April 20, 2024

Bhavana Tv

Its Your Channel

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಶಾಲೆಗೆ ಶೇ100 ಫಲಿತಾಂಶ

ವರದಿ: ವೇಣುಗೋಪಾಲ ಮದ್ಗುಣಿ

ಗೋಕರ್ಣ: ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ರಾಜ್ಯ ಪ್ರೌಢಶಿಕ್ಷಣ ಮಂಡಳಿ ನಡೆಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಪಡೆದಿದೆ. ಇದು ರಾಜ್ಯ ಪಠ್ಯಕ್ರಮದಲ್ಲಿ ವಿವಿವಿಯ ಪ್ರಥಮ ಬ್ಯಾಚ್ ಆಗಿದ್ದು, ಸಂಸ್ಥೆಗೆ ಕೀರ್ತಿ ತಂದ ಎಲ್ಲರನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀಸ್ವಾಮೀಜಿ ಆಶೀರ್ವದಿಸಿದ್ದಾರೆ.ಪರೀಕ್ಷೆ ಬರೆದ 18 ವಿದ್ಯಾರ್ಥಿಗಳ ಪೈಕಿ 5 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್) ಉತ್ತೀರ್ಣರಾಗಿದ್ದಾರೆ. 12 ಮಂದಿ ಪ್ರಥಮ ದರ್ಜೆ ಮತ್ತು ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ಪ್ರಾಚಾರ್ಯ ಮಹೇಶ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚೈತನ್ಯ ಅರುಣ್ ಕುರ್ಸೆ (599) ಮೊದಲನೇ ಸ್ಥಾನ ಗಳಿಸಿದ್ದು, ರಜತ್ ಉದಯಶಂಕರ್ ಭಟ್ (589) ದ್ವಿತೀಯ ಹಾಗೂ ಕಾರ್ತಿಕ್ ಎಂ ನಾಯಕ್ (583) ತೃತೀಯ ಸ್ಥಾನ ಪಡೆದಿದ್ದಾರೆ. ಶ್ರವಣ್ ಮತ್ತು ಅನನ್ಯಾ ವಿ ಮದ್ಗುಣಿ ಡಿಸ್ಟಿಂಕ್ಷನ್ ಪಡೆದ ಇತರರು.ಚೈತನ್ಯ ಸಂಸ್ಕೃತ ಮತ್ತು ಇಂಗ್ಲಿಷ್ ನಲ್ಲಿ ಹಾಗೂ ಸಮರ್ಥ್ ರಾಯ್ಕರ್ ಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.
“ವಿವಿವಿ ಗುರುಕುಲಗಳ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳ ಸಾಧನೆಯಿಂದ ಅತೀವ ಸಂತಸವಾಗಿದೆ. ಶ್ರೀಕರಾರ್ಚಿತ ದೇವರ ಅನುಗ್ರಹದಿಂದ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ” ಎಂದು ಶ್ರೀ ರಾಘವೇಶ್ವರಭಾರತೀ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದ್ದಾರೆ. ಇದಕ್ಕೆ ಕಾರಣರಾದ ಎಲ್ಲ ಆರ್ಯ- ಆರ್ಯೆಯರು ಮತ್ತು ಪ್ರಾಚಾರ್ಯರನ್ನು ಅವರು ಅಭಿನಂದಿಸಿದ್ದಾರೆ.ವಿವಿವಿ ಗುರುಕುಲಗಳ ವರಿಷ್ಠಾಚಾರ್ಯ ಎಸ್.ಜಿ.ಭಟ್ ಕಬ್ಬಿನಗದ್ದೆ, ಪಾರಂಪರಿಕ ವಿಭಾಗದ ಪ್ರಾಚಾರ್ಯ ಸತ್ಯನಾರಾಯಣ ಶರ್ಮಾ, ವಿವಿವಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಿ.ಡಿ.ಶರ್ಮಾ, ವಿದ್ಯಾ ಪರಿಷತ್ ಅಧ್ಯಕ್ಷ ಡಾ.ಎಂ.ಆರ್.ಹೆಗಡೆ, ಕಾರ್ಯಾಧ್ಯಕ್ಷರಾದ ಎಸ್, ಎಸ್, ಹೆಗಡೆ, ಉಪಾಧ್ಯಕ್ಷ ಮರುವಳ ನಾರಾಯಣ ಭಟ್ ಮತ್ತಿತರರು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದ್ದಾರೆ.

error: