June 8, 2023

Bhavana Tv

Its Your Channel

ನಾಳೆ (30-3-2023)ಭಟ್ಕಳ ಚೆನ್ನ ಪಟ್ಟಣ ಹನುಮಂತ ದೇವರ ಜಾತ್ರಾ ರಥೋತ್ಸವ ಜಾತ್ರಾ ಮಹೋತ್ಸವ ಹಿನ್ನೆಲೆ ಎರಡು ದಿನ ಮದ್ಯ ಮಾರಾಟ ಸಾಗಾಟ ನಿಷೇಧ

ಭಟ್ಕಳ: ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಧ್ವಜಾರೋಹಣ ಹಾಗೂ ವಾರ್ಷಿಕ ರಥೋತ್ಸವ ಕಾರ್ಯಕ್ರಮದ ಪೂರ್ವ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ ೨೨ ಬುಧವಾರದಂದು ಆರಂಭಗೊAಡಿದ್ದು, ಜಾತ್ರಾ ಮಹೋತ್ಸವ ತಯಾರಿ ಕಾರ್ಯ ಮಾರ್ಚ ೩೦ ರಂದು ಬ್ರಹ್ಮ ರಥೋತ್ಸವ ಜರುಗಲಿದ್ದು, ಸಕಲ ಸಿದ್ದತೆಗಳು ಈಗಾಗಲೇ ಸಜ್ಜುಗೊಳ್ಳುತ್ತಿವೆ.

ಜಿಲ್ಲೆಯ ಅತೀ ದೊಡ್ಡ ಜಾತ್ರಾ ರಥೋತ್ಸವ ಕಾರ್ಯಕ್ರಮದ ಪೂರ್ವಭಾವಿ ತಯಾರಿ ಭರದಿಂದ ನಡೆಯುತ್ತಿದ್ದು, ಈ ಮಾರ್ಚ ೨೨ ರ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ತಾಂತ್ರಿಕರಾದ ವೇ.ಮೂ.ರಮಾನಂದ ಆವಭೃತರ ಆಚಾರ್ಯತ್ವದಲ್ಲಿ ಬೆಳಿಗ್ಗೆ ಧ್ವಜಸ್ಥಂಭಕ್ಕೆ ಗರುಡನ ಪಟವನ್ನು ಕಟ್ಟುವ ಮೂಲಕ ರಥೋತ್ಸವದ ವಿಧಿವಿಧಾನಗಳು ವಿದುಕ್ತವಾಗಿ ಚಾಲನೆಗೊಂಡವು.
ದೇವಳದ ಒಳಗೆ ಹನುಮ ದೇವರ ಸಕಲ ಪೂಜಾ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದ್ದು, ಪ್ರತಿನಿತ್ಯ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ದೇವಳದಲ್ಲಿ ನಡೆಯುತ್ತಿವೆ. ಊರ ಹಬ್ಬವಾದ ಈ ಜಾತ್ರೆಯೂ ತಾಲುಕೂ ಅಷ್ಟೇ ಅಲ್ಲದೇ ಜಿಲ್ಲೆ, ರಾಜ್ಯದಿಂದಲೂ ಜನರ ಆಗಮಿಸುವರು. ಮಾರ್ಚ ೩೦ ಗುರುವಾರದಂದು ಬ್ರಹ್ಮ ರಥೋತ್ಸವ ಹಾಗೂ ಮಾರ್ಚ ೨೯ ರಂದು ಚೂರ್ಣೊತ್ಸವ ನಡೆಯುವುದರೊಂದಿಗೆ ರಥೋತ್ಸವದ ವಿಧಿ ವಿಧಾನಗಳು ಸಮಾಪ್ತಿಯಾಗಲಿವೆ. ಈಗಾಗಲೇ ದೇವಸ್ಥಾನದ ಪ್ರಾಂಗಣ ಹಾಗೂ ಹೊರಾಂಗಣಗಳಿಗೆ ಸುಣ್ಣ ಬಣ್ಣ ಬಳಿದು ಅಲಂಕಾರ ಮಾಡಿದ್ದು, ದೇವಾಲಯವೂ ಜಾತ್ರಾ ರಥೋತ್ಸವಕ್ಕೆ ಕಂಗೊಳಿಸುವAತೆ ಸಜ್ಜುಗೊಳಿಸುತ್ತಿದ್ದಾರೆ. ಸದ್ಯ ಸುಂದರ ರಥಕ್ಕೆ ಬಣ್ಣ ಬಳಿದು, ರಥ ಕಟ್ಟುವ ಕಾರ್ಯ ಮುಕ್ತಾಯಗೊಂಡಿದೆ.

ರಥೋತ್ಸವದ ಅಂಗವಾಗಿ ದಿನವೂ ಕೂಡಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಪ್ರತಿ ದಿನವೂ ದೇವರ ಉತ್ಸವ ನಡೆದು ಬ್ರಹ್ಮರಥೋತ್ಸವದ ಪೂರ್ವ ದಿನದಂದು ಪುಷ್ಪ ರಥೋತ್ಸವವು ಜರುಗಲಿದೆ.
ಒಟ್ಟಿನಲ್ಲಿ ಭಕ್ತರಲ್ಲಿ ಭಟ್ಕಳ ಜಾತ್ರೆ ವಿಶೇಷವಾಗಿದ್ದು, ರಥೋತ್ಸವಕ್ಕೆ ಕ್ಷಣಗಣನೆ ನಡೆಯುತ್ತಿದೆ. ಭಟ್ಕಳ ಸಂಪುರ್ಣ ಊರಿನ ಜಾತ್ರೆಗೆ ಸಜ್ಜುಗೊಳುತ್ತಿದ್ದು ಭಟ್ಕಳಿಗರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.

ಎರಡು ದಿನ ಮದ್ಯ ನಿಷೇಧ:
ತಾಲೂಕಿನ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರಾ ಮಹೋತ್ಸವ ಮಾರ್ಚ ೨೨ ರಿಂದ ಆರಂಭವಾಗಿದ್ದು ಈ ಕಾರಣದಿಂದಾಗಿ ಭಟ್ಕಳ ಶಹರವು ಮತೀಯ ದ್ರಷ್ಟಿಯಿಂದ ಅತೀ ಸೂಕ್ಷ್ಮ ಪ್ರದೇಶವಾಗಿದ್ದು, ರಥೋತ್ಸವವ ವೇಳೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವ ದ್ರಷ್ಟಿಯಿಂದ ಮತ್ತು ಸಾರ್ವಜನಿಕ ಹಿತದ್ರಷ್ಟಿಯಿಂದ ಮಾರ್ಚ್ ೨೯ ರ ಬೆಳಿಗ್ಗೆ ೬ ಗಂಟೆಯಿAದ ಮಾರ್ಚ್ ೩೦ ರ ರಾತ್ರಿ ೧೨ ಗಂಟೆಯ ವರೆಗೆ ಎರಡು ದಿವಸ ಭಟ್ಕಳ ಪೋಲೀಸ ಠಾಣಾ ವ್ಯಾಪ್ತಿಯಲ್ಲಿರುವ ಎಲ್ಲಾ ರೀತಿಯ ಮದ್ಯದಂಗಡಿ, ವೈನ್ ಶಾಪ್ ಮತ್ತು ಬಾರ್ ಗಳನ್ನು ಬಂದ್ ಮಾಡಿ ಎಲ್ಲಾ ರೀತಿಯ ಮದ್ಯ ಮಾರಾಟ ಹಾಗೂ ಸಾಗಾಟ ವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ ಆದೇಶ ಹೊರಡಿಸಿದ್ದಾರೆ.
ಜಾತ್ರಾ ಮಹೋತ್ಸವಕ್ಕೆ ಪೋಲಿಸ್ ಸರ್ಪಗಾವಲು

ಮಾರ್ಚ ೩೦ ರಂದು ನಡೆಯಲಿರುವ ಭಟ್ಕಳ ಜಾತ್ರಾ ಮಹೋತ್ಸವದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಉಪ ವಲಯ ಪೋಲೀಸ್ ನಿರೀಕ್ಷಕ ಶ್ರೀಕಾಂತ ಕೆ. ಅವರ ನೇತ್ರತ್ವದಲ್ಲಿ ಪೋಲಿಸ್ ಬಂದೋಬಸ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿನ್ನೆಲೆ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಯಿಂದ ೪೦೦ಕ್ಕೂ ಅಧಿಕ ಪೋಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಭಟ್ಕಳ ಪೊಲೀಸ್ ಮೈದಾನದಲ್ಲಿ ಸಿಬ್ಬಂದಿಗಳಿಗೆ ಬಂದೋಬಸ್ತ ಕುರಿತಾಗಿ ಮಾಹಿತಿ ನೀಡಿ ಆಯಕಟ್ಟಿನ ಜಾಗದಲ್ಲಿ ನೇಮಿಸಲಾಗಿದೆ.

About Post Author

error: