April 25, 2024

Bhavana Tv

Its Your Channel

ಸರಕಾರಿ ಪ್ರೌಢಶಾಲೆ ಬೆಳಕೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಉಚಿತ ನೋಟಬುಕ್ ವಿತರಣೆ

ಭಟ್ಕಳ ; ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮ ಶಿಕ್ಷಣ ಹಾಗೂ ಉತ್ತಮ ಶಿಕ್ಷಕರಿಂದ ಮಾತ್ರ ಪಡೆಯಲು ಸಾಧ್ಯ. ಎಂದು ಕುಂದಾಪರದ ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಸದಾಶಿವ ಅಚಾರ್ಯ ಅವರು ಹೇಳಿದರು.

ಅವರು ಸರಕಾರಿ ಪ್ರೌಢಶಾಲೆ ಬೆಳಕೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಉಚಿತ ನೋಟಬುಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ನಾವು ನೋಡುತ್ತಿದ್ದೇವೆ. ವಿದ್ಯಾರ್ಥಿಗಳು ಕೂಡ ಇಂದಿನ ಪರಿಸ್ಥಿತಿಗೆ ಹೊಂದಿಕೊAಡು ಶಿಕ್ಷಣ ಪಡೆಯಬೇಕು. ಸತತ ಪ್ರಯತ್ನ, ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಹಿತ ನುಡಿಯನ್ನು ಹೇಳಿದರು.

ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಅಧ್ಯಯನ ಶೀಲರಾಗ ಬೇಕು. ಮೊಬೈಲ್ ಬಳಕೆ ಮಾಡಬೇಡಿ, ಪಾಲಕರು ಈ ಬಗ್ಗೆ ಎಚ್ಚರ ವಹಿಸಿದ್ದಲ್ಲಿ ತಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ನಿಮ್ಮ ಕನಸನ್ನು ನನಸು ಮಾಡಲು ಸಾಧ್ಯ. ಎಂದು ಹೇಳಿದರು.

ಶಾಲೆಯ ದತ್ತು ಯೋಜನೆಯ ಅಧಿಕಾರಿಗಳಾದ ಶಿವಾನಂದ ನಾಯ್ಕ ಮಾತನಾಡಿ ಮೊದಲು ಶಿಕ್ಷಣ ಪಡೆಯ ಬೇಕಾದರೆ ಬಹಳಷ್ಟು ಕಷ್ಟ ಪಡೆಬೇಕಾಗಿತ್ತು. ಆದರೆ ಈಗ ಸರಕಾರದ ಯೋಜನೆಗಳು,ಹಾಗೂ ದಾನಿಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಣ ಸಿಗುತ್ತದೆ. ಇದರ ಪ್ರಯೋಜನ ಪಡೆದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯಾಧ್ಯಾಪಕರಾದ ಶಾಲಿನಿ ನಾಯಕ ಮಾತನಾಡಿ ನಮ್ಮ ಶಾಲೆಯು ಪ್ರತಿ ವರ್ಷವೂ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಗುಣಮಟ್ಟದ ಫಲಿತಾಂಶವನ್ನು ನೀಡುತ್ತಾ ಬಂದಿದ್ದೇವೆ. ಇದಕ್ಕೆ ಕಾರಣಿಕರ್ತರಾದ ಎಲ್ಲಾ ಶಿಕ್ಷಕರ ಪ್ರಯತ್ನವನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ.ಹಾಗೂ ಶಾಲೆಯ ಪ್ರಗತಿಗೆ ಸದಾ ಸಹಕಾರ ನೀಡುವ ದಾನಿಗಳನ್ನು, , ಎಸ್ ಡಿ ಎಂ. ಸಿ ಅಧ್ಯಕ್ಷರನ್ನು, ಸದಸ್ಯರನ್ನು, ಗ್ರಾಮ ಪಂಚಾಯತ ಬೆಳಕೆ, ,ಹಳೆ ವಿದ್ಯಾರ್ಥಿಗಳು , ಪಾಲಕ ಪೋಷಕರನ್ನು, ಶಾಲಾಭಿಮಾನಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸದಾಶಿವ ಆಚಾರ್ಯರವರು ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ವಿದ್ಯಾರ್ಥಿಗಳಿಗೆ ಊಟ ಮಾಡುಲು ಗುಣ ಮಟ್ಟದ ೨೧೧ ಊಟದ ತಟ್ಟೆ, ಹಾಗೂ ಗ್ರಂಥಾಲಯಕ್ಕೆ ಪೇಪರ ಓದುವ ಸ್ಟಾಂಡನ್ನು ನೀಡಿದ್ದಕ್ಕಾಗಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿಯ ಉಪಾಧ್ಯಕ್ಷರಾದ ಲೋಕೇಶ್ ನಾಯ್ಕ , ಸದಸ್ಯರಾದ ತೇಜಕುಮಾರ ಜೈನ, ವೆಂಕಟೇಶ ನಾಯ್ಕ ಶಾಲಾಭಿಮಾನಿ ವಿನೋದ ನಾಯ್ಕ, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕ ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಭಾರತಿ ಶಾನಭಾಗ ನಿರೂಪಿಸಿದರು, ಸಿ ಎಸ್ ಬೈಲೂರು ಸ್ವಾಗತಿಸಿದರು, ಪ್ರಕಾಶ ಶಿರಾಲಿ ವಂದನಾರ್ಪಣೆ ಮಾಡಿದರು.

error: