September 27, 2021

Bhavana Tv

Its Your Channel

ಹೊನ್ನಾವರ, ಸಿದ್ದಾಪುರ ಮಾರ್ಗದ ಮಲೆಮನೆ ಹತ್ತಿರ ರಸ್ತೆ ಕುಸಿತ : ಮತ್ತೆ ಕುಸಿತವಾದಲ್ಲಿ ಸಂಚಾರ ಬಂದಾಗುವ ಸಾಧ್ಯತೆ.

ಹೊನ್ನಾವರ 24 : ಹೊನ್ನಾವರದಿಂದ ಸಿದ್ದಾಪುರ ತಾಲೂಕಿನ ಮಾವಿನಗುಂಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೬೯ ರಲ್ಲಿ ಸಿದ್ದಾಪುರ ತಾಲೂಕಿನ ಮಲೆಮನೆ ಹತ್ತಿರ ರಸ್ತೆ ಭಾಗಶ: ಕುಸಿದಿದ್ದು ಸದ್ಯಕ್ಕೆ ಒಂದು ಕಡೆಯಿಂದ ಮಾತ್ರ ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಸದರಿ ರಸ್ತೆ ಮತ್ತಷ್ಟು ಕುಸಿತವಾದಲ್ಲಿ ಹೊನ್ನಾವರದಿಂದ ಸಾಗರ ಹಾಗೂ ಸಿದ್ದಾಪುರಕ್ಕೆ ವಾಹನ ಸಂಚಾರ ಕಷ್ಟವಾಗಲಿದೆ.

ರಸ್ತೆ ಕುಸಿತವಾದ ಸ್ಥಳಕ್ಕೆ ಹೊನ್ನಾವರ ಸಿಪಿಐ ಶ್ರೀಧರ ಎಸ್. ಆರ್. ಮಾರ್ಗದರ್ಶನದಲ್ಲಿ ಹೊನ್ನಾವರ ಪೊಲೀಸರು ಸುರಿಯುತ್ತಿರುವ ಮಳೆಯಲ್ಲೂ ಶ್ರಮಪಟ್ಟು ಒಂದು ಕಡೆ ವಾಹನಗಳು ಚಲಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

ಪ್ರಸ್ತುತ ಸಣ್ಣ ಪ್ರಮಾಣದಲ್ಲಿ ಕುಸಿದಿರುವ ರಸ್ತೆಯು ಹೆಚ್ಚಿನ ಪ್ರಮಾಣದಲ್ಲಿ ಕುಸಿಯುವ ಮುಂಚಿತವಾಗಿ ತುರ್ತು ರಿಪೇರಿ ಕಾರ್ಯವನ್ನು ಹೊನ್ನಾವರ ಪೊಲೀಸರು ಮಾಡಿಸುತ್ತಿದ್ದಾರೆ.

error: