April 25, 2024

Bhavana Tv

Its Your Channel

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮೊದಲ ಮಳೆಯ ಪರಿಮಳ ಹಾಗೂ ಪ್ರಭುತ್ವದ ತಲ್ಲಣಗಳು ಕೃತಿ ಬಿಡುಗಡೆ

ದಾಂಡೇಲಿ: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಭಾಗವಾಗಿ ಲೇಖಕ ಡಾ. ಆರ್.ಜಿ. ಹೆಗಡೆಯವರ ಮೊದಲ ಮಳೆಯ ಪರಿಮಳ ಹಾಗೂ ಪ್ರಭುತ್ವದ ತಲ್ಲಣಗಳು ಎಂಬ ಕೃತಿಗಳನ್ನು ಹಾಗೂ ಪ್ರವೀಣ ನಾಯಕ ಹಿಚಕಡರವರ ಅವ್ವನೆಂಬ ಹೊಂಗೆಯ ನೆರಳು ಎಂಬ ಪುಸ್ತಗಳನ್ನು ಬಿಡುಗಡೆ ಮಾಡಲಾಯಿತು.

ಕೃತಿಗಳ ಕುರಿತಂತೆ ಕೃತಿಕಾರರಾದ ಡಾ. ಆರ್.ಜಿ. ಹೆಗಡೆ ಹಾಗೂ ಪ್ರವೀಣ ನಾಯಕ ಮಾತನಾಡಿದರು.

ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ. ಮಹೇಶ ಜೋಶಿಯವರು ಹೊಣೆಗಾರಿಕೆ ಸ್ವೀಕಾರ ಸಮಾರಂಭದಲ್ಲಿಯೇ ಪುಸ್ತಕ ಬಿಡುಗಡೆ ಮಾಡುವ ಮೂಲಕ ಬಿ.ಎನ್. ವಾಸರೆಯವರು ಮಾದರಿ ಕಾರ್ಯ ಮಾಡಿದ್ದಾರೆ. ಇದು ಉತ್ತರಕನ್ನಡ ಜಿಲ್ಲೆಯಲ್ಲಿಯೇ ಮೊದಲು ನಡೆದಿದ್ದು. ಇಂತಹ ಕನ್ನಡ ಪುಸ್ತಕಗಳನ್ನು ನಾಡಿನ ಜನತೆ ಪಡೆದು ಓದುವಂತಾಗಬೇಕೆAದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾದೇವ ವೇಳಿಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್. ಜಿ. ನಾಯಕ, ಸಾಹಿತಿಗಳಾದ ಡಾ. ಆರ್.ಜಿ. ಗುಂದಿ, ಬೀರಣ್ಣ ನಾಯಕ ಮೊಗಟಾ, ನಾಗರೇಖಾ ಗಾಂವಕರ ಮುಂತಾದವರಿದ್ದರು.

error: