March 29, 2024

Bhavana Tv

Its Your Channel

ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾದ ಮಂಕಾಳ ವೈದ್ಯ, ಪಕ್ಷ ಸೇರುವವರಿಗೆ ಮುಕ್ತ ಅವಕಾಶ

ಭಟ್ಕಳ: ಕಾಂಗ್ರೆಸ್ ಪಕ್ಷದಿಂದ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಮಂಕಾಳ ವೈದ್ಯರಿಗೆ ಟಿಕೆಟ್ ನೀಡಿದ್ದು ಒಂದು ಉತ್ತಮವಾದ ಆಯ್ಕೆಯಾಗಿದ್ದು ಅವರು ಈ ಬಾರಿ ಜಯಬೇರಿ ಬಾರಿಸಲಿದ್ದಾರೆ ಎಂದು ನಾಮಧಾರಿ ಸಮಾಜದ ಮುಖಂಡ ಎಲ್.ಎಸ್ ನಾಯ್ಕ ಹೇಳಿದರು.
ಭಟ್ಕಳದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಂಕಾಳ ವೈದ್ಯರಿಗೆ ಅಭಿನಂದನಾ ಸಭೆಯಲ್ಲಿ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರು ಪಕ್ಷದ ಕಾರ್ಯಕರ್ತರ ಗೆಲುವಿಗೆ ಸದಾ ಶ್ರಮಿಸುತ್ತಿರುವ ನಾಯಕ ಮಂಕಾಳ ವೈದ್ಯ. ತನ್ನ ಕಾರ್ಯಕರ್ತರ ಗ್ರಾಪಂ, ಸ್ಥಳೀಯ ಬ್ಯಾಂಕಿನ ಚುನಾವಣೆಯಲ್ಲಿ ಬೆಂಬಲ ನೀಡಿದ್ದಾರೆ. ಕರೋನಾ ಸಂದರ್ಬ ಸೇರಿದಂತೆ ಇತರ ಹಲವು ಸಂಕಷ್ಟದ ಸಮಯದಲ್ಲಿ ಜಾತಿಭೇದವಿಲ್ಲದೆ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿದ್ದಾರೆ. ಈ ಬಾರಿ ಮಂಕಾಳ ವೈದ್ಯರ ಗೆಲುವಿಗೆ ನಾವೆಲ್ಲಾ ಒಂದಾಗಿ ಶ್ರಮಿಸಬೇಕು ಎಂದು ಅವರಿಗೆ ಸಿಹಿ ತಿನಿಸಿ ಶುಭ ಹಾರೈಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ಮಂಕಾಳ ವೈದ್ಯ ಮಾತನಾಡಿ ತಾನು ಕಳೆದ ೧೦ವರ್ಷಗಳಿಂದ ನಿಮ್ಮ ಜೊತೆ ಇದ್ದು ಸಂಕಷ್ಟಕ್ಕೆ ಸ್ಪಂದನೆ ನೀಡಿದ್ದೇನೆ. ಇನ್ನು ಬಾಕಿ ಉಳಿದಿರುವದು ಕೇವಲ ೪೫ದಿನಗಳು. ಈ ೪೫ದಿನ ನೀವು ನಮ್ಮೊಂದಿಗೆ ಇದ್ದು ಗೆಲುವಿಗೆ ಸಹಕರಿಸಿ ಆಶೀರ್ವದಿಸಿ. ಮುಂದಿನ ದಿನಗಳಲ್ಲಿ ಸದಾ ನಿಮ್ಮೊಂದಿಗೆ ನಾನು ಇರುತ್ತೇನೆ. ನಿಮ್ಮೆಲ್ಲರ ಆಗ್ರಹದಿಂದ ನನಗೆ ಪಕ್ಷ ಟಿಕೇಟ್ ನೀಡಿದ್ದು, ಬೂತ ಮಜಿರೆ ಮಟ್ಟದಲ್ಲೂ ನಿಮ್ಮ ಮನೆ ಬಾಗಿಲಿಗೆ ಬಂದು ಸ್ಪಂದನೆ ನೀಡುತ್ತೆನೆ ಎಂದರು.
ಈ ಸಂದರ್ಬದಲ್ಲಿ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾಜಿ ಜಿಪಂ ಸದಸ್ಯೆ ಅಲ್ಬರ್ಟ ಡಿಕೋಸ್ತಾ, ನಾಗೇಶ ದೇವಾಡಿಗ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಮಾಜಿ ತಾ.ಪಂ ಸದಸ್ಯೆ ಜಯಲಕ್ಷಿö?? ಗೊಂಡ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ ಮಜೀದ ಇತರರು ಇದ್ದರು.
೨೬ಬಿಕೆಎ??೧ ಭಟ್ಕಳ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಟ್ಕಳ ಹೊನ್ನಾವರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಕಾಳ ವೈದ್ಯ ಅವರಿಗೆ ನಾಮಧಾರಿ ಸಮಾಜದ ಮುಖಂಡ ಎಲ್.ಎಸ್. ನಾಯ್ಕ ಸಿಹಿ ತಿಸಿಸಿ ಶೂಭ ಹಾರೈಸಿದರು. ಬ್ಲಾಕ ಅಧ್ಯಕ್ಷ ವೆಂಕಟೇಶ ನಾಯ್ಕ, ಅಬ್ದುಲ ಮಜೀದ ಇತರರು ಇದ್ದರು.

error: