July 26, 2021

Bhavana Tv

Its Your Channel

ಹೊನ್ನಾವರದಲ್ಲಿ “೩೦ ವರ್ಷ ಹೋರಾಟ – ೩೦ ಸಾವಿರ ಗಿಡ” ನೆಡುವ ಕಾರ್ಯಕ್ರಮ ನಾಳೆ ಉದ್ಘಾಟನೆ.

ಹೊನ್ನಾವರ: ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ‘೩೦ ವರ್ಷ ಹೋರಾಟ- ೩೦ ಸಾವಿರ ಗಿಡ’ ನೆಡುವ ಕ್ರಾರ್ಯಕ್ರಮದ ಅಂಗವಾಗಿ ಹೊನ್ನಾವರ ತಾಲೂಕಿನ ಕಾರ್ಯಕ್ರಮದ ಉದ್ಘಾಟನೆಯನ್ನು ಶುಕ್ರವಾರ ಮುಂಜಾನೆ ೧೦:೩೦ ಕ್ಕೆ ಗೇರಸೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗಾರಮಕ್ಕಿ ದೇವಾಲಯಯದ ಆವರಣದಲ್ಲಿ ಸಂಘಟಿಸಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದ್ರಿ ಕಾರ್ಯಕ್ರಮದ ಉದ್ಘಾಟನೆಯನ್ನು ಬಂಗಾರಮಕ್ಕಿ ಮಾರುತಿ ಗುರೂಜಿಯವರು ಉದ್ಘಾಟಿಸಲಿದ್ದಾರೆ, ಆಸಕ್ತರು ಆಗಮಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.

error: