April 20, 2024

Bhavana Tv

Its Your Channel

ಹಲವು ಸಂಘ-ಸOಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿ ನೂತನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ದಂಪತಿಗಳಿಗೆ ದಾಂಡೇಲಿಯಲ್ಲಿ ಗೌರವಪೂರ್ಣ ಸನ್ಮಾನ

ದಾಂಡೇಲಿ:- ಉತ್ತರಕನ್ನಡ ಜಿಲ್ಲೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆ. ಹಾಗಾಗಿ ಸಹಜವಾಗಿಯೇ ಇಲ್ಲಿಯ ಸಾಹಿತ್ಯಿಕ ಚಟುವಟಿಕೆಗಳ ಹೆಚ್ಚಿನ ಹೊಣೆ ಸಾಹಿತ್ಯ ಪರಿಷತ್ತಿನ ಮೇಲಿರುತ್ತದೆ. ಕೆಲ ವರ್ಷ ಆ ನಿರೀಕ್ಷೆ ಹಸಿಯಾಗಿದೆ. ಆದರೆ ಇದೀಗ ಬಹು ನೀರಿಕ್ಷೆಯನ್ನಿಟ್ಟುಕೊಂಡು ಜಿಲ್ಲೆಯ ಕಸಾಪ ಆಜೀವ ಸದಸ್ಯರು ಬಿ.ಎನ್. ವಾಸರೆಯವರನ್ನು ದಾಖಲಾರ್ಹ ಮತಗಳಿಂದ ಆಯ್ಕೆ ಮಡಿದ್ದಾರೆ. ನನಗೂ ಸಹ ವಾಸರೆಯವರು ಸಮರ್ಥವಾಗಿಯೇ ಪರಿಷತ್ತನ್ನು ಮುನ್ನಡೆಸುತ್ತಾರೆಂಬ ವಿಶ್ವಾಸವಿದೆ. ಎಲ್ಲ ಸಾಹಿತ್ಯಿಕ ಚಟುವಟಿಕೆಗಳ ಜೊತೆಗೆ ಮನುಷ್ಯ ಪ್ರೀತಿಯ ಕೆಲಸ ಸಾಹಿತ್ಯ ಪರಿಷತ್ತಿನಿಂದ ನಡೆಯುವಂತಾಗಲಿ ಎಂದು ಹಿರಿಯ ಸಾಹಿತಿ, ಸಂಸ್ಕೃತಿ ಚಿಂತಕ ಸುಬ್ರಾಯ ಮತ್ತಿಹಳ್ಳಿ ನುಡಿದರು.

ಅವರು ದಾಂಡೇಲಿಯಲ್ಲಿ ಗೆಳೆಯರ ಬಳಗ, ದಾಂಡೇಲಿ ಪ್ರೆಸ್ ಕ್ಲಬ್, ಕರ್ನಾಟಕ ಸಂಘ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಎಸ್ಕಾಡ್, ವೆಸ್ಟಕೋಸ್ಟ್ ಪೇಪರ್ ಮಿಲ್ ಹಾಗೂ ಹಲವು ಸಮುದಾಯ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಎನ್. ವಾಸರೆಯವರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಚುನಾವಣೆ ಜಾತೀಯತೆಯನ್ನು ಮೀರಿ ನಡೆದಿದೆ. ರಾಜ್ಯದಲ್ಲಿಯೇ ದಾಖಲೆಯ ಮತಗಳ ಅಂತರದ ಗೆಲುವಾಗಿರುವುದು ಗಮನಾರ್ಹ. ಹಾಗಾಗಿ ಈ ಗೆಲುವು ಅವರ ಹೊಣೆಗಾರಿಕೆಯನ್ನು ಹೆಚ್ಚಿಸಿದೆ ಎಂದ ಮತ್ತಿಹಳ್ಳಿಯವರು ವಾಸರೆಯವರು ಚುನಾವಣೆಯುದ್ದಕ್ಕೂ ಯಾರ ಬಗ್ಗೆಯೂ ಯಾವ ಆಕ್ಷೇಪದ ಮಾತನಾಡದೇ ಸಜ್ಜನಿಕೆಯಿಂದÀ ಮತ ಯಾಚಿಸಿದ್ದು ವಿಶೇಷವಾಗಿತ್ತು. ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಮಾದರಿಯಾಗಿತ್ತು. ಅದೂ ಕೂಡಾ ಅವರ ಗೆಲುವಿನ ಅಂತರದ ಹೆಚ್ಚಳಕ್ಕೆ ಕಾರಣವಾಗಿತ್ತು ಎಂದರು.

ಕನ್ನಡ ಭಾಷೆ ಹೃದಯದ ಭಾಷೆಯಾಗಿರಬೇಕು. ಅದು ಜಾತಿ ಧರ್ಮಕ್ಕೆ ಅಂಟಿಕೊಳ್ಳಬಾರದು. ಕರ್ನಾಟಕದಲ್ಲಿದ್ದ ಎಲ್ಲ ಜಾತಿ ಸಮುದಾಯದವರೂ ಕನ್ನಡವನ್ನು ಬಳಸಬೇಕು. ಪ್ರೀತಿಸಬೇಕು. ಕನ್ನಡ ವಿಶ್ವ ಮಾನ್ಯತೆಯನ್ನು, ಹಲವು ವಿಶ್ವ ದಾಖಲೆಯನ್ನು ಮಾಡಿದಂತಹ ಭಾಷೆಯಾಗಿದೆ. ಈ ಭಾಷೆಯ ಪ್ರಾತಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಜಾತಿ-ಮತವನ್ನು ಮೀರಿ ನಡೆಯುವಂತಾಗಲಿ. ವಾಸರೆಯವರ ಸಾರಥ್ಯದಲ್ಲಿ ಅದು ಆಗುತ್ತದೆ ಎಂಬ ನಂಬಿಕೆಯAತೂ ಇದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಡಿ.ವೈ.ಎಸ್.ಪಿ. ಕೆ.ಎಲ್. ಗಣೇಶರವರು ಮಾತನಾಡಿ ಒಬ್ಬ ಪತ್ರಕರ್ತನಾಗಿಯೂ ಏನೆಲ್ಲ ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳನ್ನು ಮಾಡಬಹುದು ಎಂಬುದಕ್ಕೆ ವಾಸರೆಯವರೇ ನಿದರ್ಶನವಾಗಿದ್ದಾರೆ. ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷತೆ ಅವರ ಅರ್ಹತೆಗೆ ಸಂದ ಗೌರವವಾಗಿದೆ ಎಂದರು.

ಪೌರಾಯುಕ್ತ ರಾಜಾರಾಮ ಪವಾರ ಮಾತನಾಡಿ ನಾಡು ನುಡಿ ಸಂಘಟನೆಯ ವಿಚಾರದಲ್ಲಿ ವಾಸರೆಯವರ ಕಾರ್ಯಗಳನ್ನು ನಾವು ಕಂಡವರಾಗಿದ್ದೇವೆ. ಅವರಲ್ಲಿ ಸಂಘಟನೆಯ ಚಾತುರ್ಯತೆಯಿದೆ. ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತ ಗಟ್ಟಿಯಗಿ ಬೆಳೆಸಲು ನಾವೆಲ್ಲ ಅವರಿಗೆ ಜೊತೆಯಾಗೋಣ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರು ಅಂಕೋಲೆ ನನ್ನ ಜನ್ಮ ಭೂಮಿ, ದಾಂಡೇಲಿ ಕರ್ಮಭೂಮಿ, ಅಂಕೋಲೆ ಉಸಿರು ಕೊಟ್ಟ ನೆಲ. ದಾಂಡೇಲಿ ಹೆಸರು ಕೊಟ್ಟ ನೆಲ. ಹಾಗಾಗಿ ದಾಂಡೇಲಿಯ ಜನರ ಪ್ರೀತಿಯನ್ನು, ಅವರು ನನ್ನ ಮೇಲಿಟ್ಟ ವಿಶ್ವಾಸವನ್ನು, ದಾಂಡೇಲಿ ನನಗೆ ಕೊಟ್ಟ ಬದುಕನ್ನ ಮರೆಯಲಾಗದ್ದು, ಈ ಚುನಾವಣೆಯಲ್ಲಿ ದಾಂಡೇಲಿಗರು ಹಾಗೂ ಇಡೀ ಉತ್ತರ ಕನ್ನಡ ಜಿಲ್ಲೆ ನನಗೆ ತೋರಿದ ಬೆಂಬಲದ ಋಣವನ್ನು ತೀರಿಸಲಾಗದ್ದು. ಇಂದು ಇಡೀ ಉತ್ತರ ಕನ್ನಡ ಜಿಲ್ಲೆ ನನ್ನ ಮೇಲೆ ವಿಶ್ವಾಸವಿಟ್ಟು ದಾಖಲೆಯ ಮತ ನೀಡಿ ಗೆಲ್ಲಿಸಿದ್ದಾರೆ. ನನ್ನ ಜಿಲ್ಲೆಯಲ್ಲಿ ಕನ್ನಡದ ಕೆಲಸ ಮಾಡುವ ಅವಕಾಶ ನೀಡಿದ್ದಾರೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಯತ್ನಿಸುವೆ, ಅದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ. ನಾನು ಮೈಮರೆಯದ ಹಾಗೆ ತಾವೆಲ್ಲರೂ ನನ್ನ ತಪ್ಪುಗಳು ಕಂಡಾಗ ತಿದ್ದುತ್ತಿರಬೇಕು ಎಂದರು.

ಚುನಾವಣೆಯ ವೇಳೆ ನನ್ನ ಬಗ್ಗೆ ಕೆಲವರು ವಯಕ್ತ್ತಿಕವಾಗಿ ಸಾಕಷ್ಟು ಅಪ ಪ್ರಚಾರ ಮಾಡಿದರು. ಆದರೆ ನಾನು ಎಲ್ಲಿಯೂ ಅದಕ್ಕೆ ಪ್ರತಿಕ್ರಿಯಿಸಿಲ್ಲ. ಯಾರ ಬಗ್ಗೆಯೂ ಮಾತನಾಡಿಲ್ಲ. ಯಾಕೆಂದರೆ ಇದು ಸಾಹಿತ್ಯ ಪರಿಷತ್ತಿನ ಚುನಾವಣೆಯಾಗಿತ್ತು. ಅದರ ಘನತೆಯನ್ನು ಮೀರಿ ಚುನಾವಣೆ ಎದುರಿಸುವುದು ಸರಿಯಾದುದಲ್ಲ ಎಂಬ ಅರಿವು ನನಗಿತ್ತು. ನನ್ನ ಬಗ್ಗೆ ಸುಳ್ಳು ಅಪ ಪ್ರಚಾರ ಮಾಡಕೊಂಡು ಹೋದವರಿಗೆ ಅವರು ನಂಬಿರುವ ದೇವರು ಒಳ್ಳೆಯದು ಮಾಡಲೆಂದು ಹೇಳಿ ತನ್ನ ದಾರಿಯಲ್ಲಿ ನೆರವಾದವರನ್ನು ನೆನೆಸಿಕೊಂಡರು.

ನಾನು ಕನ್ನಡದ ಪರಿಚಾರಕನಾಗಿರುತ್ತೇನೆಯೇ ಹೊರತು ಅಧ್ಯಕ್ಷ ಎಂಬ ಹಮ್ಮಿನಿಂದಿರವುದಲ್ಲ. ನನ್ನ ಮುನ್ನೋಟಗಳನ್ನು ಸಾಕಾರಗೊಳಿಸಲು, ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಘಟಿಸುವ ಮೂಲಕ ಜಿಲ್ಲೆಯ ಜನರ ಮೂರು ದಶಕಗಳ ಕನಸು ನನಸಾಗಿಸಲು ಸಂದರ್ಭ ಬಂದರೆ ಜೋಳಿಗೆ ಹಿಡಿಯಲೂ ಸಿದ್ದನಿದ್ದೇನೆ ಎಂದರು.

ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಯು.ಎಸ್. ಪಾಟೀಲ , ರೋಟರಿ ಕ್ಲಬ್‌ನ ಅಧ್ಯಕ್ಷ ಯೋಗೇಶ ಸಿಂಗ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಉದಯ ಶೆಟ್ಟಿ, ವೆಸ್ಟ್ಕೋಸ್ಟ್ ಪೇಪರ್ ಮಿಲ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಗೆಳೆಯರ ಬಳಗದ ಕೀರ್ತಿ ಗಾಂವಕರ, ಮೋಹನ ಹಲವಾಯಿ, ಸಾಹಿತಿ ಡಾ. ಆರ್.ಜಿ. ಹೆಗಡೆ , ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಮುರ್ತುಜಾ ಹುಸೇನ ಆನೆಹೊಸರ ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ನಗರದ ೫೦ಕ್ಕೂ ಹೆಚ್ಚಿನ ಸಂಘ ಸಂಸ್ಥೆಯವರು ಬಿ.ಎನ್. ವಾಸರೆಯವರನ್ನು ಅಭಿನಂದಿಸಿ ಸನ್ಮಾನಿಸಿದರು.

error: