March 29, 2024

Bhavana Tv

Its Your Channel

ದಾಂಡೇಲಿಯಲ್ಲಿ ಜಿಲ್ಲಾ ಕಸಾಪದಿಂದ ಸರ್.ಎಂ.ವಿ. ಜನ್ಮ ದಿನಾಚರಣೆ

ದಾಂಡೇಲಿ: ಸರ್ ಎಂ. ವಿಶ್ವೇಶ್ವರಯ್ಯ ಕೇವಲ ಎಂಜಿನಿಯರ್ ಆಗಿರಲಿಲ್ಲ. ಅವರೊಬ್ಬ ಪ್ರಬುದ್ಧ ಆಡಳಿತಗಾರರೂ ಆಗಿದ್ದರು. ಸಂಸ್ಕೃತಿ ಚಿಂತಕರೂ ಆಗಿದ್ದರು. ಈ ನಾಡಿನ ತಾಂತ್ರಿಕ ಪ್ರಗತಿಯ ಜೋತೆಗೆ ಕನ್ನಡ ಸಾಹಿತ್ಯದ ಬೆಳವಣಿಗೆಗೂ ಕೂಡ ವಿಶ್ವೇಶ್ವರಯ್ಯ ನವರ ಕೊಡುಗೆ ಅಪಾರವಾದುದು ಎಂದು ಧಾರವಾಡದ ನಿವೃತ್ತ ಪ್ರಾಧ್ಯಾಪಕ, ಲೇಖಕ ಪ್ರೊ ಕೆ. ಎಸ್. ಕೌಜಲಗಿ ನುಡಿದರು.

ಅವರು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಾಂಡೇಲಿಯ ಸರಕಾರಿ ಕೈಗಾರಿಕಾ ಸಂಸ್ಥೆ (ಮಹಿಳಾ) ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ  ವಿಶ್ವೇಶ್ವರಯ್ಯ ನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ಕನ್ನಡ, ಕರ್ನಾಟಕ, ಕನ್ನಡಿಗ ಎಂಬ ಘೋಷ ವಾಕ್ಯವನ್ನಿಟ್ಟುಕೊಂಡು ನಾಡು ನುಡಿಯನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ ಸರ್.ಎಂ. ವಿಶ್ವೇಶ್ವರಯ್ಯನವರು ಅಂದಿನ ಮೈಸೂರು ಒಡೆಯರಾಗಿದ್ದ ನಾಲ್ವಡಿ ಕಷ್ಣರಾಜ ಒಡೆಯರ್ ಅವರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತನ್ನು ರಚಿಸುವ 

ಮುನ್ನೋಟವನ್ನು ನೀಡಿ, ಅದನ್ನು ಸಂಘಟಿಸುವುದರಲ್ಲಿ ಸಫಲರಾದರು. ನಂತರ ಅದೇ ಕನ್ನಡ ಸಾಹಿತ್ಯ ಪರಿಷತ್ತು ಎಂದು ರೂಪಾಂತರಗೊAಡಿತು. ಇದೀಗ ಈ ಕನ್ನಡ ಸಾಹಿತ್ಯ ಪರಿಷತ್ತು 115 ವರ್ಷಗಳ ಇತಿಹಾಸಗಳುಳ್ಳ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ವಿಶ್ವದ ಅತಿ ಹೆಚ್ಚು ಸದಸ್ಯರನ್ನೊಳಗೊಂಡAತಹ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇದಕ್ಕೆ ಮೂಲ ಕಾರಣರಾದ ನಾಲ್ವಡಿ ಕಷ್ಣರಾಜ ಒಡೆಯರ ಜೊತೆಗೆ ಇದ್ದ ಸರ್ ಎಂ.ವಿಶ್ವೇಶ್ವರಯ್ಯನವರನ್ನು ಈ ಸಂದರ್ಭದಲ್ಲಿ ನೆನೆಯಲೇ ಬೇಕು. ಆ ಕಾರಣಕ್ಕಾಗಿ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಸರ್ ಎಂ. ವಿಶ್ವೇಶ್ವರಯ್ಯನವರು ಜನ್ಮದಿನಾಚರಣೆ ಕಾರ್ಯಕ್ರಮ ನಿಜಕ್ಕೂ ಕೂಡ ಸ್ತುತ್ಯಾರ್ಹವಾದುದು ಎಂದರು.

ಸರ್. ವಿಶ್ವೇಶ್ವರಯ್ಯ ಎಂದರೆ ಕೇವಲ ಒಬ್ಬ ಎಂಜಿನಿಯರ್ ಎಂದಷ್ಟೆ? ಜನ ಗುರುತಿಸುವುದುಂಟು. ಆದರೆ ಅವರು ಶಿಕ್ಷಣ ಹಾಗೂ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಕೂಡಾ ಅಪಾರ. ಒಬ್ಬ ಸಮರ್ಥ ಆಡಳಿತಗಾರನಾಗಿ ಮೈಸೂರು ಸಂಸ್ಥಾನದ ದಿವಾನರಾಗಿ ಮೈಸೂರು ಸಂಸ್ಥಾನದ ಪ್ರಗತಿಗೆ ಶ್ರಮಿಸಿದವರು. ಕನ್ನಂಬಾಡಿ ಅಣೆಕಟ್ಟಿನಿಂದ ಹಿಡಿದು ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಿ ದೇಶ ವಿದೇಶಗಳ ಗಮನವನ್ನು ಸೆಳೆದವರು. ಅವರ ಸಾಮರ್ಥ್ಯವನ್ನು ಗುರುತಿಸಿ ಬ್ರಿಟಿಷ್ ಸರ್ಕಾರ ಅವರಿಗೆ ಸರ್ ಎಂಬ ಬಿರುದನ್ನು ನೀಡಿ ಗೌರವಿಸಿತ್ತು. ಬಹಳ ಬಡತನದಲ್ಲಿಯೇ ಶಿಕ್ಷಣವನ್ನು ಕಲಿತು ಅತ್ಯಂತ ಉನ್ನತ ಹುದ್ದೆಗೇರಿ ಅಪಾರ ಸಾಧನೆಯನ್ನು ಮಾಡಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಪಡೆದಿರುವಂತಹ ಸರ್ ಎಂ. ವಿಶ್ವೇಶ್ವರಯ್ಯ ನವರ ಜೀವನ ಚರಿತ್ರೆಯನ್ನು ಓದುವ ಜೊತೆಗೆ ಅವರ ಆದರ್ಶದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿದ್ದ ದಾಂಡೇಲಿ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ ನಾಯಕ ರವರು ನಾಡಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಪಾರವಾದದ್ದು. ಶರಾವತಿ ಆಣೆಕಟ್ಟು ನಿರ್ಮಿಸುವಲ್ಲಿಯೂ ಇವರ ಕೊಡುಗೆಯಿದೆ. ಇಂದಿನ ವಿದ್ಯಾರ್ಥಿ ಯುವಜನರು ಅವರ ಸಾಧನೆಗಳನ್ನ ತಿಳಿದುಕೊಳ್ಳಬೇಕು. ಮೊಬೈಲ್ ಬಳಕೆಯ ಜೊತೆಗೆ ಓದಿನ ಸಂಸ್ಕೃತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯ ನಾಗೇಶ ಆರ್. ನಾಯ್ಕ್ ದೇಶ ವಿದೇಶದ ಗಮನ ಸೆಳೆದಿರುವ ಒಬ್ಬ ಎಂಜಿನಿಯರ್ ತನ್ನ ವೃತ್ತಿಯ ಜೊತೆಗೆ ಕನ್ನಡ ಸಾಹಿತ್ಯಕ್ಕೂ ಕೂಡ ತನ್ನದೇ ಆದ ಕೊಡುಗೆಯನ್ನು ನೀಡುವ ಮೂಲಕ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾಗಿದ್ದರು ಎನ್ನುವುದೇ ಹೆಮ್ಮೆಯ ಸಂಗತಿ ಎಂದು ಹೇಳಿ ಐಟಿಐ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ನವರ ದಿನಾಚರಣೆ ಹಮ್ಮಿಕೊಂಡಿರುವುದು ನಿಜಕ್ಕೂ ಅರ್ಥಪೂರ್ಣವಾದುದು ಎಂದರು.

ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಬಾಲರಾಜ ಚಿಮರೋಲ್, ಕಸಾಪ ದಾಂಡೇಲಿ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ್ ಶುಭ ಹಾರೈಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿ ನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ಇಂದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಬೆಳೆದು ನಿಂತಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಅಂದು 115 ವರ್ಷಗಳ ಹಿಂದೆಯೇ ಕನ್ನಡ ಕಟ್ಟುವ ಮುಂದಾಲೋಚನೆಯನ್ನಿಟ್ಟುಕೊAಡು ಸಂಘಟಿಸಿದವರು ವಿಶ್ವೇಶ್ವರಯ್ಯನವರು. ಅವರ ಬದುಕು, ಸಾಧನೆ , ಹಾಗೂ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿಯಾದುದು. ವಿಶ್ವೇಶ್ವರಯ್ಯನವರು ಯಾವ ಕೆಲಸವೂ ಚಿಕ್ಕದಲ್ಲ. ಯಾರಿಗೂ ತಮ್ಮ ಕಲಿಕೆ ಮತ್ತು ಕೆಲಸದ ಬಗ್ಗೆ ಕೀಳರಿಮೆ ಇರಬಾರದು ಎಂದಿದ್ದರು. ಹಾಗೆಯೇ ಇಂದಿನ ವಿದ್ಯಾರ್ಥಿ ಯುವಜನರು ಕೂಡ ತಮ್ಮ ಕಲಿಕೆ ಮತ್ತು ಉದ್ಯೊ?ಗದ ಮೇಲೆ ಕೀಳರಿಮೆ ಬೆಳೆಸಿಕೊಳ್ಳದೇ ಸಾಧಿಸುವ ಛಲವನ್ನು ಇಟ್ಟುಕೊಂಡು ಮುನ್ನಡೆಯಬೇಕು. ವಿಚ್ಛಿದ್ರಕಾರಿ ವಿಚಾರಗಳಿಗೆ ಮನಸ್ಸುಗಳನ್ನು ಬಲಿಕೊಡದೆ ಪ್ರೀತಿಯ ಸಮಾಜವನ್ನು ಕಟ್ಟುವಲ್ಲಿ ಮುಂದಡಿಯಿಡಬೇಕು ಎಂದು ಹೇಳಿ ಓದು ಮತ್ತು ವೃತ್ತಿಯ ಜೊತೆಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆಹೊಸೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ , ನಿರೂಪಿಸಿದರು . ಪದವಿ ಕಾಲೇಜಿನ ಉಪನ್ಯಾಸಕ ಡಾ ಎಸ್. ಎಸ್. ದೊಡ್ಮನಿ ಅತಿಥಿಗಳನ್ನು ಪರಿಚಯಿಸಿದರು. ಐಟಿಐ ಕಾಲೇಜಿನ ಉಪನ್ಯಾಸಕ ದಯಾನಂದ ಗೌಡ ವಂದಿಸಿದರು.
ಉಪನ್ಯಾಸಕ ಅಗಸ್ಟಿನ್ , ಪತ್ರಕರ್ತ ಅಕ್ಷಯಗಿರಿ ಗೋಸಾವಿ ಮುಂತಾದವರು ಸಹಕರಿಸಿದರು.

error: