April 25, 2024

Bhavana Tv

Its Your Channel

ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕಿ ಅವಮಾನ, ಉ.ಕ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಖಂಡನೆ

ದಾoಡೇಲಿ: ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರು ಕೊಲ್ಲಾಪುರದಲ್ಲಿ ಕನ್ನಡ ದ್ವಜವನ್ನು ಸುಟ್ಟ ಕಾರಣಕ್ಕೆ ಎಂ.ಇ.ಎಸ್. ಮುಖಂಡನೋರ್ವನ ಮುಖಕ್ಕೆ ಮಸಿ ಬಳಿದ ಸ್ವಾಭಿಮಾನಿ ಕನ್ನಡದ ಕಾರ್ಯಕರ್ತನ ಮೇಲೆ ಕೊಲೆ ಪ್ರಕರಣ ದಾಖಲಿಸಿದ ಹಾಕಿದ ಪೊಲೀಸರ ಕ್ರಮ ಸರಿಯಾದುದ್ದಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ಈ ನಾಡಲ್ಲಿ ಜೀವಿಸುವ ಪ್ರತಿಯೊಬ್ಬನೂ ಇಲ್ಲಿಯ ಸಂಗತಿಗಳಿಗೆ ಗೌರವಕೊಟ್ಟು ನಡೆಯಬೇಕು. ಕನ್ನಡ ದ್ವಜವನ್ನು ಸುಡುವ ಮೂಲಕ ಈ ನಾಡಿನ ಭಾವೈಖ್ಯತೆಗೆ ಹಾಗೂ ನಾಡು ನುಡಿಯ ವಿಚಾರಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗಿದೆ. ಇಂತಹ ಕೆಲಸವನ್ನು ಯಾರೇ ಮಾಡಿದರೂ ಸಹಿಸುವುದಿಲ್ಲ. ಶಿವಸೇನೆ ಹಾಗೂ ಎಂ.ಇ.ಎಸ್. ಕಾರ್ಯಕರ್ತರು ಪದೇ ಪದೇ ಬೆಳಗಾವಿಯ ಗಡಿಯಲ್ಲಿ ಅದರಲ್ಲೂ ಪ್ರತೀ ಬಾರಿ ಬೆಳಗಾವಿಯಲ್ಲಿ ಆಧಿವೇಶನ ನಡೆಯುವ ಸಂದರ್ಭದಲ್ಲಿ ಇಂತಹ ಕುಕೃತ್ಯ ಮಾಡುತ್ತಿದ್ದು, ಇದನ್ನು ಮಟ್ಟ ಹಾಕುವ ಕೆಲಸ ಸರಕಾರ ಮಾಡಬೇಕಿದೆ. ಅಧಿವೇಶನದಲ್ಲಿ ಚರ್ಚಿಸಿ, ದಿಟ್ಟ ನಿಲುವು ಪ್ರಕಟಿಸಬೇಕಿದೆ.

ಎಂ.ಇ.ಎಸ್. ಕಿಡಿಗೇರಿಗಳು ಕನ್ನಡದ ಬಾವುಟವನ್ನು ಸುಟ್ಟಿದ್ದು ಕ್ಷಮಿಸಲಾರದಂತಹ ಹೇಯ ಕೃತ್ಯ. ಅಂತಹ ನಾಡ ದ್ರೋಹದ ಕೆಲಸ ಮಾಡಿದವರ ಮೇಲೆ ಸರಕಾರ ಹಾಗೂ ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಕೇವಲ ಮಸಿ ಬಳಿದ ಕನ್ನಡದ ಕಾರ್ಯಕತನ ಮೇಲೆಯೇ ಕೊಲೆಯ ಪ್ರಕರಣ ಧಾಖಲಿಸುವುದು ಸಮಂಜಸವಲ್ಲ. ನಾಡದ್ರೋಹದ ಕೆಲಸ ಮಾಡಿದ ಎಂ.ಇ.ಎಸ್. ಕಾರ್ಯಕರ್ತನ ಮುಖಕ್ಕೆ ಕನ್ನಡದ ಕಾರ್ಯಕರ್ತ ಕೇವಲ ಮಸಿಬಳಿದಿದ್ದಾರಷ್ಟೇ. ಆದರೆ ಬೇರೆ ಯಾವುದೇ ಅಹಿಂಸಾತ್ಮಕ ಕೆಲಸ ಮಾಡಿಲ್ಲ. ನಾಡ ದ್ರೋಹದ ಕಲಸ ಮಾಡಿದವರ ಮೇಲೆ ಸ್ವಾಭಿಮಾನಿ ಕನ್ನಡಿಗರಲ್ಲಿ ಈರೀತಿ ಆಕ್ರೋಷ ಬರುವುದು ಸಹಜ. ಅಷ್ಟು ಮಾತ್ರಕ್ಕೆ ಪೊಲೀಸರು ಹಿಂದು ಮುಂದು ನೋಡದೇ ಕೊಲೆ ಕೇಸ್ ಹಾಕುವುದು ಸಹಿಸಲಾಗದ ಸಂಗತಿಯಾಗಿದ್ದು, ಸರಕಾರ ತಕ್ಷಣ ಆ ಪ್ರಕರಣವನ್ನು ಹಿಂಪಡೆಯಬೇಕು. ಹಾಗೂ ನಾಡ ದ್ರೋಹದ ಕೆಲಸ ಮಾಡಿದ ಎಂ.ಇ.ಎಸ್. ಪುಂಡರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

error: