July 13, 2024

Bhavana Tv

Its Your Channel

ಯಶಸ್ವೀಯಾಗಿ ನಡೆದ ಭಟ್ಕಳ ಕ.ಸಾ.ಪ ಸರ್ವಾಧ್ಯಕ್ಷ ಶಂಭು ನಾರಾಯಣ ಹೆಗಡೆಯವರ ಭವ್ಯವಾದ ಮೆರವಣಿಗೆ

ಭಟ್ಕಳ : ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶಂಭು ನಾರಾಯಣ ಹೆಗಡೆ ಅವರನ್ನು ಸಮ್ಮೇಳನದ ವೇದಿಕೆಗೆ ಕರೆತರುವ ಭವ್ಯವಾದ ಮೆರವಣಿಗೆ ಅತ್ಯಂತ ಯಶಸ್ವೀಯಾಗಿ ನೆರವೇರಿತು.

ಮೆರವಣಿಗೆಗೆ ಜನತಾ ವಿದ್ಯಾಲಯ ಪ್ರೌಢ ಶಾಲೆಯ ಆವರಣದಲ್ಲಿ ಡಿ.ವೈ.ಎಸ್.ಪಿ. ಶ್ರೀಕಾಂತ ಕೆ ಚಾಲನೆ ನೀಡಿದರು. ಆರಂಭದಲ್ಲಿ ದಿನಕರ ದೇಸಾಯಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು.

ಮೆರವಣಿಗೆಯಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಸಹಾಯಕ ಅರಣ್ಯ
ಸಂರಕ್ಷಣಾಧಿಕಾರಿ ಕೆ.ಟಿ.ಬೋರಯ್ಯ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಹಿರಿಯ ಸಾಹಿತಿ ಡಾ. ಆರ್.ವಿ. ಸರಾಫ್, ಸಮಾಜ ಸೇವಕ ಎಸ್.ಎಸ್.ಕಾಮತ್, ಹೊನ್ನಾವರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಸ್.ಡಿ. ಹೆಗಡೆ, ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ವಿ.ಹೆಗಡೆ, ಯಕ್ಷಗಾನ ಕಲಾವಿದ ನಾರಾಯಣ ಯಾಜಿ ಸಾಲೆಬೈಲ್ ಸೇರಿದಂತೆ ಊರಿನ ನಾಗರೀಕರು, ಧರ್ಮಸ್ಥಳ ಸಂಘ ಸದಸ್ಯರು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೆರವಣಿಗೆಯು ಭವ್ಯವಾದ ಭುವನೇಶ್ವರಿ ರಥ, ಸಮ್ಮೇಳನದ ಸರ್ವಾಧ್ಯಕ್ಷರ ತೆರೆದ ವಾಹನ, ಚಂಡೆ ವಾದನ, ಢಕ್ಕೆ ಕುಣಿತ, ಆರೋಗ್ಯ ಇಲಾಖೆಯಿಂದ ವೇಷ ಭೂಷಣ, ಅರಣ್ಯ ಇಲಾಖೆಯ ವತಿಯಿಂದ ಟ್ಲಾಬ್ಲೋ, ಪುರಸಭೆ ವತಿಯಿಂದ ಟ್ಲಾಬ್ಲೋ, ಪುಟ್ಟ ಮಕ್ಕಳ ಭಜನಾ ಕುಣಿತ ಸೇರಿ ವಿವಿಧ ರೀತಿಯ ಮೆರಗು ನೀಡಲಾಗಿತ್ತು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ದೇವಸ್ಥಾನದ ಆವರಣ ತಲುಪುತ್ತಿದ್ದಂತೆಯೇ ದೇವಸ್ಥಾನದ ಎದುರು ಆರೋಗ್ಯ ಇಲಾಖೆಯ ವತಿಯಿಂದ ಡಾ. ಸವಿತಾ ಕಾಮತ್ ನೇತೃತ್ವದಲ್ಲಿ ಪ್ರದರ್ಶಿಸಿದ ಯಕ್ಷಗಾನ, ಕಂಸಾಣೆ, ಹುಲಿವೇಷ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ನಂತರ ನಿರ್ಮಾಣ ಮಾಡಲಾದ ಶ್ರೀಪಾದ ಕಾಮತ್ ದ್ವಾರವನ್ನು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಕಿಶೋರ ನಾಯ್ಕ ಧ್ವಾರವನ್ನು ಕಾರ್ಮಿಕ ಕಲ್ಯಾಣ ಮಂಡಳಿಯ ರಾಜ್ಯ ಸದಸ್ಯೆ ಶಿವಾನಿ ಶಾಂತಾರಾಮ, ಮಂಜುನಾಥ ದೇವಡಿಗ ದ್ವಾರವನ್ನು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಉದ್ಘಾಟಿಸಿದರು. ಪುಸ್ತಕ ಮಳಿಗೆಯನ್ನು ಹಿರಿಯ ಸಾಹಿತಿ ಡಾ. ಆರ್. ವಿ. ಸರಾಫ್ ಉದ್ಘಾಟಿಸಿದರು. ಚಿತ್ರಕಲಾ ಪ್ರದರ್ಶನವನ್ನು ಸಮಾಜ ಸೇವಕ ಎಸ್.ಎಸ್. ಕಾಮತ್ ಉದ್ಘಾಟಿಸಿದರು. ಇದಕ್ಕೂ ಪೂರ್ವ ಡಾ. ಆರ್.ಎನ್.ಶೆಟ್ಟಿ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ರಾಷ್ಟ್ರಧ್ವಜಾರೋಹಣವನ್ನು ಗ್ರಾ.ಪಂ.ಅಧ್ಯಕ್ಷೆ ಮಾದೇವಿ ಮೊಗೇರ, ಕನ್ನಡ ಧ್ವಜಾರೋಹಣವನ್ನು ಕ.ಸಾ.ಪ.ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ನಾಡ ಧ್ವಜಾರೋಹಣವನ್ನು ಕ.ಸಾ.ಪ. ತಾಲೂಕಾ ಅಧ್ಯಕ್ಷ ಗಂಗಾಧರ ನಾಯ್ಕ ನೆರವೇರಿಸಿದರು.

error: