April 23, 2024

Bhavana Tv

Its Your Channel

ಸಾರ್ವಜನಿಕ ಗಣೇಶೋತ್ಸವ ನಿರ್ಮಾಣದ ಶೆಡ್ ತೆರವು ಪ್ರಕರಣ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿದ ಶಾಸಕ ದಿನಕರ ಶೆಟ್ಟಿ

ಹೊನ್ನಾವರ ಪಟ್ಟಣದ ಪ್ರಭಾತನಗರದ ಕೆ. ಎಚ್. ಬಿ. ಕಾಲೋನಿಯ ಗಣೇಶೋತ್ಸವ ಸಮಿತಿಯವರು ನಿರ್ಮಿಸಿದ ಕಟ್ಟಡ ತೆರವು ಕಾರ್ಯಾಚರಣೆಗೆ ಶಾಸಕ ದಿನಕರ ಶೆಟ್ಟಿ ಯವರ ಮದ್ಯಸ್ತಿಕೆಯಲ್ಲಿ ಸುಖಾಂತ್ಯ ಕಂಡಿದೆ.

ಕೆ.ಎಚ್. ಬಿ ಕಾಲೋನಿಯ ಗಣೇಶೋತ್ಸವ ಸಮಿತಿಯವರು ಕಳೆದ ಆರು ವರ್ಷಗಳಿಂದ ಗಣೇಶ ಪ್ರತಿಷ್ಠಾಪಿಸಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದರು. ಒಂದು ಶಾಶ್ವತ ಕಟ್ಟಡಕ್ಕಾಗಿ ಸಾಗರ ರೆಸಿಡೆನ್ಸಿ ಹೋಟೆಲ್ ಹಿಂದುಗಡೆ ಇರುವ ಕಲ್ಲು ಬಂಡೆಯ ಮೇಲೆ ಶಾಶ್ವತವಾಗಿ ಇರಲು ಒಂದು ಶೆಡ್ ನಿರ್ಮಿಸಿದ್ದರು. ಅರಣ್ಯ ಇಲಾಖೆಯ ಭೂಮಿಯಾಗಿದ್ದರು ಕೂಡ ಉಪಯೋಗಕ್ಕೆ ಬರದೇ ಹಾಗೆ ಉಳಿದುಕೊಂಡಿತ್ತು.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಂಗಳವಾರ ರಾತ್ರಿ ಕಾರ್ಯಾಚರಣೆ ಮಾಡಿ ಜೆಸಿಬಿ ಬಳಸಿ ರಾತ್ರೋ ರಾತ್ರಿ ಸೆಡ್ ನೆಲಸಮ ಮಾಡಿಹೋಗಿದ್ದರು. ಬೆಳಿಗ್ಗೆ ಆಗುವುದರೊಳಗೆ ಸ್ಥಳೀಯರು,
ಸಮೀತಿಯವರು, ಬಿಜೆಪಿ ಪಕ್ಷದ ಮುಖಂಡರು ಸ್ಥಳದಲ್ಲಿ ಜಮಾಯಿಸಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿಯುತ್ತಂತೆ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಸ್ಥಳೀಯ ಮುಖಂಡರು, ಗಣೇಶೋತ್ಸವ ಸಮಿತಿಯವರೊಂದಿಗೆ ಸಮಾಲೋಚಿಸಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕರೆದು ಮಾತುಕತೆ ಮಾಡಿ ನಡೆಸಿದರು. ತುರ್ತು ಶೆಡ್ ಕಟ್ಟಲು ತೊಂದರೆ ನೀಡದಂತೆ ತಿಳಿಸಿ ಪರಿಸ್ಥಿತಿ ತಿಳಿ ಗೊಳಿಸಿದರು.

ಕಳೆದ ಆರು ವರ್ಷಗಳಿಂದ ಕೆ. ಎಚ್. ಬಿ ಕಾಲೋನಿಯ ಗಣೇಶೋತ್ಸವ ಸಮಿತಿಯವರು ಗಣೇಶ ಪ್ರತಿಷ್ಟಾಪಿಸಿ ಹಬ್ಬ ಆಚರಣೆ ಮಾಡುವಂತ ಸ್ಥಳದಲ್ಲಿ ಒಂದು ಶಾಶ್ವತ ಕಟ್ಟಡ ನಿರ್ಮಿಸಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳು ರಾತ್ರೋ ರಾತ್ರಿ ಕಟ್ಟಡ ಜೆಸಿಬಿ ಬಳಸಿ ಕಟ್ಟಡ ತೆಗೆದಿದ್ದಾರೆ. ಅರಣ್ಯ ಇಲಾಖೆಯ ಜಾಗವಾಗಿದ್ದರು ಕೂಡ ಕಲ್ಲು ಬಂಡೆ, ಗಿಡ ನೆಡಲು ಸಾಧ್ಯವಿಲ್ಲದ ಜಾಗ ಬಳಸಿಕೊಂಡರು ಅರಣ್ಯ ಇಲಾಖೆಯ ಸಿಬ್ಬಂದಿಗಳು ತೊಂದರೆ ಕೊಟ್ಟಿದ್ದಾರೆ. ಹಿರಿಯ
ಅಧಿಕಾರಿಗಳೊಂದಿಗೆ ಮಾತಾಡಿ ಸಮಸ್ಯೆ ಬಗೆಹರಿಸಿದ್ದೇವೆ. ಇದೆ ಸ್ಥಳದಲ್ಲೇ ಕಟ್ಟಡ ಕಟ್ಟುತ್ತೇವೆ. ಅರಣ್ಯ ಇಲಾಖೆಯವರು ಸಹಕಾರ ನೀಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷ ರಾಜೇಶ ಬಂಡಾರಿ, ಪಟ್ಟಣ ಪಂಚಾಯತ ಅಧ್ಯಕ್ಷ ಶಿವರಾಜ ಮೇಸ್ತ, ಸ್ಥಾಯಿ ಅಧ್ಯಕ್ಷ ವಿಜು ಕಾಮತ, ಗಣೇಶ ಹೆಗಡೆ, ಎಂ. ಎಸ್. ಹೆಗಡೆ ಕಣ್ಣಿ. ಕೆ. ವಿ. ನಾಯ್ಕ ವಕೀಲರು, ಪಟ್ಟಣ ಪಂಚಾಯತ ಸದಸ್ಯರು, ಬಿಜೆಪಿ ಪಕ್ಷದ ಮುಖಂಡರು, ಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

error: