April 18, 2024

Bhavana Tv

Its Your Channel

ವಿಕಲಚೇತನರಿಗೆ ಹೊನ್ನಾವರ ಪಟ್ಟಣ ಪಂಚಾಯತಿ ವತಿಯಿಂದ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆ

ಹೊನ್ನಾವರ ಪಟ್ಟಣ ಪಂಚಾಯತ ವತಿಯಿಂದ ೨೦೨೦-೨೧ನೇ ಸಾಲಿನ ಎಸ್.ಎಫ್.ಸಿ ಶೇ ೫% ವಿಕಲಚೇತನರಿಗೆ ಸೌಲಭ್ಯ ನೀಡುವ ಯೋಜನೆಯಲ್ಲಿ ೪೯೪೩೯ ರೂ. ವೆಚ್ಚದಲ್ಲಿ ಬಡ ವಿಕಲಚೇತನರಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಿಸಲಾಯಿತು. ೪ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಹೊನ್ನಾವರ ಪ್ರಭಾತನಗರದ ಸುಲೋಚನ ನಾಗಪ್ಪ ಮೇಸ್ತ, ಚರ್ಚ ರಸ್ತೆಯ ಸವಿತಾ ವೆಂಕಟೇಶ ಮೇಸ್ತ, ಫಾರೆಸ್ಟ ಕಾಲೋನಿಯ ವನಿತಾ ಗಜಾನನ ನಾಯ್ಕ, ರಮಿಜಾ ಅಬ್ದುಲ್ ಖಾದರ ಶೇಖ ಅವರಿಗೆ ಪಪಂ ಅಧ್ಯಕ್ಷ ಶಿವರಾಜ ಮೇಸ್ತ ಅವರು ವಿತರಿಸಿದರು.

ಇನ್ನು ೨೦೨೦-೨೧ನೇ ಸಾಲಿನ ಆಯ-ವ್ಯಯದಲ್ಲಿ ಪಂಚಾಯತ ನಿಧಿಯ ಶೇ ೫% ರಷ್ಟು ಬಡ ವಿಕಲಚೇತನರಿಗಾಗಿ ೧೮೫೦೦ ರೂ ಕಾದಿರಿಸಿದ್ದು, ಸದರಿ ಅನುದಾನದಲ್ಲಿ ಇಬ್ಬರು ಫಲಾನುಭವಿಗಳಿಗೆ ಸ್ಟೀಲ್ ಚೇರ್ ವಿತರಣೆ ಮಾಡಲಾಯಿತು. ಉದ್ಯಮನಗರ ಮಂಜುನಾಥ ಪರಮೇಶ್ವರ ಮೇಸ್ತ, ರಾಘವೇಂದ್ರ ದೇವಿದಾಸ ಮೇಸ್ತ ಅವರಿಗೆ ವಿತರಿಸಲಾಯಿತು.

ಇನ್ನು ೨೦೨೦-೨೧ನೇ ಸಾಲಿನ ಎಸ್.ಎಫ್.ಸಿ ಶೇ ೨೪.೧೦% ಯೋಜನೆಯಲ್ಲಿ ಅಂಬೇಡ್ಕರ ಸೇವಾ ಸಂಘ ರಾಯಲಕೇರಿ ಅವರಿಗೆ ಮನೆ ಬಳಕೆಯ ಪಾತ್ರೆ ಪಗಡೆ ನೀಡುವ ಕುರಿತು ೧೨೧೯೬೫ ರೂ. ಕಾದಿರಿಸಿದ್ದು, ಈ ಅನುದಾನದಲ್ಲಿ ಮನೆ ಬಳಕೆಯ ಅಗತ್ಯ ಸಾಮಗ್ರಿಗಳನ್ನು ನೀಡಲಾಯಿತು.

ಮನೆ ಬಳಕೆಯ ಸಾಮಗ್ರಿಗಳಾದ ದೊಡ್ಡ ತೋಪು, ಊಟದ ಪೈಬರ್ ಪ್ಲೇಟ್, ಗ್ರಾಂಡರ್ ಇತರೆ ಸಾಮಗ್ರಿಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೇಧಾ ನಾಯ್ಕ,ಸ್ಥಾಯಿ ಸಮಿತಿ ಛೇರಮೆನ್ ವಿಜು ಕಾಮತ್ ಸದಸ್ಯರಾದ ಶ್ರೀಪಾದ ನಾಯ್ಕ, ನಾಗರಾಜ ಹೆಗಡೆ, ಸುರೇಶ ಹೊನ್ನಾವರ, ಸುಬ್ರಾಯ ಗೌಡ,ಶ್ರೀ ಮತಿ ಭಾಗ್ಯ ಲೋಕೇಶ್ ಮೇಸ್ತ,, ಸಿಬ್ಬಂದಿ ಯವರಾದ ಸದಾನಂದ ನಾಯ್ಕ, ವೆಂಕಟೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
.
ವರದಿ: ವೆಂಕಟೇಶ ಮೇಸ್ತ ಹೊನ್ನಾವರ.

error: