March 25, 2024

Bhavana Tv

Its Your Channel

ಭಟ್ಕಳ ತಾಲೂಕಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ

ಭಟ್ಕಳ ತಾಲೂಕಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುರ್ಡೇಶ್ವರದ ಆರ್. ಎನ್. ಶೆಟ್ಟಿ ಸಭಾಭವನದ ಡಾ. ಆರ್. ಎನ್. ಶೆಟ್ಟಿ ವೇದಿಕೆಯಲ್ಲಿ ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಅವರು ಯಕ್ಷಗಾನದ ಶೈಲಿಯಲ್ಲಿ ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಭಟ್ಕಳದ ಜನತೆ ಅತ್ಯಂತ ಪ್ರೀತಿ, ವಿಶ್ವಾಸಕ್ಕೆ ಸಾಕ್ಷಿಯಾದವರು. ವೈರತ್ವವನ್ನು ವೈರತ್ವದಿಂದ ಮುಗಿಸಲು ಸಾಧ್ಯವಾಗುವುದಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ವೈರತ್ವ ಹೆಚ್ಚುತ್ತಿರುವುದು ಒಳ್ಳೆಯ ಲಕ್ಷಣವಲ್ಲ ಎಂದರು. ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂದ ಅವರು ಜಿಲ್ಲೆಯ ಯಾವುದೇ ಸಾಹಿತಿಗೆ ಪಂಪ ಪ್ರಶಸ್ತಿಯನ್ನು ನೀಡದಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಪಂಪ ಪ್ರಶಸ್ತಿಯನ್ನು ಜಿಲ್ಲೆಯ ಸಾಹಿತಿಯೋರ್ವರಿಗೆ ಕೊಡುವಂತೆ ಕಾರ್ಡ ಚಳವಳಿ ನಡೆಸುವುದು ಅನಿವಾರ್ಯ ಎಂದರು. ಭಟ್ಕಳದ ಮಲ್ಲಿಗೆ ಜಾಗತಿಕವಾಗಿ ಹೆಸರುವಾಸಿಯಾಗಿದ್ದು, ಮಲ್ಲಿಗೆ ರಕ್ತಸಿಕ್ತವಾಗಿರುವುದು ಬೇಸರದ ಸಂಗತಿಯಾಗಿದೆ ಇದು ಹೋಗಬೇಕು ಎಂದೂ ಅಭಿಪ್ರಾಯ ಪಟ್ಟರು.

ತಾಲೂಕಾ 10ನೇ ಕನ್ನಡ ಸಾಹಿತ್ಯ ಪರಿಷತ್ ಸರ್ವಾಧ್ಯಕ್ಷ ಮಾನಾಸುತ ಶಂಭು ನಾರಾಯಣ ಹೆಗಡೆ ತಮ್ಮ ಭಾಷಣದಲ್ಲಿ ಭಟ್ಕಳ ತಾಲೂಕು ದೇವಸ್ಥಾನ, ಮಸೀದಿ, ಚರ್ಚಗಳ ಬೀಡು, ಇದೊಂದು ಸೂಕ್ಷö್ಮ ಪ್ರದೇಶ ಎಂದು ಅನೇಕರು ಸುಖಾಸುಮ್ಮನೆ ಕಳಂಕ ತರುತ್ತಿದ್ದಾರೆ ಆದರೆ ನಮ್ಮ ಭಟ್ಕಳ ಸೌಹಾರ್ಧತೆಗೆ ಮಾದರಿಯ ತಾಲೂಕು ಎಂದು ಅಭಿಪ್ರಾಯಪಟ್ಟರು.
ಭಟ್ಕಳದ ಬಗ್ಗೆ ಮಾತನಾಡುವಾಗ ಮಲ್ಲಿಗೆ ಬಗ್ಗೆ ನೆನಪಾಗದೇ ಇರದು. ಅನೇಕ ಹೂವುಗಳಲ್ಲಿ ಅತ್ಯಂತ ಪರಿಮಳಯುಕ್ತ ಹೂವು ಅಂದರೆ ಅದು ಭಟ್ಕಳ ಮಲ್ಲಿಗೆ, ಬಹುಬೇಡಿಕೆಯ ಭಟ್ಕಳ ಮಲ್ಲಿಗೆ ಪ್ರತಿಯೊಬ್ಬ ಹೆಣ್ಣು ಕೂಡಾ ಬೆಲೆ ಎಷ್ಟೇ ಇರಲಿ ಅದನ್ನು ತನ್ನ ಮುಡಿಗೇರಿಸುವ ತವಕದಲ್ಲಿ ಇರುತ್ತಾಳೆ. ಮದುವೆ ಸಮಾರಂಭಕ್ಕAತೂ ಈ ಹೂವು ಬೇಕೇ ಬೇಕು. ಆದರೆ ಇತ್ತಿಚಿಗೆ ಅದನ್ನು ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಆ ಪ್ರದೇಶದಲ್ಲೆಲ್ಲ ಈಗ ಆಕಾಶ ಎತ್ತರಕ್ಕೆ ಕಟ್ಟಡಗಳು ಎದ್ದು ನಿಂತೆವೆ. ಭಟ್ಕಳದ ಮಣ್ಣಿನಲ್ಲಿ ಬೆಳೆದ ಮಲ್ಲಿಗೆಗೆ ಮಾತ್ರ ಇಷ್ಟೋಂದು ಪರಿಮಳ. ಭಟ್ಕಳದ ಹೆಸರು ಪ್ರಸಿದ್ಧಿಯಾಗಲು ಕಾರಣವಾದ ಈ ಮಲ್ಲಿಗೆ ಈಗ ಎಲ್ಲಿಗೆ ಹೋಯಿತು ಎನ್ನುವಂತಾಗಬಾರದು. ಮಲ್ಲಿಗೆ ಬೆಳೆಗಾರರಿಗೆ ಪ್ರೋತ್ಸಾಹದ ಅವಶ್ಯಕತೆ ಇದೆ.

ಸಾಹಿತ್ಯದ ವಿಷಯ ಬಂದಾಗ ಅದು ಗಂಭೀರವಾದದ್ದು, ರೋಚಕವಾದದ್ದು, ಗಹನವಾದದ್ದು, ಸಾಹಿತ್ಯವು ಹಲವು ರೀತಿಯಲ್ಲಿ ಜ್ಞಾನವನ್ನು ಒದಗಿಸುತ್ತದೆ. ಮನುಷ್ಯನನ್ನು ಸಬಲಗೊಳಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯ ಮತ್ತು ಸಾಕ್ಷರತೆಯ ಕೊಡುಗೆಗಳು ಮನುಷ್ಯನ ಮೇಲೆ ಬೀರುವ ಪರಿಣಾಮಗಳು ಸುತ್ತಲು ಪ್ರಪಂಚದಲ್ಲಿ ಏನು ನಡೆಯುತ್ತದೆ ಎಂಬುದನ್ನು ಕಲಿಸುತ್ತದೆ. ಸಾಹಿತ್ಯತದ ಮೂಲಕ ದೈನಂದಿನ ಹೋರಾಟಗಳು, ವೈಫಲ್ಯಗಳು, ಗೆಲವುಗಳು ತಿಳಿದಿರುವವರನ್ನು ಗೌರವಿಸಲು ಕಲಿಯಬಹುದು.
ನಾವು ಸಾಹಿತ್ಯವನ್ನು ಪ್ರೀತಿಸಿದರೆ ಸಾಹಿತ್ಯ ನಮ್ಮ ವಶವಾಗುತ್ತದೆ. ಈ ಪ್ರೀತಿ ಎನ್ನುವುದುನ್ನು ಮನುಷ್ಯರಲ್ಲಿ, ಪಶು-ಪಕ್ಷಿಗಳಲ್ಲಿ, ಆಸ್ತಿಕರಲ್ಲಿಯೂ ಕಾಣಬಹುದು. ಸದಾ ಹಿತವನ್ನೇ ಬಯಸುವುದು ಸಾಹಿತ್ಯ, ಅದನ್ನು ಪ್ರೀತಿಸಿ ಪಡೆಯೋಣ ಎಂದೂ ಅವರು ಹೇಳಿದರು.

ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆ ಆಶಯ ನುಡಿಗಳನ್ನಾಡಿದರು. ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶ್ರೀಧರ ಶೇಟ್ ಕನ್ನಡ ಧ್ವಜವನ್ನು ಪ್ರಸ್ತುತ ಸಮ್ಮೇಳನಾಧ್ಯಕ್ಷರಿಗೆ ಹಸ್ತಾಂತರಿಸಿದರು.
ವೇದಿಕೆಯಲ್ಲಿ ಶಾಸಕ ಸುನಿಲ್ ನಾಯ್ಕ, ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ಸಮಿತಿ ಸದಸ್ಯೆ ಶಿವಾನಿ ಶಾಂತಾರಾಮ್, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ಅಶೋಕ ಭಟ್ಟ ಹಿರಿಯ ಸಾಹಿತಿ ಡಾ. ಆರ್. ವಿ. ಸರಾಫ್, ಸಮಾಜ ಸೇವಕ ಎಸ್. ಎಸ್. ಕಾಮತ್, ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ, ತಾ.ಪಂ. ಕಾ.ನಿ.ಅಧಿಕಾರಿ ಪ್ರಭಾಕರ ಚಿಕ್ಕನಮನೆ ಮಾತನಾಡಿದರು.
ಶಿಕ್ಷಕ ನಾರಾಯಣ ನಾಯ್ಕ ಹಾಗೂ ಮಂಜುಳಾ ಶಿರೂರ್‌ಕರ್ ನಿರೂಪಿಸಿದರು. ಶಿಕ್ಷಕ ಪಾಂಡುರAಗ ಅಳ್ವೇಗದ್ದೆ ವಂದಿಸಿದರು.

error: