September 25, 2023

Bhavana Tv

Its Your Channel

ಅಲ್ ಇಂಡಿಯಾ ಐಡಿಯಲ್ ಟೇಚರ್ಸ್ ಅಸೋಸಿಯೇಶನ್ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್ ರಿಗೆ ಸನ್ಮಾನ

ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ರಿ) ಕರ್ನಾಟಕ ಭಟ್ಕಳ ಶಾಖೆಯು ಇತ್ತಿಚೆಗೆ ಸೇವಾ ನಿವೃತ್ತಿ ಹೊಂದಿದ ಭಟ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ್ ಎಂ. ಮೊಗೇರ್ ರಿಗೆ ಅವರ ಸ್ವನಿವಾಸದಲ್ಲಿ ಫಲಪುಷ್ಪಾ ನೀಡಿ ಗೌರವಿಸಿ ಅಭಿನಂದನಾ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಲ್ ಇಂಡಿಯಾ ಐಡಿಯಲ್ ಟೇಚರ್ಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ, ನಿಮ್ಮ ವೃತ್ತಿಪರ ಸಾಧನೆಗಳ ಹೊರತಾಗಿ, ನಿಮ್ಮ ಸಹಾನುಭೂತಿಯ ಸ್ವಭಾವ ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಹೊಂದಿರುವ ನೈಜ ಕಾಳಜಿ ನಿಜಕ್ಕೂ ಪ್ರಶಂಸನೀಯ. ನಿಮ್ಮ ಅಸಾಧಾರಣ ನಾಯಕತ್ವವು ಶಿಕ್ಷಣ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಸಮುದಾಯ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪರವಾಗಿ, ನಿಮ್ಮ ಅಸಾಧಾರಣ ಸೇವೆ ಮತ್ತು ಅಚಲವಾದ ಸಮರ್ಪಣೆಗೆ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ರಿ) ಐಟಾ ಉತ್ತರಕನ್ನಡ ಜಿಲ್ಲೆ ಭಟ್ಕಳ ತಾಲೂಕು ನಿಮಗೆ ವಿನಮ್ರ ಭಾವನೆಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತದೆ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್, ನಿಮ್ಮೆಲ್ಲರ ಪ್ರೀತಿ, ಸಹಕಾರದಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನನ್ನ ಸೇವಾವಧಿಯಲ್ಲಿ ಸಾಧನೆ ಏನಾದರೂ ಮಾಡಿದ್ದಲ್ಲಿ ಅದು ನಿಮ್ಮೆಲ್ಲರ ಪ್ರೀತಿ ಆಶೀರ್ವಾದವೇ ಆಗಿದೆ ಎಂದರು.
ಇದೇ ಸಂದಭರ್ದಲ್ಲಿ ನ್ಯೂಶಮ್ಸ್ ಶಾಲೆಯ ಕಾರ್ಯದರ್ಶಿ ಅನಂ ಆಲಾ ಎಂ.ಟಿ. ಹಾಗೂ ಪ್ರಾಂಶುಪಾಲ ಲಿಯಾಖತ್ ಅಲಿ ದೇವಿದಾಸ್ ಮೊಗೇರ್ ರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಐಟಾ ಉತ್ತರಕನ್ನಡ ಜಿಲ್ಲಾಧ್ಯಕ್ಷ ಅಲಿ ಮನೆಗಾರ, ತಾಲೂಕಾಧ್ಯಕ್ಷ ನಯೀಮುಲ್ ಹಕ್, ಸಾದಿಕ್ ಕ್ವಾಜಾ, ಮುತಾಹಿರ್ ಶೇಖ್, ಮುಸ್ತಾಖ್ ಸೈಯ್ಯದ್, ಜಮಾಲ್ ಖಾನ್, ನೂರ್ ಜಾಹಂ ಶೇಖ್, ಮೆಹತಾಬ್ ನಿಗಾರ್ ಖಾನ್, ಸಾಲೆಹಾ ಶಿರೀನ್, ಮೋಹಸಿನಾ ಗೊರ್ಟೆ ಉಪಸ್ಥಿತರಿದ್ದರು.

error: