
ಭಟ್ಕಳ: ಶ್ರೀ ನಿಶ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ ಆಸರಕೇರಿಗೆ ತೆರಳುವ ರಸ್ತೆಯಲ್ಲಿನ ಒಳ ಚರಂಡಿಯ ಮಲಿನ ನೀರು ತುಂಬಿ ರಸ್ತೆ ಮೇಲೆ ಹರಿದು ಕೆಲ ಕಾಲ ಅಲ್ಲಿನ ಸ್ಥಳೀಯರಿಗೆ ಹಾಗೂ ರಸ್ತೆ ಸವಾರರಿಗೆ ತೊಂದರೆ ಉಂಟಾಗಿತ್ತು.
ಅನೇಕ ವರ್ಷಗಳ ಹಿಂದೆ ನಿರ್ಮಾಣವಾದ ಈ ಒಳ ಚರಂಡಿಯಲ್ಲಿ ಪದೇ ಪದೇ ಮಲಿನ ನೀರು ಬ್ಲಾಕ್ ಆಗಿ ಹೊರಗೆ ಬರುತ್ತಿದ್ದು. ಆ ವೇಳೆ ಪುರಸಭೆಯವರು ಬಂದು ತಾತ್ಕಾಲಿಕ ಪರಿಹಾರ ಮಾಡಿ ಹೋಗುತ್ತಿದ್ದರು. ಇನ್ನು ಕೆಲವು ಬಾರಿ ಚರಂಡಿಯ ನೀರು ಗಟಾರಿನ ಮೂಲಕ ಅಲ್ಲಿನ ನಿವಾಸಿಗಳ ಬಾವಿಗೆ ಸೇರುತ್ತಿದೆ. ಇದರಿಂದಾಗಿ ಅಲ್ಲಿನ ಸ್ಥಳೀಯರಿಗೆ ತೊಂದರೆ ಉಂಟಾಗಿದೆ. ಈ ರಸ್ತೆಯು ದೇವಸ್ಥಾನ, ಶಾಲೆ ಕಾಲೇಜಿಗೆ ಸಂಪರ್ಕಿಸುವ ರಸ್ತೆಯಾಗಿದ್ದು ಪ್ರತಿ ನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ಭಕ್ತಾದಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ವಾಹನ ಸವಾರರು ಪ್ರಯಾಣಿಸುತ್ತಾರೆ.
ಅದೇ ರೀತಿ ಇಂದು ಬೆಳ್ಳಿಗ್ಗೆ ಕೂಡ ಒಳ ಚರಂಡಿಯ ನೀರು ತುಂಬಿ ರಸ್ತೆ ಮೇಲೆ ಹರಿದು ಗಟಾರಿನ ಮೂಲಕ ಅಲ್ಲಿನ ನಿವಾಸಿಗಳ ಬಾವಿಗೆ ಸೇರಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಅದೇ ರೀತಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವಂತೆ ಅಲ್ಲಿನ ಸ್ಥಳೀಯರು ಕೋರಿದ್ದಾರೆ

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ