April 24, 2024

Bhavana Tv

Its Your Channel

ಮೂರು ವರ್ಷ ಕಳೆದರೂ ಸ್ಲಂ ಬೋರ್ಡ್ ಮನೆ ನಿರ್ಮಾಣ ವಿಳಂಬ ಅಂಬೇಡ್ಕರ್ ಸೇನೆಯಿಂದ ಪೋಲಿಸ್ ವರಿಷ್ಟಾಧಿಕಾರಿಗೆ ಮನವಿ

ದಾಂಡೇಲಿ:- ಮೂರು ವರ್ಷ ಕಳೆದರೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು (ಸ್ಲಂ ಬೋರ್ಡ್)ಬಡವರಿಗೆ ಮನೆಗಳನ್ನು ಕಟ್ಟಿ ಕೊಡದೆ ಅರ್ಧಕ್ಕೆ ನಿಲ್ಲಿಸಿದ್ದಾರೆ. ಕೂಡಲೇ ಕಟ್ಟಡವನ್ನು ಸಂಪೂರ್ಣ ಮಾಡಿ ಕೊಡಬೇಕೆಂದು ದಾಂಡೇಲಿಯ ಉಪ ಪೋಲಿಸ ವರಿಷ್ಠಾಧಿಕಾರಿಯವರಿಗೆ ಡಾ.ಬಿ.ಆರ್.ಅಂಬೇಡ್ಕರ ಸೇನೆ (ಆದಿ ಜಾಂಬವAತ ಸಂಘ) ಆಗ್ರಹಿಸಿ. ಸ್ಲಮ್ ಬೋರ್ಡ್ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ತಿಳಿಸಿದೆ. ಲಮಾಣಿದಲ್ಲಿ ನಡೆದಿರುವ ಸ್ಲಂ ಬೋರ್ಡ್ ಕೆಲಸವನ್ನು ಆರಂಭಿಸಬೇಕೆAದು ಮನವಿ ಮಾಡಲಾಗಿದೆ. ಈ ಹಿಂದೆಯೂ ಸಹ ನಗರಸಭೆ ಕಮಿಷನರ ದಾಂಡೇಲಿ, ತಹಶಿಲ್ದಾರ ದಾಂಡೇಲಿ, ಜಿಲ್ಲಾಧಿಕಾರಿಗೆ ಲಿಖಿತವಾಗಿ ದೂರು ನೀಡಿದ್ದರು. ಬಡವರ ಮನೆಯನ್ನು ಅತಿ ಶೀಘ್ರದಲ್ಲಿ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಕೂಡ ಮಾಡಿಕೊಂಡಿದ್ದರೂ ಸ್ಲಮ್ ಬೋರ್ಡ್ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲವೆAದು ಸಂಘದ ರಾಜ್ಯ ಉಪಾಧ್ಯಕ್ಷರು ಚಂದ್ರಕಾAತ ನಡಿಗೆರ ತಿಳಿಸಿದ್ದಾರೆ., ಸಂಘದ ಪ್ರಮುಖರಾದ ನಾನಾ ನಾಯಕ, ರವಿ ನಾಯಕ, ಅಶೋಕ ರಾಥೋಡ,ರೀಪಾಂಡು ಲಮಾಣಿ, ಸೀತಾ ರಾಥೋಡ,ರತ್ನ ಲಮಾಣಿ, ಸವಿತಾ ಮುಂತಾದವರು ಉಪಸ್ಥಿತರಿದ್ದರು.

error: