July 11, 2024

Bhavana Tv

Its Your Channel

ಮಾದೇವ ಬಿಳಿಯ ನಾಯ್ಕ ಇವರ ಸಂತಾಪ ಸೂಚಕ ಸಭೆ

ಭಟ್ಕಳ: ಕಳೆದ ವಾರ ಅನಾರೋಗ್ಯದಿಂದ ನಿಧನರಾದ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಮೂಡಭಡ್ಕಳ ಇದರ ಸ್ಥಾಪಕ ಅಧ್ಯಕ್ಷರಾಧ ನಿವೃತ್ತ ದೈಹಿಕ ಶಿಕ್ಷಕರಾದ ಮಾದೇವ ಬಿಳಿಯ ನಾಯ್ಕ  ಇವರ ಸಂತಾಪ ಸೂಚಕ ಸಭೆಯನ್ನು ಇಲ್ಲಿನ ಮೂಡಭಡ್ಕಳದ ಪರಶುರಾಮ ಸ್ಪೋರ್ಟ್ಸ್ ಕ್ಲಬ್  ನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ನಂತರ ಮಾತನಾಡಿದ ಅವರು ಜೋಯಿಡಾ ತಾಲೂಕಿನಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಆರಂಭಿಸಿದ ಅವರು ಅನೇಕ ಕ್ರೀಡಾ ಸಂಸ್ಥೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  ಪರಶುರಾಮ ಕಬ್ಬಡಿ ಟೀಮ್‌ನ ಸಂಸ್ಥಾಪಕರೂ ಆಗಿದ್ದರು.ಪರಿಶುದ್ಧ ಮನಸ್ಸಿನವರಾಧ ಮಾದೇವ ನಾಯ್ಕ ಅವರು ಯಾರಲ್ಲೂ ದ್ವೇಷವನ್ನು ಇಟ್ಟುಕೊಂಡವರಲ್ಲ ಕ್ರೀಡೆಯಲ್ಲಿ ಉನ್ನತ ಕನಸನ್ನು ಇಟ್ಟುಕೊಂಡವರು ಕೇವಲ ಕುಟುಂಬಕ್ಕೆ ಸೀಮಿತವಾಗದ ಅವರು ಹುಟ್ಟಿ ಬೆಳೆದ ಗ್ರಾಮಕ್ಕೆ ಸೀಮಿತವಾದವರು,ನಮ್ಮ ಅವರ ಸ್ನೇಹ ಕಬಡ್ಡಿಯಲ್ಲಿ ಆರಂಭವಾಗಿದ್ದು ಸತತ ೪೦ ವರ್ಷ ನಮ್ಮ ಗೆಳೆತನ ಆಗಿತ್ತು ಯಾವುದೇ ಒಡಕು ಆಗಲಿ ಅನುಮಾನ ಆಗಲಿ ಪರಿಶುದ್ಧ ಸ್ನೇಹ ವಾಗಿತ್ತು ಯಾವುದೇ ತಪ್ಪು ಕಂಡಲ್ಲಿ ಒಪ್ಪುತ್ತಿರಲಿಲ್ಲ ಎಲ್ಲ ಜಾತಿ ಧರ್ಮ ಮೀರಿ ಬೆಳೆದಂಥವರಾಗಿದ್ದರು, ಎಲ್ಲ ಜಾತಿ ಬಗ್ಗೆ ಅಪಾರ ಗೌರವ ಹೊಂದಿದ್ದ ಇವರು ಕಬಡ್ಡಿ ಆಟದಲ್ಲಿ ಸಂಪೂರ್ಣವಾಗಿ ತೋಡಿಕೊಂಡಿದ್ದು ಎಷ್ಟು ಜನ ಕಬ್ಬಡ್ಡಿ ಪಟುಗಳನ್ನು ಪರಶುರಾಮ ಸ್ಪೋರ್ಟ್ಸ್ ಕ್ಲಬ್‌ಗೆ ತಂದು ಅವರಿಗೆ ತರಬೇತಿ ನೀಡಿ ರಾಜ್ಯ ಹಾಗೂ ಅಂತ ರಾಜ್ಯ ಮಟ್ಟದಲ್ಲಿ ಗುರುತಿಸುವಂತ ಕೆಲಸ ಮಾಡಿದ್ದಾರೆ ಅವರ ಕನಸ್ಸನ್ನು ನಾವು ನನಸು ಮಾಡಬೇಕು. ಮಾದೇವ ನಾಯ್ಕ ಅವರ  ಕೊಡುಗೆ ಅಪಾರ. ಇಂದಿನ ಯುವಜನಾಂಗ ಅವರ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕೆಂದರು.ನನಗೆ ಅಣ್ಣ ತಮ್ಮ ಯಾರು ಇಲ್ಲ ಆಗಿದ್ದು ಇವರೆ ನನ್ನ ಅಣ್ಣನ ಸ್ಥಾನದಲ್ಲಿ ನಿಂತವರು ಯಾವುದೇ ಸಂದರ್ಭದಲ್ಲಿ ನನ್ನ ಬೆನ್ನೆಲುಬಾಗಿ ಇದ್ದವರು ಎಂದು ಭಾವುಕರಾದರು.

ಬಳಿಕ ಮಜ್ಲಿಸ್-ಎ-ಇಸ್ಲಾಹ್ ವಾ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ ಒಳ್ಳೆ ವ್ಯಕ್ತಿತ್ವ ಗುಣ ಹೊಂದಿದ ಮಾದೇವ ನಾಯ್ಕ ಅವರು ಕಬಡ್ಡಿ ಆಟದಲ್ಲಿ ಅತ್ಯಂತ ಪರಿಣಿತರಾಗಿದ್ದ ಇವರು ಪರಶುರಾಮ್ ಸ್ಪೋರ್ಟ್ಸ್ ಕ್ಲಬ್ ಗೆ ಒಳ್ಳೆಯ ಕೀರ್ತಿ,ಒಳ್ಳೆಯ ಹೆಸರು ಮಾಡಿದ ವ್ಯಕ್ತಿಯಾಗಿದ್ದರು ಯಾವುದೇ ಕಬಡ್ಡಿ ಆಟದ ಸಂದರ್ಭದಲ್ಲಿ ಜಾತಿ,ಧರ್ಮ ಬೇದ ಭಾವ ಎನ್ನದೆ ಉತ್ತಮ ನಿರ್ಣಯ ನೀಡುವಲ್ಲಿ ಅತ್ಯಂತ ಪರಿಶುದ್ಧ ವ್ಯಕ್ತಿಯಾಗಿದ್ದರು ಸಾವನ್ನೋದು ಪ್ರತಿಯೊಬ್ಬರಿಗೆ ಬರುವಂಥದ್ದು ಆದರೆ ಅವರು ಮಾಡಿದಂತ ಒಳ್ಳೆ ಕೆಲಸವನ್ನು ಗಮನದಲ್ಲಿ ತೆಗೆದುಕೊಂಡು ನಾವು ಎಲ್ಲರೂ ಸೇರಿ ಒಳ್ಳೆ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದ ರಾಜ್ಯ ಬಾಡಿ ಬಿಲ್ಡರ್ಸ್ನ ಅಸೋಸಿಯೇಷನ್ ಕಾರ್ಯದರ್ಶಿ ಯಾದ ಜಿ.ಡಿ.ಭಟ್ಟ ಮಾತನಾಡಿ ಅವರ ಅಗಲುವಿಕೆಯು ತುಂಬಲಾರದ ನಷ್ಟವಾಗಿದೆ.  ಅವರು ನನಗೆ ಚಿರಪರಿಚಿತರಾಗಿದ್ದು,ಕ್ರೀಡೆಯ ಪ್ರತಿಯೊಂದು ವಿಧದಲ್ಲೂ ಸಂಪೂರ್ಣ ಸಹಕಾರ ನೀಡಿದ್ದಾರೆ. ಎಲ್ಲರೊಡನೆ ಬೆರೆತು, ಎಲ್ಲರ ಪ್ರೀತಿಗೆ ಪಾತ್ರರಾದ ಅವರ ನಡೆನುಡಿ ನಮಗೆಲ್ಲ ಮಾರ್ಗದರ್ಶಿಯಾಗಿದೆ,ಮೇರು ವ್ಯಕ್ತಿತ್ವ ಹಾಗೂ ಸರ್ವ ಧರ್ಮಗಳನ್ನು ಸಮನಾಗಿ ಗೌರವಿಸುವ ಗುಣ ನಮಗೆಲ್ಲರಿಗೂ ಅದರ್ಶವಾಗಬೇಕೆಂದು ಮತ್ತು ಅವರ ಅಗಲಿಕೆಯು  ತುಂಬಲಾರದ ನಷ್ಟವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ಮೃತ ಮಾದೇವ ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಆತ್ಮಕ್ಕೆ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂದು ಒಂದು ನಿಮಿಷಗಳಕಾಲ ಮೌನ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗಣೇಶ್ ನಾಯ್ಕ,ಜಿಲ್ಲಾ ಅಮೆಚೂರ್ ಕಬಡ್ಡಿ ಕಾರ್ಯದರ್ಶಿ ಅನಿಲ್  ಪೂಜಾರಿ,ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಜೀಜು ರೆಹಮಾನ್, ಸರ್ಪನಕಟ್ಟೆ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಾಸು ನಾಯ್ಕ, ಫ್ರೆಂಡ್ಸ್ ಜಿಮ್ ಮಾಲಿಕರಾಧ ವೆಂಕಟೇಶ ನಾಯ್ಕ, ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ವೆಂಕಟೇಶ ದೇವಡಿಗ,ಹಿರಿಯ ಕಬಡ್ಡಿ ಆಟಗಾರಾದ ವೆಂಕಟರಮಣ ಮೊಗೇರ್,ಜಾಪ್ಪರ ಸಾಧಿಕ,ಸುರೇಶ ನಾಯ್ಕ,ಈಶ್ವರ ನಾಯ್ಕದುರ್ಗಪ್ಪ ನಾಯ್ಕ, ರಾಮಕೃಷ್ಣ ಕೂಡಿಯಾ ಸೇರಿದಂತೆ ಮುಂತಾದವರು ಉಪಸ್ಥಿತಿ ಇದ್ದರು. ಕಾರ್ಯಕ್ರಮವನ್ನು ಉಮೇಶ ನಾಯ್ಕ ಸರ್ಪನಕಟ್ಟೆ ನಿರೂಪಿಸಿದರು.

error: