April 17, 2024

Bhavana Tv

Its Your Channel

ಅಭಿನೇತ್ರಿ ಆರ್ಟ್ಸ್ ಟ್ರಸ್ಟ್ ವತಿಯಿಂದ ನಾಳೆಯಿಂದ ಜುಲೈ ೨೯ರವರೆಗೆ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಪ್ರಸಕ್ತ ಸಾಲಿನ ಕಣ್ಣಿ ಹಾಗೂ ಅಭಿನೇತ್ರಿ ಪ್ರಶಸ್ತಿ ಪ್ರಧಾನ

ಅಭಿನೇತ್ರಿ ಆರ್ಟ್ಸ್ ಟ್ರಸ್ಟ್ ನಿಲ್ಕೋಡ ವತಿಯಿಂದ ಕಲಾರಂಗದಲ್ಲಿ ಮಿಂಚಿಮರೆಯಾದ ಕಣ್ಣಿ ನೆನಪಿನಲ್ಲಿ ಪ್ರತಿ ವರ್ಷ ಕಣ್ಣಿ ಪ್ರಶಸ್ತಿ ನೀಡುವ ಜೊತೆ ಕಲಾವಿದರಿಗೆ ಸಹಾಯಧನ ನೀಡಿ ಪೋತ್ಸಾಹಿಸುವ ಉದ್ದೇಶ ಹೊಂದಿದ್ದೇವೆ ಎಂದು ಟ್ರಸ್ಟ್ ನ ಅಧ್ಯಕ್ಷ ಶಂಕರ ಹೆಗಡೆಯವರು ಬುಧವಾರ ಮಾಧ್ಯಮಗೊಷ್ಟಿಯಲ್ಲಿ ಮಾಹಿತಿ ನೀಡಿದರು.
ತೃತೀಯ ವರ್ಷವಾದ ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಆನಲೈನ್ ಮೂಲಕ ರಂಗಸAಗವನ್ನು ಜುಲೈ ೨೩ರಿಂದ ಜುಲೈ ೨೯ರವರೆಗೆ ಪ್ರತಿದಿನ ೬:೩೦ರಿಂದ ೯:೩೦ರವೆಗೆ ಯಕ್ಷ ದಿಗ್ಗಜರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ, ಕಣ್ಣಿ ಪ್ರಶಸ್ತಿ ಪ್ರಧಾನ, ಅಭಿನೇತ್ರಿ ಪ್ರಶಸ್ತಿ ಪ್ರಧಾನ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಎಸ್.ಡಿ.ಎಂ ಪದವಿ ಮಹಾವಿದ್ಯಾಲಯದಲ್ಲಿ ಎಂ.ಪಿ.ಇ. ಸೊಸೈಟಿ ಸಹಕಾರದಲ್ಲಿ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ಡಾ. ಎಂ.ಪಿ.ಕರ್ಕಿ, ರಾಜ್ಯೋತ್ಸವ ಪ್ರಶಸ್ತಿç ಪುರಸ್ಕೃತ ಹಿರಿಯ ಕಲಾವಿದ ಕೃಷ್ಣ ಯಾಜಿ ಬಳ್ಕೂರ್, ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್, ಕೃಷ್ಣಮೂರ್ತಿ ಭಟ್ ಶಿವಾನಿ, ಆಗಮಿಸಲಿದ್ದಾರೆ.
ನಾಳೆ ಶ್ರೀರಾಮ ನಿರ್ಯಾಣ ತಾಳಮದ್ದಲೆ, ಜು.೨೪ರಂದು ಶ್ರೀಕೃಷ್ಣದರ್ಶನ ಯಕ್ಷಗಾನ, ಜು.೨೫ರಂದು ಕಾರ್ತವೀರ್ಯ ಯಕ್ಷಗಾನ, ಜು.೨೬ರಂದು ಕಿರಾತಾರ್ಜುನ ಯಕ್ಷಗಾನ, ಜು.೨೭ರಂದು ಸುದರ್ಶನ ಯಕ್ಷಗಾನ, ಜು.೨೮ರಂದು ತಾಮ್ರಧ್ವಜ ತಾಳಮದ್ದಲೆ, ಜು.೨೯ರಂದು ಮಾಯಾ ಮೋಹಿನಿಯಕ್ಷಗಾನ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಕಲಾವಿದರ ಕೂಡುವಿಕೆಯಲ್ಲಿ ನಡೆಯಲಿದೆ. ಕೊನೆಯ ದಿನ ಕಣ್ಣಿ ಪ್ರಶಸ್ತಿಯನ್ನು ಬಡಗುತಿಟ್ಟಿನ ಹಾಸ್ಯ ಕಲಾವಿದ ರಮೇಶ ಭಂಡಾರಿ ಇವರಿಗೆ, ಅಭಿನೇತ್ರಿ ಪ್ರಶಸ್ತಿಯನ್ನು ಬಡಗುತಿಟ್ಟಿನ ಸ್ತಿçÃವೇಶಧಾರಿ ಭಾಸ್ಕರ ಜೋಶಿ ಶಿರಳಗಿ ಇವರಿಗೆ ಪ್ರಧಾನ ಮಾಡಲಾಗುವುದು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುçವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕರುಗಳಾದ ಸುನೀಲ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸಾಂಸ್ಕೃತಿಕ ರಾಯಭಾರಿ ಪ್ರಮೋದ ಹೆಗಡೆ ಆಗಮಿಸಲಿದ್ದಾರೆ ಎಂದು ಶಂಕರ ಹೆಗಡೆ ನಿಲ್ಕೋಡ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಶ ಭಂಡಾರಿ, ಬಿಜೆಪಿ ಮುಖಂಡ ಎಂ.ಎಸ್.ಹೆಗಡೆ ಕಣ್ಣಿ ಉಪಸ್ಥಿತರಿದ್ದರು.


ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: