June 8, 2023

Bhavana Tv

Its Your Channel

ಶ್ರೀ ರಘುನಾಥ ದೇವಸ್ಥಾನದಲ್ಲಿ ರಾಮದೇವರಿಗೆ ತೋಟ್ಟಿಲಲ್ಲಿ ಹಾಕಿ ತೂಗುವ ಮೂಲಕ ಅದ್ದೂರಿಯಾಗಿ ಶ್ರೀ ರಾಮನವಮಿ ಉತ್ಸವ ಆಚರಣೆ.

ಭಟ್ಕಳ: ಪಟ್ಟಣದ ರಘುನಾಥ ರಸ್ತೆಯಲ್ಲಿರುವ ಶ್ರೀ ರಘುನಾಥ ದೇವಸ್ಥಾನದಲ್ಲಿ ಶ್ರೀ ರಾಮನವಮಿ ಉತ್ಸವ ಆಚರಣೆಯನ್ನು ರಾಮದೇವರಿಗೆ ತೋಟ್ಟಿಲಲ್ಲಿ ಹಾಕಿ ತೂಗುವ ಮೂಲಕ ಅದ್ದೂರಿಯಾಗಿ ಅತಿವಿಜೃಂಬಣೆಯಿAದ ಆಚರಿಸಲಾಯಿತು,

ಅತಿ ಪುರಾತನ ಇತಿಹಾಸ ಪಟ್ಟಣದ ರಘುನಾಥ ರಸ್ತೆಯಲ್ಲಿರುವ ಶ್ರೀ ರಘುನಾಥ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ಕಳೆದ ೩ ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ರಾಮನವಮಿಯ ಅಂಗವಾಗಿ ಬೆಳಿಗ್ಗೆಯಿಂದಲೆ ವಿವಿಧ ಧಾರ್ಮಿಕ ಅನುಷ್ಠಾನಗಳು ಜರುಗಿದವು. ಮುಂಜಾನೆ ರಾಮನಾಮ ತಾರಕ ಮಂತ್ರ ಹವನದಲ್ಲಿ ರಾಘವೇಂದ್ರ ಭಟ್ ಮತ್ತು ಸೀಯಾ ಭಟ್ ನೇರವೇರಿಸಿದರು. ಬಳಿಕ ಶ್ರೀ ರಾಮ ದೇವರನ್ನು ದೇವಸ್ಥಾನದ ಪ್ರಾಂಗಣದಲ್ಲಿ ತೊಟ್ಟಿಲಲ್ಲಿ ಹಾಕಿ ಸಂಭ್ರಮಿಸಲಾಯಿತು. ಬಳಿಕ ರಘುನಾಥ ದೇವರನ್ನು ಸುಂದರವಾಗಿ ಅಲಂಕರಿಸಿ ಪೂಜಿಸಲಾಯಿತು. ಈ ಸಂದರ್ಬದಲ್ಲಿ ಮಹಿಳೆಯರಿಂದ ಭಜನೆ, ಕೀರ್ತನೆ ವಿವಿದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಾಪೂಜೆಯ ಬಳಿಕ ಮಹಾಅನ್ನಸಂತರ್ಪಣೆ ನಡೆದಿದ್ದ ಸಾಕಷ್ಟು ಸಂಖ್ಯೆಯ ಭಕ್ತರು ಭಾಗವಹಿಸಿದರು.
ರಾತ್ರಿಲ್ಲೂ ಶ್ರೀ ರಘುನಾಥ ದೇವರಿಗೆ ವಿಶೇಷ ಪೂಜೆ ನಡೆಯಿತು. ಬಳಿಕ ಚಿಕ್ಕ ಮಕ್ಕಳಿಂದ ಬಜನಾ ನರ್ತನೆ ಸೇರಿ ಸನಾತನ ಸಂಸ್ಕೃತಿ ಪ್ರೇರೆಪಿಸಿ, ಬಿಂಬಿಸುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವೇದಮೂರ್ತಿ ಕಿಶೋರ ಭಟ್, ರಾಮಚಂದ್ರ ಭಟ್, ರಜತ್ ಭಟ್, ವಿನಯಾ ಭಟ್, ಸಿಯಾ ಭಟ್ ಧಾರ್ಮಿಕ ಅನುಷ್ಠಾನಕ್ಕೆ ಸಹಕರಿಸಿದರು.

About Post Author

error: