April 19, 2024

Bhavana Tv

Its Your Channel

ಕ.ಸಾ.ಪ ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆ ಹೊಣೆಗಾರಿಕೆ ಸ್ವೀಕಾರ

ವರದಿ: ವೇಣುಗೋಪಾಲ ಮದ್ಗುಣಿ

ದಾಂಡೇಲಿ:- ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆಯವರ ಹೊಣೆಗಾರಿಕೆ ಸ್ವೀಕಾರ ಹಾಗೂ ಉತ್ತರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ದಾಂಡೇಲಿಯ ಹಾರ್ನ್ ಬಿಲ್ ಸಭಾಭವನದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆಯವರು ಸ್ವಾಗತಿಸಿ ಮಾತನಾಡಿ ಆಯ್ಕೆಯಾಗಲು ಸಹಕರಿಸಿದವರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಮುಂದಿನ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯ ಎನ್.ಜಿ ನಾಯಕರವರು ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕಾರ ಪಡೆದ ತುಳಸಿ ಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ಮಹಾದೇವ ವೇಳಿಪ್ ರವರು ವೇದಿಕೆಯ ಮೇಲೆ ಉಪಸ್ಥಿತರಿದ್ದು ಮಾತನಾಡಿದರು. ಅಧ್ಯಕ್ಷತೆಯನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ ಜೋಶಿ ವಹಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೂ ರಾಜಕೀಯ ಚುನಾವಣೆಗೂ ವ್ಯತ್ಯಾಸವಿದೆ. ಚುನಾವಣೆ ಮುಗಿದ ಮೇಲೆ ಎಲ್ಲರೂ ಕನ್ನಡ ಮನಸ್ಸಿನವರು ಒಂದೇ, ಯಾವ ಭೇದ ಭಾವ ಇಲ್ಲದೆ ಕನ್ನಡಕ್ಕಾಗಿ ದುಡಿಯಬೇಕೆಂದರು.ಅಧಿಕಾರ ಸ್ವೀಕರಿಸಿದ ಮೇಲೆ ಜವಾಬ್ದಾರಿ ಹೆಚ್ಚಿದ್ದು ವಿನಯ ಪೂರ್ವಕ ನಡತೆಯನ್ನು ಜನ ವೀಕ್ಷಿಸುತ್ತಾರೆಂದರು. ಕನ್ನಡದ ಅಂಕಿಗಳನ್ನು ಬಳಸಿ, ಕನ್ನಡದಲ್ಲಿ ಸಹಿ ಮಾಡಿ ಕನ್ನಡ ತನವನ್ನು ತೊರಿಸುವ ಮೂಲಕ ಕನ್ನಡ ವನ್ನು ಕಟ್ಟಬೇಕೆಂದರು.

error: