March 29, 2024

Bhavana Tv

Its Your Channel

ಕಡಿಮೆ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ ಮತ್ತು ಎಕ್ಸಾಮ್ ಪ್ಯಾಡ್ ವಿತರಣೆ ಕಾರ್ಯಕ್ರಮ..

ಗೋಕರ್ಣ: “ವಿದ್ಯೆ ಯಾರೊಬ್ಬನ ಆಸ್ತಿಯಲ್ಲ ಅದು ಸಾರ್ವತ್ರಿಕ ಮತ್ತು ಸಮದರ್ಶಿ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅತೀ ಅವಶ್ಯವಿರುವ ಎಕ್ಸಾಮ್ ಪ್ಯಾಡ್ ನೀಡಿದ ರಾಧಾಕೃಷ್ಣ ಮತ್ತು ರಮ್ಯಶ್ರೀ ಗೋಕರ್ಣ ದಂಪತಿಗಳ ಸೇವಾ ಮನೋಭಾವನೆ ಹಾಗೂ ಶೈಕ್ಷಣಿಕ ಕಾಳಜಿ ಹೀಗೆ ಮುಂದುವರೆಯಲಿ” ಎಂದು ಶಾಲಾ ಮುಖ್ಯಾಧ್ಯಾಪಕಿ ವಿದ್ಯಾ ನಾಯಕ ನುಡಿದರು.

    ಅವರು ಹೊಸ್ಕೇರಿ-ಕಡಿಮೆ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಗೋಕರ್ಣದ ರಾಧಾಕೃಷ್ಣ ಮತ್ತು ರಮ್ಯಶ್ರೀ ದಂಪತಿಗಳು  ನೀಡಿದ  ಎಕ್ಸಾಮ್ ಪ್ಯಾಡ್ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿ ಮಾತನಾಡಿದರು. “ಸೇವೆಯ ಪ್ರತಿಫಲ ಸೇವೆ” ಎಂಬAತೆ ನಮ್ಮ ಶಾಲೆಯ ವಿದ್ಯಾರ್ಥಿಗಳ  ಶೈಕ್ಷಣಿಕ ಬೇಡಿಕೆಯನ್ನು ಈಡೇರಿಸಿದ  ದಾನಿಗಳಿಗೆ  ಶುಭ ಹಾರೈಸಿ ದಾನಿಗಳಿಂದ ಎಕ್ಸಾಮ್ ಪ್ಯಾಡ್ ವಿದ್ಯಾರ್ಥಿಗಳಿಗೆ ಕೊಡಿಸಲು ಪ್ರಯತ್ನಿಸಿದ ಶಿಕ್ಷಕಿ ಹೇಮಾವತಿ ಅಂಬಿಗರಿಗೆ ಅಭಿನಂದಿಸಿದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಮಂತ್ರಿ ಮಂಡಳದ ನಾಯಕಿಯಾದ ಕುಮಾರಿ ವೈಶಾಲಿ ರಮೇಶ ಗೌಡ ರವರು “ಮಕ್ಕಳ ದಿನಾಚರಣೆಯ ಪ್ರಯುಕ್ತ ಇವತ್ತಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವುದು ನನಗೆ ತುಂಬಾ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದಳು”.

    ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿಕ್ಷಕ ಆನಂದ ನಾಯ್ಕ ಬರ್ಗಿ “ನೆಹರೂರವರ ಜೀವನಶೈಲಿ, ಅವರ ಆದರ್ಶ ವ್ಯಕ್ತಿತ್ವ ಅವರು ಗಾಂಧೀಜಿಯವರಿAದ ಪ್ರೇರೇಪಿತರಾಗಿ ಸ್ವಾತಂತ್ರö್ಯ ಹೋರಾಟದಲ್ಲಿ ತೊಡಗಿದ  ರೀತಿ, ಸ್ವತಂತ್ರö ಭಾರತದ  ಪ್ರಥಮ ಪ್ರಧಾನಿಯಾದ  ಮಹಾನ್ ಪುರುಷ ನೆಹರುರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ” ಎಂದರು.

   ಗಾಳಿಪಟ, ರಂಗೋಲಿ ಸ್ಪರ್ಧೆ, ಪೇಪರ್ ಪಿರಾಮಿಡ್, ಸೂಜಿದಾರ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಪ್ರಾಯೋಜಕರಾದ ಮುಖ್ಯಾಧ್ಯಾಪಕಿ ವಿದ್ಯಾ ನಾಯಕ ರವರು ಬಹುಮಾನ ನೀಡಿದರು.

    ಕಾರ್ಯಕ್ರಮ ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುಕ್ರು ಗೌಡ, ಉಪಾಧ್ಯಕ್ಷರಾದ ನೇತ್ರಾ ಗೌಡ, ಎಸ್.ಡಿ.ಎಮ್.ಸಿ ಸದಸ್ಯರು, ಪಾಲಕರು ಹಾಗೂ ಶಿಕ್ಷಕರಾದ ಉಮಾ ನಾಯ್ಕ, ಲತಾ ಗೌಡ, ದೇವಯಾನಿ ನಾಯಕ, ಸರಿತಾ ಆಚಾರಿ, ಹೇಮಾವತಿ ಅಂಬಿಗ, ವೈಶಾಲಿ ನಾಯಕ ಉಪಸ್ಥಿತರಿದ್ದರು.

  ಕಾರ್ಯಕ್ರಮವು ದೀಕ್ಷಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕುಮಾರಿ ಪೂರ್ವಿ ಗೌಡ ಸರ್ವರನ್ನೂ ಸ್ವಾಗತಿಸಿದರು. ಕುಮಾರಿ ಹರ್ಷಿತಾ ಗುನಗಾ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ನಿಖಿತಾ ಆಗೇರ ಸರ್ವರನ್ನೂ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದಲೇ ಸಭಾ ಕಾರ್ಯಕ್ರಮ ನಡೆದಿದ್ದು ಈ ಬಗ್ಗೆ ಎಸ್.ಡಿ.ಎಮ್.ಸಿ ಸಮಿತಿ ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: