July 14, 2024

Bhavana Tv

Its Your Channel

ಅದ್ದೂರಿಯಾಗಿ ನಡೆದ ಭಟ್ಕಳ ಬಂದರಲ್ಲಿರುವ ಖಾರ್ವಿ ಸಮುದಾಯದ ಹೋಳಿ ಹಬ್ಬ

ಭಟ್ಕಳ ತಾಲೂಕಿನಾದ್ಯಂತ ಬಣ್ಣಗಳ ಹಬ್ಬವಾದ ಹೋಳಿ ಹಬ್ಬವನ್ನು ಜನರು ಸಂಭ್ರಮ ಸಡಗರದಿಂದ ಆಚರಿಸಿದರು.


ತಾಲೂಕಿನ ಬಂದರಿನಲ್ಲಿರುವ ಖಾರ್ವಿ ಸಮುದಾಯದ ಹೋಳಿ ಹಬ್ಬಕ್ಕೆ ತನ್ನದೇ ವೈಶಿಷ್ಟ್ಯಯಿದ್ದು, ಇವರ ಹೋಳಿಯಾಟವನ್ನು ಕಾಣಲು ಜನ ಗುಂಪುಪಾಗಿ ಸೇರುವುದೂ ಒಂದು ವಿಶೇಷ.
ಖಾರ್ವಿ ಸಮುದಾಯವು ಹೋಳಿ ಹಬ್ಬವನ್ನು ಅತ್ಯಂತ ವಿಶಿಷ್ಟವಾಗಿ ಐದು ದಿನಗಳ ಕಾಲ ಆಚರಿಸಿದರು.

ಪ್ರತಿ ವರ್ಷವೂ ಖಾರ್ವಿ ಸಮಾಜದ ಒಂದು ಕುಟುಂಬ ಹೋಳಿ ಹಬ್ಬದ ಹರಕೆ ಹೊತ್ತು ನಿಯಮ ಪಾಲಿಸುತ್ತದೆ. ಹರಕೆದಾರರ ಮನೆಯಿಂದ ಒಂದು ಅಡಕೆ ಮರವನ್ನು ಹುಣ್ಣಿಮೆ ದಿನ ಸಮಾಜದವರೆಲ್ಲರೂ ಸೇರಿ ವಾದ್ಯ ಕುಣಿತ ಮೆರವಣಿಗೆಯ ಮೂಲಕ ಕಡಲತೀರರುತ್ತಾರೆ. ಜೈಕಾರ, ಘೋಷಣೆ ಜತೆಗೆ ವೇಷಧಾರಿಗಳು ಮೆರವಣಿಗೆಗೆ ಮೆರಗು ನೀಡುತ್ತಾರೆ. ಮಹಿಳೆಯರು, ಪುರುಷರು ಎಲ್ಲರೂ ನೃತ್ಯದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಮೆರವಣಿಗೆ ಮೂಲಕ ಕಡಲತೀರಕ್ಕೆ ಅಡಕೆ ಮರವನ್ನು ದಹನ ಮಾಡುವ ಮೂಲಕ ಸಂಪ್ರದಾಯದ ಹೋಳಿಯ ಆಚರಣೆ ನಡೆದಿದೆ. ಮೊದಲೇ ತಯಾರಿ ಮಾಡಿಕೊಂಡಿದ್ದ ಹುಲ್ಲಿನಿಂದ ಮಾಡಿದ ಕಾಮನ ರೂಪಿಗೆ ಬೆಂಕಿಯನ್ನು ಹಚ್ಚಿ ಕಾಮದಹನ ಮಾಡುವ ಮೂಲಕ ಸಂಭ್ರಮಿಸಿದರು.
ಈ ಬಾರಿ ವಿಶೇಷವಾಗಿ ಟೇಬ್ಲೊ,ಮಹಿಳೆಯರು ಯಕ್ಷಗಾನ ವೇಷ ರಾಮ, ಸೀತೆ, ಲಕ್ಷ್ಮಣ, ಶೂರ್ಪನಖಿ ದೂತ ಇತ್ಯಾದಿ ವೇಷ ಧರಿಸಿ ಹೊಳಿ ಹಬ್ಬದಲ್ಲಿ ಪಾಲ್ಗೊಂಡಿರುವುದು.
ಗ್ರಾಮೀಣ ಠಾಣೆ ಪೋಲಿಸರು, ಹಾಗೂ ಕರಾವಳಿ ಪೋಲಿಸರು ಠಾಣೆ ಪೋಲಿಸರು ಯಾವುದೇ ಅಹಿತಕರ ಘಟನೆಗಳು ನಡೆದಂತೆ ಸೂಕ್ತ ಬಂದೋಬಸ್ತ್ ಮಾಡಿದರು

    error: