ್ತಿ, ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ. ನಂತರ ಘಟನೆಯ ಸ್ಥಳಕ್ಕೆ ತೆರಳಿ ಸ್ಥಳ ಮಹಜರು ನಡೆಸಿ ಕೊಲೆ ಪ್ರಕರಣಕ್ಕೆ ಸಂಬOಧಿಸಿದOತೆ ಆರೋಪಿಗಳ ಹತ್ತಿರ ಪೋಲಿಸರು ಹೆಚ್ಚಿನ ಮಾಹಿತಿಯನ್ನು ಪಡೆದು ಕೊಂಡಿದ್ದಾರೆ.
ಸ್ಥಳದಲ್ಲಿ ನೂರಾರು ಜನರು ಜಮಾ ಗೊಂಡು ಆರೋಪಗಳಿಗೆ ಹಿಡಿಶಾಪ ಹಾಕಿದರು. ನಾಲ್ವರ ಹತ್ಯಾ ಪ್ರಕರಣಕ್ಕೆ ಸಂಬOಧಿಸಿದOತೆ ಪ್ರಮುಖ ಆರೋಪಿ ವಿನಯ್ ಭಟ್, ಆತನ ತಂದೆ ಶ್ರೀಧರ ಭಟ್ ಬಂಧನದೊOದಿಗೆ ಒಟ್ಟು ಬಂಧಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಕೊಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಶಂಭು ಭಟ್ಟರ ಸೊಸೇ ವಿದ್ಯಾ ಭಟ್ಟರನ್ನು ಈಗಾಗಲೇ ಪೊಲೀಸರು ಬಂಧಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐ ಚಂದನ ಗೋಪಾಲ,ಪಿ.ಎಸ್.ಐ ಶ್ರೀಧರ ನಾಯ್ಕ ಮುಂತಾದವರು ಉಪಸ್ಥಿತಿತರಿದ್ದರು.

error: