April 25, 2024

Bhavana Tv

Its Your Channel

ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಟ್ರೋಮಾ ಸೆಂಟರ ಮಂಜೂರಿಗೆ ಪ್ರಯತ್ನ-ದಿನಕರ ಶೆಟ್ಟಿ

ಹೊನ್ನಾವರ_; ಹೊನ್ನಾವರ ಕುಮಟಾ ಭಟ್ಕಳ ಜನರಿಗೆ ಅನುಕೂಲವಾಗುವಂತೆ ಹೊನ್ನಾವರದಲ್ಲಿ ತರ್ತು ಚಿಕಿತ್ಸೆಗೆ ಅನುಕುಲವಾಗುವಂತೆ ಟ್ರೋಮಾ ಸೆಂಟರ ಮಂಜೂರು ಮಾಡಲು ಪ್ರಯತ್ನಿನಿಸುವುದಾಗಿ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿಯವರು ತಿಳಿಸಿದರು. ಅವರು ಸೋಮವಾರ ಸರ್ಕಾರಿ ಆಸ್ಪತ್ರೆಗೆ ಅವಶ್ಯವಾಗಿರುವ ಎರಡು ಆಕ್ಷಿಜನ್ ಕಾನ್ಸ್ಂಟೆಟರ್ ಕೊಡುಗೆ ನೀಡಿ ಮಾದ್ಯಮದವರಿಗೆ ಮಾಹಿತಿ ನೀಡಿದರು.
ಹೊನ್ನಾವರ ಆಸ್ಪತ್ರೆಗೆ ತಕ್ಷಣವೇ ತನ್ನ ಅಂಬುಲೆನ್ಸ್ ಬರಲಿದ್ದು ಡಯಾಲಿಸ್ ಸಿಬ್ಬಂದಿಗಳ ನಿರ್ವಹಣೆಗೂ ತಕ್ಷಣ ಸ್ಪಂದಿಸುವುದಾಗಿ ತಿಳಿಸಿದರು. ರಾಷ್ಟಿçÃಯ ಹೆದ್ದಾರಿಯಲ್ಲಿ ಈ ಭಾಗದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು ತುರ್ತುಚಿಕಿತ್ಸೆಗೆ ಟ್ರೋಮಾ ಸೆಂಟರ ಅತ್ಯಂತ ಅವಶ್ಯವಾಗಿದೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕರೋನ ಮಹಾಮಾರಿ ಹಿನ್ನಲೆಯಲ್ಲಿ ಸರ್ಕಾರ ಆ ಬಗ್ಗೆ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಎಲ್ಲಾ ಕೆಲಸಗಳು ವಿಳಂಬವಾಗುತ್ತಿದೆ ಎಂದರು.

    ತಾಲ್ಲೂಕಾ ಆಸ್ಪತ್ರೆಯ ವೈಧ್ಯಾಧಿಕಾರಿ  ಡಾ, ರಾಜೇಶ ಕಿಣಿಯವರು ಮಾತನಾಡಿ  ಹೊನ್ನಾವರ ಆಸ್ಪತ್ರೆಗೆ ಆಕ್ಷೀಜನ್ ಕಾನ್ಸ್ಂಟೆಟರ್ ಅತ್ಯಂತ ಅವಶ್ಯವಾಗಿತ್ತು ಅದನ್ನು ಶಾಸಕರು ನೀಡಿದ್ದು, ಡಯಾಲೀಸ್ ಸಿಬ್ಬಂದಿಗಳ ನಿರ್ವಹಣೆಗೂ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾ ಆಸ್ಪತ್ರೆಯ ಪರವಾಗಿ ಶಾಸಕರಿಗೆ ಕ್ರತಜ್ನತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಸ್ತಾಯಿ ಸಮಿತಿ ಛೇರಮನ್ ವಿಜು ಕಾಮತ, ತಾಲ್ಲೂಕಾ ವೈದ್ಯಾದಿಕಾರಿ ಡಾ ಉಷಾ ಹಾಸ್ಯಗಾರ, ತಾಲ್ಲೂಕು ಅಧ್ಯಕ್ಷ ರಾಜು ಭಂಡಾರಿ, ಪಟ್ಟಣ ಪಂಚಾಯತ ನಾಮ ನಿರ್ದೇಶಿತ ಸದಸ್ಯರಾದ ದತ್ತಾತ್ರೆಯ ಮೇಸ್ತ, ಉದಯ ಪ್ರಭು,ಉಲ್ಲಾಸ ನಾಯ್ಕ,ಬಿಜೆಪಿ ಲೋಕೇಶ ಮೇಸ್ತ, ಉಮೇಶ ಮೇಸ್ತ ಹಾಜರಿದ್ದರು.
ವರದಿ ; ವೆಂಕಟೇಶ ಮೇಸ್ತ, ಹೊನ್ನಾವರ

error: