April 24, 2024

Bhavana Tv

Its Your Channel

ದಾಂಡೇಲಿಯ ಟೌನ್ ಶಿಪ್ ನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯ ಸಾಹಿತ್ಯ ಭವನ ಉದ್ಘಾಟನೆ

ದಾಂಡೇಲಿ:– ನಾವು ನಮ್ಮ ಭಾಷೆಯನ್ನು ಪ್ರೀತಿಸುವ ಜೊತೆಗೆ ಇತರ ಭಾಷೆಯನ್ನೂ ಗೌರವಿಸಬೇಕು. ನಾಡ ಭಾಷೆಯಾಗಿರುವ ಕನ್ನಡವನ್ನ ಎಲ್ಲರೊಂದಿಗೆ ಕಟ್ಟಿ ಬೆಳೆಸಬೇಕು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಾದ್ಯಂತ ತನ್ನ ವೈಶಿಷ್ಠ್ಯಪೂರ್ಣ ಹಾಗೂ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದೆ. ಹಿರಿಯ ಸಾಹಿತಿಗಳನ್ನು ಗೌರವಿಸುತ್ತಿದೆ. ಕನ್ನಡ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಶಾಸಕ ದೇಶಪಾಂಡೆ ನೋಡಿದರು

ಅವರು ದಾಂಡೇಲಿಯ ಟೌನ್ ಶಿಪ್ ನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯ ‘ಸಾಹಿತ್ಯ ಭವನವನ್ನು’ ಉದ್ಘಾಟಿಸಿ ಮಾತನಾಡುತ್ತಿದ್ದರು. ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರ ಸಾರಥ್ಯದಲ್ಲಿ ಜಿಲ್ಲೆಯೆಲ್ಲಡೆ ಕನ್ನಡ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಮನೆ ಮನೆ ಮಾತಾಗಿದೆ. ಕಸಾಪದ ಕಾರ್ಯವನ್ನು ನಾನೂ ಕೂಡಾ ಗಮನಿಸುತ್ತಿದ್ದೇನೆ. ವಾಸರೆಯವರು ದಾಂಡೇಲಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕೂಡ ಸಾಹಿತ್ಯ ಭವನ ಆಗಬೇಕಾಗಿದೆ ಎಂಬ ಮನವಿಯನ್ನ ಮಾಡಿದ್ದಾರೆ. ಅದಕ್ಕೆ ನಾನು ನನ್ನಿಂದಾದ ಎಲ್ಲ ಪ್ರಯತ್ನವನ್ನು ಮಾಡುತ್ತೇನೆ. ಜೊತೆಗೆ ದಾಂಡೇಲಿಯಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ನಗರಸಭೆಯವರು ಉಚಿತ ನಿವೇಶನವನ್ನು ನೀಡುವ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಗರಸಭಾ ಅಧ್ಯಕ್ಷರಿಗೆ ನಿರ್ದೇಶನ ನೀಡಿದರು. ಸಾಹಿತ್ಯ ಭವನದ ವಿನ್ಯಾಸ ಮತ್ತು ಅದರೊಳಗಡೆ ಅಳವಡಿಸಿರುವ ಎಲ್ಲಾ ಹಿರಿಯ ಚೇತನಗಳ ಭಾವಚಿತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೇಶಪಾಂಡೆಯವರು ಈ ಸಾಹಿತ್ಯ ಭವನದಲ್ಲಿ ನಿರಂತರ ಸಾಹಿತ್ಯ ಹಾಗೂ ಶೈಕ್ಷಣಿಕ ಚಟುವಟಿಕೆಗಳು ನಡೆಯುವಂತಾಗಬೇಕು ಎಂದ ದೇಶಪಾಂಡೆಯವರು ಉಳುವಿಯಲ್ಲಿ ಡಿಸೆಂಬರ್ 17 ಮತ್ತು 18 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು , ಈ ಸಮ್ಮೇಳನವನ್ನ ಯಶಸ್ವಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಸಮ್ಮೇಳನದ ಯಶಸ್ಸಿಗೆ ನನ್ನಿಂದ ಸಂಪೂರ್ಣವಾದ ಸಹಕಾರವಿದೆ. ನನ್ನ ಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನನಗೆ ಹೆಮ್ಮೆಯ ವಿಷಯವೂ ಆಗಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ನಗರಸಭಾ ಅಧ್ಯಕ್ಷ ಸರಸ್ವತಿ ರಜಪೂತ ಅವರು ಮಾತನಾಡಿ ದಾಂಡೇಲಿಯಲ್ಲಿ ಇಂತಹದೊAದು ಮಾದರಿಯಾದ ಸಾಹಿತ್ಯ ಭವನ ನಿರ್ಮಾಣಗೊಂಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕನ್ನಡದ ಕೆಲಸಕ್ಕೆ ತಮ್ಮ ವೈಯಕ್ತಿಕವಾದ ಹಾಗೂ ನಗರಸಭೆಯಿಂದ ಯಾವತ್ತೂ ಕೂಡ ಸಹಕಾರ ಇರುತ್ತದೆ ಎಂದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್ .ವಾಸರೆಯವರು ಕಳೆದೊಂದು ವರ್ಷದಿಂದ ಸಾಹಿತ್ಯ ಪರಿಷತ್ತಿನಿಂದ 180ಕ್ಕೂ ಹೆಚ್ಚು ಸಾಹಿತ್ಯಿಕ ಕಾರ್ಯಕ್ರಮಗಳು ನಡೆದಿರುವುದು ಅಭಿಮಾನದ ಸಂಗತಿಯಾಗಿದೆ . ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡಬೇಕೆಂಬ ನನ್ನ ಹಂಬಲಕ್ಕೆ ನಮ್ಮ ಎಲ್ಲ ತಾಲೂಕು ಅಧ್ಯಕ್ಷರೂ ಸೇರಿದಂತೆ ಎಲ್ಲ ಸಾಹಿತ್ಯದ ಮನಸ್ಸುಗಳೂ ಕೈಜೋಡಿಸುತ್ತಿದ್ದಾರೆ.

ಹಿಂದೆ ಸಾಹಿತಿಗಳು, ಕಲಾವಿದರಿಗೆ ರಾಜಾಶ್ರಯವಿತ್ತು. ಆದರೆ ಇಂದು ಆ ವ್ಯವಸ್ಥೆ ಇಲ್ಲ. ಆದರೆ ದೇಶಪಾಂಡೆಯವರು ಸಾಕಷ್ಟು ಕವಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದಾರೆ. ಇಂಥ ಸಾಂಸ್ಕತಿಕ ಮನಸ್ಸಿನ ನಾಯಕರುಗಳಿಂದ ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕಟ್ಟಿಬೆಳೆಸಲು ಸಹಾಯವಾಗುತ್ತದೆ ಎಂದ ವಾಸರೆಯವರು ಕನ್ನಡ ಸಾಹಿತ್ಯ ಪರಿಷತ್ತಿನ ಜವಾಬ್ದಾರಿ ಹೊತ್ತುಕೊಂಡು ಇಂದಿಗೆ ಸರಿಯಾಗಿ ಒಂದು ವರ್ಷವಾಗಿದೆ. ಒಂದು ವರ್ಷ ಪೂರೈಸಿದ ದಿನವೇ ಸಾಹಿತ್ಯ ಭವನದ ಉದ್ಘಾಟನೆ ನಡೆಯುತ್ತಿರುವುದು ಕಾಕತಳಿಯವಾದರು ಕೂಡ ಅಭಿಮಾನದ ಸಂಗತಿಯಾಗಿದೆ. ಈ ಒಂದು ವರ್ಷದಲ್ಲಿ ಪರಿಷತ್ತು ಜಿಲ್ಲೆಯಾದ್ಯಂತ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನ ಮನವನ್ನು ತಲುಪಿದೆ ಎಂಬ ಅಭಿಮಾನವು ನಮಗಿದೆ ಎಂದರು.

ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷ ಸಂಜಯ ನಂದ್ಯಾಳ್ಕರ, ನಗರಸಭಾ ಸದಸ್ಯರಾದ ಮೋಹನ ಹಲವಾಯಿ, ನರೇಂದ್ರ ಚೌಹಾಣ್, ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ರಾಜರಾಮ ಪವಾರ, ತಾಲೂಕು ಪಂಚಾಯತ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ ಹಾಲಮ್ಮನವರ , ನ್ಯಾಯವಾದಿ ವಿ.ಆರ್. ಹೆಗಡೆ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಪಿ. ಆರ್. ನಾಯ್ಕ, ಜಾರ್ಜ ಫರ್ನಾಂಡೀಸ್, ಗೌರವಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ಸಹಕರಿಸಿದ ಶಾಸಕ ಆರ್. ವಿ . ದೇಶಪಾಂಡೆ ಹಾಗೂ ನಗರಾಡಳಿತದವರನ್ನು ಹಾಗೂ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾನಸಾ ವಾಸರೆ ಹಾಗೂ ಸಂಗಡಿಗರ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ಸ್ವಾಗತಿಸಿದರು. ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರು ವಂದಿಸಿದರು ನಿವೃತ್ತ ಪ್ರಾಧ್ಯಾಪಕ ಡಾ. ಹರಿಲಾಲ್ ಮೆಹರವಾಡೆ ನಿರೂಪಿಸಿದರು. ನಗರಸಭಾ ಸದಸ್ಯರು ಇಲಾಖಾ ಅಧಿಕಾರಿಗಳು ಸಾಹಿತಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕಗಳ ಅಧ್ಯಕ್ಷರು’ ಪದಾಧಿಕಾರಿಗಳು , ರಾಜಕೀಯ ಪಕ್ಷಗಳ ಮುಖಂಡರುಗಳು ಸಾರ್ವಜನಿಕರು ಭಾಗವಹಿಸಿದ್ದರು.

error: