February 12, 2025

Bhavana Tv

Its Your Channel

ವಿಶ್ವಕರ್ಮ ಸಮುದಾಯದ ವೃತ್ತಿಯ ವಿರುದ್ಧ ಅವಹೇಳನಕಾರಿ ಬರಹ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹ

ಭಟ್ಕಳ: ವಿಶ್ವಕರ್ಮ ಸಮುದಾಯದ ವೃತ್ತಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ತಹಶಿಲ್ದಾರರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ವಿಶ್ವಕರ್ಮ ಸಮುದಾಯದ ಕುಲ ಕಸುಬನ್ನು ಅವಹೇಳನಕಾರಿಯಾಗಿ ಬಿಂಬಿಸಿ ಸಾರ್ವಜನಿಕ ಫೇಸ್‌ಬುಕ್ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ಇವರು ಬಳಸಿದ ಶಬ್ದಗಳು ಸಮುದಾಯದವರು ಮಾಡುತ್ತಿರುವ ಆಚಾರ್ಯ ಕಸುಬಿನ ಕುರಿತು ಮನಸ್ಸಿಗೆ ನೋವಾಗುವ ರೀತಿಯಲ್ಲಿ ಪದ ಬಳಕೆ ಮಾಡಿದ್ದು, ಇದನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಿ ಸಮುದಾಯದವರ ಭಾವನೆಗಳಿಗೆ ಧಕ್ಕೆ ಮಾಡಿರುತ್ತಾರೆ.
ಸಮಾಜದಲ್ಲಿ ಅವರವರು ಮಾಡುತ್ತಿರುವ ವೃತ್ತಿಗಳ ಮೇಲೆ ಅವಹೇಳನ ಮಾಡುವ ಸಂಸ್ಕೃತಿ ಮುಂದುವರಿದ್ದಲ್ಲಿ ಸಮಾಜದಲ್ಲಿ ಸಮಾನತೆಯನ್ನು ಹಾಳು ಮಾಡಿದಂತಾಗುತ್ತದೆ.
ಈ ಸಂಸ್ಕೃತಿ ಇನ್ನು ಮುಂದುವರಿಯಬಾರದು, ಮತ್ತು ಮುಂದಿನ ದಿನಗಳು ಇಂತಹ ಪೋಸ್ಟರಗಳು ಮಾಧ್ಯಮಗಳಲ್ಲಿ ಬರಬಾರದು ಮತ್ತು ತಪ್ಪಿತಸ್ಥರನ್ನು ವಿಚಾರಿಸಿ, ತನ್ನೊಪ್ಪಿಗೆ ಪತ್ರ ಬರೆಯಿಸಿ, ಮುಚ್ಚಳಿಕೆ, ಬರೆಹಿಸಿಕೊಡಬೇಕಾಗಿ ಎಂದು ವಿಶ್ವಕರ್ಮ ಸಮುದಾಯದ ಸಮಾಜದ ಮುಖಂಡ ರಿಂದ ತಹಶಿಲ್ದಾರರ ತಿಪ್ಪೇಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

error: