October 3, 2024

Bhavana Tv

Its Your Channel

ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್‌ಡಿ ಪೊಲೀಸರು

ಭಟ್ಕಳ : ರವಿವಾರ ಸಾಯಂಕಾಲ ಭಟ್ಕಳದ ತಲಗೋಡಿನಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣಪತಿಯನ್ನು ತಲಗೋಡ ಸಮುದ್ರದಲ್ಲಿ ವಿಸರ್ಜನೆ ಮಾಡುವ ವೇಳೆ ಸಮುದ್ರದ ಅಲೆಗೆ ಕೊಚ್ಚಿಹೋದ ಬಾಲಕನನ್ನು ಭಟ್ಕಳ ಕರಾವಳಿ ಕಾವಲು ಪಡೆಯ ಕೆ.ಎನ್.ಡಿ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಬಂದರ ನಿವಾಸಿ ಸಮರ್ಥ ಶ್ರೀಧರ ಖಾರ್ವಿ(೧೪) ರಕ್ಷಣೆಯಾದ ಬಾಲಕ. ಮೂರ್ತಿ ವಿಸರ್ಜನೆ ವೇಳೆ ಬೃಹಧಾಕಾರದ ಅಲೆಗೆ ಕೊಚ್ಚಿ ಆಳ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗುವ ಸಮಯದಲ್ಲಿ ಕರಾವಳಿ ಕಾವಲು ಪಡೆಯ ಸಿಪಿಐ ಕುಸುಮಧರ ಕೆ ಮಾರ್ಗದರ್ಶನದಲ್ಲಿ ಕೆ.ಎನ್.ಡಿ ಸಿಬ್ಬಂದಿ ರಾಘವೇಂದ್ರ ನಾಯ್ಕ, ಸಚಿನ ಖಾರ್ವಿ ಜೀವದ ಹಂಗು ತೊರದು ಆಳಸಮುದ್ರದಲ್ಲಿ ಈಜಿ ಜೀವ ಕಾಪಾಡಿದ್ದಾರೆ. ಕರಾವಳಿ ಕಾವಲು ಪಡೆಯ ಕೆ.ಎನ್.ಡಿ ಪೊಲೀಸರ ಈ ಸಾಹಸ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.ಬಾಲಕನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

error: