February 6, 2025

Bhavana Tv

Its Your Channel

ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,

ಭಟ್ಕಳ : ತಂತ್ರಜ್ಞಾನ ಪ್ರಗತಿ ಹೊಂದುತ್ತಿರುವAತೆ ಅದರ ದುರುಪಯೋಗವೂ ಅಷ್ಟೇ ವೇಗದಲ್ಲಿ ನಡೆಯುತ್ತಿದೆ. ಕುಳಿತಲ್ಲಿಂದಲೇ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಖದೀಮರ ಲಕ್ಷಾಂತರ ರೂ ಹಣವನ್ನು ಕ್ಷಣಾರ್ಧದಲ್ಲಿ ಮಾಯ ಮಾಡಿರುವ ಘಟನೆ ಸದ್ಯ ಭಟ್ಕಳದಲ್ಲಿ ನಡೆದಿದೆ.

ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 4,40,000 ಹಣವನ್ನು ಖದೀವರು ಮಾಯ ಮಾಡಿದ್ದಾರೆ. ಹಣ ಕಳೆದುಕೊಂಡ ವ್ಯಕ್ತಿಯನ್ನು.ಕೇಶವ ಗೋವಿಂದ ಮೊಗೇರ( 62) ಇಲ್ಲಿನ ತೆಂಗಿನಗುAಡಿ ಹೆಬಳೆಯ ಮಾಸ್ತಿಮನೆ ನಿವಾಸಿ ಎಂದು ತಿಳಿದು ಬಂದಿದೆ. ಇವರು ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ಇವರ ವ್ಯವಹಾರದ ಸಲುವಾಗಿ ಭಟ್ಕಳ ಬಂದರ ರೋಡಿನಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಕರಂಟ್ ಅಕೌಂಟ ಹೊಂದಿದ್ದರು. ಮೇ 10 ರಂದು ಸಂಜೆ 4.45ರ ಸುಮಾರಿಗೆ ಇವರ ಮೊಬೈಲ್ ಹ್ಯಾಕ್ ಮಾಡುವ ಮೂಲಕ ಕೆನರಾ ಬ್ಯಾಂಕ ಖಾತೆಯಲ್ಲಿದ್ದ ಒಟ್ಟೂ 440000/-ಹಣವನ್ನು ಮಾಯ ಮಾಡಿದ್ದಾರೆ. ಈ ಕುರಿತು ಸೈಬರ್ ಸೈಬರ್ ಕ್ರೈಂ ಪ್ರಕರಣ ದಾಖಲಾಗಿದ್ದು ಭಟ್ಕಳ ಗ್ರಾಮೀಣ ಕೂಡ ಸಹ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಸಿ.ಪಿ.ಐ ಚಂದನ ಗೋಪಾಲ್ ತನಿಖೆ ಕೈಗೊಂಡಿದ್ದಾರೆ.

error: