December 4, 2024

Bhavana Tv

Its Your Channel

ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ

ಭಟ್ಕಳ ; ಶಿಕ್ಷಕರಾಗುವ ತಾವು ತಮ್ಮ ವೃತ್ತಿಯ ಪ್ರತಿ ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕುರಿತು ಯೋಚಿಸಬೇಕು. ಪಾಠದ ಪ್ರಾರಂಭದಲ್ಲಿ ಪುನರಾವರ್ತನೆ ಮಾಡುವುದು ಮತ್ತು ಪಾಠದ ಕೊನೆಯಲ್ಲಿ ಮೌಲ್ಯಮಾಪನ ಮಾಡುವುದು ಅತ್ಯಂತ ಮಹತ್ವದ್ದು. ಆದರೆ ಬಿಎಡ್ ಅಲ್ಲಿ ಕಲಿತ “ಐದು ಈ” ಗಳು ಶಿಕ್ಷಕರಾಗಿ ಕೆಲವು ವರ್ಷಗಳ ನಂತರ ಕಳೆದು ಹೋಗುತ್ತವೆ ಎಂದು ಭಟ್ಕಳದ ಕಿತ್ತೂರು ರಾಣಿ ಚೆನ್ನಮ್ಮಾ ವಸತಿ ಶಾಲೆಯ ವಿಜ್ಞಾನ ಶಿಕ್ಷಕರಾಗಿರುವ ವಿಜಯ ಮೊಗೇರ ಹೇಳಿದರು.

ಅವರು ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಾರ್ಷಿಕ ಬಹುಮಾನ ವಿತರಣೆ ಮತ್ತು ದೀಪದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಚೇರಮನ್ ಡಾ ಸುರೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಡಾ. ಅಜಾತಸ್ವಾಮಿ ಅವರ ತಂದೆಯವರಾದ ದಿವಂಗತ ಎಚ್.ಎನ್.ಜಿ ಮೂರ್ತಿಅವರ ಹೆಸರಿನಲ್ಲಿ ನೀಡುವ ಉತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಭವ್ಯಾ ಕುರಾಡೆ ಪಡೆದುಕೊಂಡರೆ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಯನ್ನು ರಶ್ಮಿ ಎ. ಆರ್ ಪಡೆದುಕೊಂಡರು. ಮಹಾವಿದ್ಯಾಲಯ ನೀಡುವ ಉದಯೋನ್ಮುಖ ಭಾವಿ ಶಿಕ್ಷಕಿ ಪ್ರಶಸ್ತಿಯನ್ನು ಪ್ರಶಿಕ್ಷಣಾರ್ಥಿ ಅನುಶ್ರೀ ಪಡೆದುಕೊಂಡರು. ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ ಡಾ ವಿರೇಂದ್ರ ವಿ. ಶ್ಯಾನಭಾಗ, ವಿಶ್ವನಾಥ ಮಹಾಲೆ, ಉಪನ್ಯಾಸಕ ನಾಗರಾಜ ಮಡಿವಾಳ ಮತ್ತು ಮಹಾವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಜಗದೀಶ ಹರಿಕಾಂತ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿಗಳಾದ ಮೈನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅನ್ನಪೂರ್ಣಾ ಸ್ವಾಗತಿಸಿದರು, ಗೀತಾ ವಂದಿಸಿದರು ಹಾಗೂ ದೀಪಲಕ್ಷಿö್ಮÃ, ಪ್ರೀಯಾ, ಪೂಜಾ, ಅರ್ಚನಾ ಮತ್ತು ಪಲ್ಲವಿ ನಿರೂಪಿಸಿದರು.

error: