February 14, 2025

Bhavana Tv

Its Your Channel

ಮೂಡಭಟ್ಕಳದಲ್ಲಿ ಯಶಸ್ವಿನಿ ಮಹಿಳಾ ಮಂಡಳ ಎಂಬ ಮಹಿಳಾ ಒಕ್ಕೂಟ ಉದ್ಘಾಟನೆ

ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೂಡಭಟ್ಕಳದಲ್ಲಿ ಬುಧವಾರ ಗ್ರಾಮದ ಮಹಿಳೆಯರು ಯಶಸ್ವಿನಿ ಮಹಿಳಾ ಮಂಡಳ ಎಂಬ ಮಹಿಳಾ ಒಕ್ಕೂಟವನ್ನು ಹೊಸದಾಗಿ ರಚಿಸಿ, ಉದ್ಘಾಟಿಸಿದರು.
ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸ್ವಾವಲಂಬನೆಯಿAದ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ,ಈ ಮಹಿಳಾ ಮಂಡಳ ಎತ್ತರಕ್ಕೆ ಬೆಳೆದು ಹತ್ತಾರು ಮಹಿಳೆಯರು ಇದರಿಂದ ಸಹಾಯ ಪಡೆಯುವಂತಾಗಲಿ ಎಂದು ಶುಭಹಾರೈಸಿದರು.

ಮುಟ್ಟಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶೇಷಗಿರಿ ನಾಯ್ಕ, ಭಟ್ಕಳ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಮೂಡಭಟ್ಕಳ ಶಾಲೆಯ ಎಸ್. ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ಕಳೆದ ವರ್ಷ ತಾಲ್ಲೂಕಿನಲ್ಲಿ ಸುರಿದ ಬಾರಿ ಗಾಳಿ ಮಳೆಗೆ ಮುಟ್ಟಳಿ ಮೂಡಭಟ್ಕಳ ವ್ಯಾಪ್ತಿಯಲ್ಲಿ ನೆರಹಾವಳಿ ಸಂದರ್ಭದಲ್ಲಿ ಕುದ್ದು ಜನರನ್ನು ಹಾಗೂ ಜಾನುವಾರು ರಕ್ಷಣೆ ಮಾಡಿದ್ದು ಮತ್ತು ಊಟ ಉಪಚಾರ ನೀಡಿದ್ದನು ಗುರುತಿಸಿ ಮುಟ್ಟಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಶೇಷಗಿರಿ ನಾಯ್ಕ,ಅವರಿಗೆ ಭಟ್ಕಳ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ಶ್ರೀನಿವಾಸ ನಾಯ್ಕ ಮತ್ತು ಯಶಸ್ವಿನಿ ಮಹಿಳಾ ಮಂಡಳ ಸೇರಿ ಸನ್ಮಾನಿಸಿ ಗೌರವಿಸಿದರು.ಹಾಗೂ ಗೋವಿಂದ ನಾಯ್ಕ ಹಾಗೂ ಶ್ರೀನಿವಾಸ ನಾಯ್ಕ,ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ರಾಜು ಫರ್ನಾಂಡಿಸ್, ಲಕ್ಷ್ಮಿ ನಾಯ್ಕ, ಮಹಿಳಾ ಮಂಡಳದ ಕಾರ್ಯದರ್ಶಿ ಮುಕ್ತಾ ಭಟ್ ಉಪಸ್ಥಿತಿ ಇದ್ದರು.

error: