March 27, 2024

Bhavana Tv

Its Your Channel

ಸರಕಾರಿ ಹಿ.ಪ್ರಾ ಶಾಲೆ ‘ಕಡಿಮೆ’ ಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಗೋಕರ್ಣ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ್ಕೇರಿ – ಕಡಿಮೆ ಯಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ದೀಪ ಬೆಳಗಿಸಿ ಕಾರ್ಯಕ್ರಮ ಆರಂಭಿಸಲಾಯಿತು.
ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು -ನುಡಿಗೆ ಸಂಭAದಿಸಿದ ಪದ್ಯಗಳನ್ನು ಹಾಡಿದರು.
ಶಾಲೆಯ ಮುಖ್ಯಾಧ್ಯಾಪಕಿ ವಿದ್ಯಾ ನಾಯಕ ಮಾತನಾಡಿ “ಕನ್ನಡ ರಾಜ್ಯೋತ್ಸವ ಎಂಬುದು ಪ್ರತಿಯೊಬ್ಬ ಕನ್ನಡಿಗನ ಮನೆಯ ಹಬ್ಬ. ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡ ಅಭಿಮಾನವೆಂಬುದು ರಕ್ತಗತವಾಗಿದೆ. ನಾವು ಎಲ್ಲಾ ಭಾಷೆಗಳನ್ನು ಪ್ರೀತಿಸೋಣ ಆದರೆ ನಮ್ಮ ಭಾಷೆಯಲ್ಲಿಯೇ ಜೀವಿಸೋಣ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿಕ್ಷಕ ಆನಂದ ಕೇ. ನಾಯ್ಕ “ಕನ್ನಡ ಮಾತನಾಡುವವರಿಗಾಗಿ ಕನ್ನಡ ನಾಡು, ಹೀಗೆ ಭಾಷಾವಾರು ರಾಜ್ಯಗಳ ಉದಯವಾದವು. ಮೈಸೂರು ರಾಜ್ಯ ಎಂದು ಹೆಸರು ಪಡೆದಿದ್ದ ಇದು 1973 ನವೆಂಬರ್ 1 ರಂದು ಮುಖ್ಯಮಂತ್ರಿ ದೇವರಾಜ್ ಅರಸರ ಕಾಲದಲ್ಲಿ ಕರ್ನಾಟಕ ಎಂದು ಹೆಸರು ಪಡೆಯಿತು ಅದರ ಸವಿ ನೆನಪು ಇಂದು” ಎಂದರು ಕಾರ್ಯಕ್ರಮದಲ್ಲಿ ಲತಾ ಗೌಡ. ದೇವಯಾನಿ ನಾಯಕ. ಸರಿತಾ ಆಚಾರಿ.ಹೇಮಾವತಿ ಅಂಬಿಗ. ವೈಶಾಲಿ ನಾಯಕ ಉಪಸ್ಥಿತರಿದ್ದರು ಹಿರಿಯ ಶಿಕ್ಷಕಿ ಉಮಾ ನಾಯ್ಕ ಸರ್ವರನ್ನು ವಂದಿಸಿದರು.

error: