April 19, 2024

Bhavana Tv

Its Your Channel

ಹೊನ್ನಾವರದಲ್ಲಿ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದಂಗಳವರ ಗುರುಸ್ತುತಿ

ಹೊನ್ನಾವರ– ಇತ್ತೀಚಿಗೆ ವೃಂದಾವನಸ್ಥ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಶ್ರೀಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದಾಂಗಳವರ ಗುರುಸ್ತುತಿ ಕಾರ್ಯಕ್ರಮ ಹೊನ್ನಾವರ ಪಟ್ಟಣದ ಜಿ ಎಸ್ ಬಿ ಹತ್ತು ಸಮಸ್ತರ ಮಠದ ಶ್ರೀರಾಮ ಮಂದಿರದಲ್ಲಿ ನಡೆಯಿತು.

ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮಠದ ಗೌರವಾಧ್ಯಕ್ಷ ರಘುನಾಥ ಪ್ರಭುರವರು ಪರ್ತಗಾಳಿ ಮಠಾಧೀಶರೊಂದಿಗೆ ತಾನು ಆತ್ಮೀಯ ಓಡನಾಟವನ್ನು ಹೊಂದಿದ್ದೆ. ಅವರ ಸಮಯ ಪ್ರಜ್ಞೆ ಕಠಿಣವಾದ ಅನುಷ್ಠಾನ, ಎಲ್ಲರನ್ನು ಸರಿಸಮಾನವಾಗಿ ಕಾಣುವ ಸಮಾನತೆ. ಸಮಾಜದ ಅಭಿವೃದ್ದಿಯ ಕುರಿತ ಅವರ ದೂರದರ್ಶಿತ್ವ ಅತ್ಯಂತ ವಿಶೇಷವಾಗಿತ್ತು. ಹೊನ್ನಾವರ ಮಠದೊಂದಿಗೆ ಗುರುಗಳ ಸಂಭAದ ಅನೋನ್ಯವಾಗಿತ್ತು ಎಂದರು.
ಹಿರಿಯ ಪತ್ರಕರ್ತ ಜಿ.ಯು. ಭಟ್ಟರವರು ಮಾತನಾಡಿ ಪರ್ತಗಾಳಿ ಮಠದ ಪೀಠದಲ್ಲಿ ವಿದ್ಯಾಧೀರಾಜ ಶ್ರೀಪಾದಂಗಳವರ ವಿರಾಜಮಾನರಾದ ನಂತರ ಗೌಡ ಸಾರಸ್ವತ ಸಮಾಜದಲ್ಲಿ ಅಭೂತಪೂರ್ವ ಬದಲಾವಣೆಯಾಗಿದೆ. ಸಮಾಜದ ಸಂಘಟನೆ,ಶೈಕ್ಷಣೀಕ ಉನ್ನತಿಯೊಂದಿಗೆ ಆರ್ಥಿಕವಾಗಿಯು ಅಭಿವೃದ್ದಿ ಹೊಂದಲು ಸಾಧ್ಯವಾಯಿತು ಎಂದರು.
ವೇದಿಕೆಯಲ್ಲಿ ಶ್ರೀರಾಮ ಮಂದಿರದ ಅರ್ಚಕರಾದ ವಿದ್ವಾನ ಗಣೇಶ ಭಟ್ಟ, ಜಿ ಎಸ್ ಬಿ ಯುವವಾಹಿನಿಯ ವಿಶ್ವನಾಥ ಪೈ, ಮಹಿಳಾ ವಾಹಿನಿ ಕಾರ್ಯದರ್ಶಿ ಗೌರಿ ನಾಯಕ, ದೀಪಕ ಪ್ರಭು,ರೋಟರಿ ದಿನೇಶ ಕಾಮತ ಮುಂತಾದವರು ಗುರುಗಳಿಗೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿ ಎಸ್ ಬಿ ಹತ್ತು ಸಮಸ್ತರ ಮಠದ ಅಧ್ಯಕ್ಷ ನರೇಂದ್ರ ಕಾಮತ ಉಪಸ್ಥಿತರಿದ್ದರು.
ಆರಂಭದಲ್ಲಿ ವೃಂದಾವನಸ್ಥ ಹಿರಿಯ ಸ್ವಾಮೀಜಿಯವರ ವೃಂದಾವನಕ್ಕೆ ನಮನ ಸಲ್ಲಿಸಲಾಯಿತು. ಅರ್ಚಕರ ವೇದ ಘೋಷಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಉಪಾಧ್ಯಕ್ಷ ಮುರಳೀಧರ ಶ್ಯಾನಭಾಗ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಕರುಣಾ ಪ್ರಭು ಹಾಗೂ ಸಂಗಡಿಗರಿAದ ಪ್ರಾರ್ಥನೆ ,ಗುರುಸ್ತುತಿ ನಡೆಯಿತು. ಜಿ ಎಸ್ ಬಿ ಸಮಾಜದ ಬಂಧುಗಳು ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳಿಗೆ ಗುರು ವಂದನೆ ಸಲ್ಲಿಸಿದರು.

ಭಾವನಾ ಟಿವಿಗಾಗಿ ವೆಂಕಟೇಶ ಮೇಸ್ತ ಹೊನ್ನಾವರ
error: