ಭಟ್ಕಳ ; ತಾಲೂಕಿನ ಮೂಡಭಟ್ಕಳ ಬೈಪಾಸ ಭಾಗದ ಕ್ರಷಿಕರಿಗೆ ಕ್ರಷಿ ಕೆಲಸಕ್ಕೆ ಉಪಯುಕ್ತವಾದ ಕಲ್ಲುಸಂಕ ಹೊಳೆಗೆ ಅಲ್ಲಿನ ಲಾಡ್ಜ ನ ಮಲಿನ ತ್ಯಾಜ್ಯ ನೀರು ಸೇರುತ್ತಿರುವ ಹಿನ್ನೆಲೆ ಕ್ರಷಿಕರಿಗೆ ಹಾಗೂ ಸ್ಥಳೀಯರಿಗೆ ತೊಂದರೆ ಉಂಟಾಗುತ್ತಿದ್ದು ಈ ಕುರಿತು ಶೀಘ್ರವಾಗಿ ಕ್ರಮಕ್ಕೆ ಮುಂದಾಗಬೇಕೆAದು ಒತ್ತಾಯಿಸಿ ಪುರಸಭೆ ಹಾಗೂ ತಾಲೂಕಾಢಳಿತದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಖಾಸಗಿ ವ್ಯಕ್ತಿಯ ಮಾಲೀಕತ್ವದ ಲಾಡ್ಜನ ಕಟ್ಟಡದಿಂದ ಮಲೀನ ತ್ಯಾಜ್ಯ ನೀರನ್ನು ಈ ಭಾಗದ ಹೊಳೆಗೆ ಬೀಡಲಾಗುತ್ತಿದ್ದು, ಈ ಬಗ್ಗೆ ಅದೆಷ್ಟೇ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಸ್ಥಳೀಯರು ಒತ್ತಾಯಿಸಿದರು ಸಹ ತಾಲೂಕಾಢಳಿತ ಪುರಸಭೆ ಅತ್ತ ಗಮನ ಹರಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ದ ಸ್ಥಳೀಯರು ಕಿಡಿಕಾಡಿದರು.
ಈ ಸಮಸ್ಯೆಯು ಕಳೆದ 10 ವರ್ಷದಿಂದಲೂ ಕ್ರಷಿಕರು, ಸ್ಥಳೀಯರು ಅನುಭವಿಸುತ್ತಾ ಬಂದಿದ್ದು ಇದರಿಂದ ಇನ್ನು ತನಕ ಯಾವುದೇ ಪರಿಹಾರ ಸಿಗದಂತಾಗಿದೆ. 10 ವರ್ಷದಿಂದಲೂ ಇಲ್ಲಿಯ ತನಕದ ಬಂದAತಹ ಎಲ್ಲಾ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸ್ಥಳೀಯರು ಮನವಿ ಸಲ್ಲಿಸುತ್ತಾ ಬಂದಿದ್ದು ಇಲ್ಲಿಯ ತನಕ ಸ್ಥಳಕ್ಕೆ ಬಂದು ಸಮಸ್ಯೆ ವಿಚಾರಿಸುವ ಗೋಜಿಗು ಬಾರದಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಅನಾದಿಕಾಲದಿಂದಲೂ ಸಹ ಈ ಲಾಡ್ಜ ಹಿಂಬದಿಯಲ್ಲಿ ಹಾಗೂ ಎದುರಿನಲ್ಲಿ ಕ್ರಷಿ ಭೂಮಿಯಿದ್ದು ಕ್ರಷಿಕರು ಇದನ್ನೆ ನಂಬಿಕೊAಡು ಬಂದಿದ್ದಾರೆ. ಆದರೆ ಕಳೆದ 10 ವರ್ಷದಿಂದ ಈ ಲಾಡ್ಜ ನಿರ್ಮಾಣದ ಬಳಿಕ ಹೊಳೆಗೆ ಬಿಡಲಾಗುತ್ತಿರುವ ಮಲಿನ ನೀರಿನಿಂದ ಅವೆಲ್ಲವು ಈಗ ಕ್ರಷಿ ಮಾಡಲಾಗದ ಸ್ಥಿತಿಗೆ ಬಂದು ತಲುಪಿದೆ. ಇದಕ್ಕೆಲ್ಲ ಈಗ ಹೊಣೆಗಾರರು ಯಾರು ಎಂಬುದು ಸ್ಥಳಿಯರ ಆಕ್ರೋಶವಾಗಿದೆ.
ಈ ಬಗ್ಗೆ ಇಲ್ಲಿನ ಪುರಸಭೆಯ ಸಭೆ ಸೇರಿದಂತೆ ಸಾಕಷ್ಟು ಸಭೆಗಳಲ್ಲಿ ಸಮಸ್ಯೆಯ ಪರಿಣಾಮವನ್ನು ಸ್ಥಳೀಯರು ವಿವರಿಸಿದ್ದು ಯಾವುದೇ ಉಪಯೋಗವಾಗಿಲ್ಲವಾಗಿದೆ. ಇದರ ಜೊತೆಗೆ ಹೆದ್ದಾರಿ ಕಾಮಗಾರಿಯಿಂದ ನೀರು ಹೋಗುವ ಮೋರಿ ಮುಚ್ಚಿಹೋಗಿವೆ. ಅದನ್ನು ಸರಿಪಡಿಸಬೇಕು ಹಾಗೂ ಇವೆಲ್ಲದಕ್ಕು ಮುಖ್ಯವಾಗಿ ಲಾಡ್ಜನಿಂದ ಹೊರ ಹೋಗುವ ಮಲಿನ ನೀರು ಬರುವ ಪೈಪನ್ನು ಬಂದ್ ಮಾಡಿಸಿ ಡ್ರಾನೈಜಗೆ ಹೋಗುವಂತೆ ಮಾಡಬೇಕು ಎಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.
ಸದ್ಯ ಈ ಹೊಳೆಗೆ ಸೇರುತ್ತಿರುವ ಮಲಿನ ನೀರು ಅಕ್ಕಪಕ್ಕದ ಮನೆಗಳ ಬಾವಿಗೂ ಸೇರುತ್ತಿದ್ದು, ಇದರಿಂದ ನೀರು ಕುಡಿದ ನಿವಾಸಿಗಳಿಗೆ ಆರೋಗ್ಯದಲ್ಲಿ ಏರುಪೇರು ಸಹ ಉಂಟಾಗಿರುವುದು ಅಧಿಕಾರಿಗಳು ಹಾಗೂ ಲಾಡ್ಜನ ಮಾಲೀಕರು ಜನರ ಜೀವದ ಜೊತೆಗೆ ಆಟವಾಡುತ್ತಿದ್ದಾರೆಂದು ಸಮಸ್ಯೆಯಿಂದ ನೊಂದ ಸ್ಥಳೀಯರ ಮಾತಾಗಿದೆ.
ಅದರಂತೆ ಬೈಪಾಸ್ ಬಳಿಯಲ್ಲಿನ ಆಟೋ ರಿಕ್ಷಾ ನಿಲ್ದಾಣವಿದ್ದು ಈ ಮಲಿನ ನೀರಿನ ದುರ್ವಾಸನೆಯಿಂದ ನಿಲ್ದಾಣದಲ್ಲಿ ನಿಲ್ಲಲು ಸಾಧ್ಯವಾಗುತ್ತಿಲ್ಲವಾಗಿದ್ದು, ಈ ಬಗ್ಗೆ ಕಟ್ಟಡದ ಮಾಲೀಕರಿಗೆ ಸಮಸ್ಯೆ ತಿಳಿಸಿದ್ದು ಇದಕ್ಕೆ ಮಾಲೀಕನು ಸಹ ಸ್ಪಂದಿಸದೇ ನಿಸ್ಕಾಳಜಿ ತೋರಿಸುತ್ತಿರುವುದು ಜನರನ್ನು ಇನ್ನಷ್ಟು ಆಕ್ರೋಶ ಒಳಗಾಗುವಂತೆ ಮಾಡಿದೆ.
ಇವೆಲ್ಲದರ ಜೊತೆಗೆ ಇಲ್ಲಿನ ಸ್ಥಳೀಯ ಅಕ್ಕಪಕ್ಕದ ಹೊಟೆಲನಿಂದ ಸರಾಯಿ ಬಾಟಲಗಳು ಸಹ ಹೊಳೆಗೆ ಹಾಕಲಾಗುತ್ತಿದ್ದು ಇದರಿಂದ ಹೊಳೆಯ ನೀರಿನ ಹರಿವು ಸಹ ಇಲ್ಲದಂತಾಗಿ ನೀರಿನ ಬಣ್ಣ ಸಹ ಬದಲಾಗಿದೆ. ಈ ನೀರಿನಿಂದ ದುರ್ವಾಸನೆ ಸಹ ಹೆಚ್ಚಾಗಿದ್ದು ರೋಗ ರುಜನಿಗಳ ತಾಣವಾಗಿ ಮಾರ್ಪಟ್ಟಿದೆ.
‘ ಈ ಭಾಗಕ್ಕೆ ಕಲ್ಲುಸಂಕ ಹೊಳೆಯು ಮುಖ್ಯವಾಗಿದ್ದು ಇದನ್ನು ಲಾಡ್ಜ್ ನಿಂದ ಬರುವ ಹೊಲಸು ನೀರಿನಿಂದ ಸಂಪೂರ್ಣ ಕಲುಷಿತವಾಗುತ್ತಿದೆ. ಈ ಕುರಿತು ಶೀಘ್ರವಾಗಿ ಪುರಸಭೆ ತಾಲೂಕಾಢಳಿತ ಸ್ಪಂದಿಸಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿದ್ದಲ್ಲಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
‘ ಈ ಸಮಸ್ಯೆಯ ಪರಿಹಾರಕ್ಕೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ತಿಳಿಸಿದ್ದು ಅವರಿಗೆ ಕೇವಲ ಎರಡು ದಿನದ ಗಡುವು ನೀಡಿದ್ದು ಅಷ್ಟರೊಳಗೆ ಸಮಸ್ಯೆಗೆ ಪರಿಹಾರ ನೀಡದಿದ್ದಲ್ಲಿ ಪ್ರತಿಭಟನೆಯನ್ನು ನಡೆಸಲಿದ್ದೇವೆ. ಅದರ ಪರಿಣಾಮಕ್ಕೆ ಸ್ಥಳೀಯರು ಹೊಣೆಗಾರರಲ್ಲ.
More Stories
ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್ಡಿ ಪೊಲೀಸರು
ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡು
ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 5ನೇ ಚಾತುರ್ಮಾಸ ವೃತಾಚರಣೆ, ಭಟ್ಕಳ ತಾಲ್ಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ