March 24, 2024

Bhavana Tv

Its Your Channel

ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಏರ್ಪಡಿಸಿದ ರಾಷ್ಟಿçಯ ಶಿಕ್ಷಣ ನೀತಿಯ ಕುರಿತು ಕಾಲೇಜು ಮಟ್ಟದ ಕಾರ್ಯಾಗಾರ.

ಹೊನ್ನಾವರ ; ನೂತನ ಶಿಕ್ಷಣ ನೀತಿಯನ್ವಯ ಕಲಿಕೆ ಒಂದು ನಿರಂತರ ಪ್ರಕ್ರಿಯೆಯಾಗಿದ್ದು ವಯಸ್ಸಿನ ಮಿತಿ ಇಲ್ಲದೆ, ಅನಾನುಕೂಲಗಳಿಂದ ಮಧ್ಯಂತರದಲ್ಲಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು ಕೂಡ ಮತ್ತೆ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು ಹಾಗೂ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ದಿಗೆ ಹೆಚ್ಚಿನ ಒತ್ತು ಕೊಟ್ಟು ಉದ್ಯೋಗಾವಕಾಶಗಳಿಗೆ ಅವಕಾಶ ಸಿಗುತ್ತದೆ ಎಂದು ಪ್ರೊ. ಎಂ ಜಿ ಹೆಗಡೆ, ಸಹಾಯಕ ಪ್ರಾದ್ಯಾಪಕರು ಹಾಗೂ ಪತ್ರಕರ್ತರು, ಎಸ್.ಡಿ.ಎಂ. ಪದವಿ ಕಾಲೇಜು, ಹೊನ್ನಾವರ ಇವರು ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಮಂಗಲಾ ಬಿ ನಾಯಕ ಮಾತನಾಡಿ ರಾಷ್ಟಿçÃಯ ಶಿಕ್ಷಣ ನೀತಿಯನ್ವಯ ವಿದ್ಯಾರ್ಥಿಗಳು ಬಹುಶಿಸ್ತಿçÃಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರö್ಯವಿರುವದರಿAದ ಹೆಚ್ಚಿನ ಜ್ಞಾನ ಸಂಪಾದನೆಗೆ ಅವಕಾಶ ಸಿಗುತ್ತದೆ ಹಾಗೂ ಪದವಿ (ಆನರ್ಸ) ಅಭ್ಯಸಿಸುವ ಮೂಲಕ ಹೆಚ್ಚಿನವರು ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಳ್ಳಲು ಅವಕಾಶ ಸಿಗುತ್ತದೆ ಎಂದರು.
ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಲ್ಲಿ ರಾಷ್ಟಿçÃಯ ಶಿಕ್ಷಣ ನೀತಿಯ ಅನುಷ್ಠಾನ, ರಚನೆ, ಉದ್ದೇಶ, ಅವಶ್ಯಕತೆ ಹಾಗೂ ಅದರಿಂದಾಗುವ ಲಾಭದ ಕುರಿತಂತೆ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ನಾಗೇಶ ಶೆಟ್ಟಿ ಇವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಗಮಿಸಿದ ಅತಿಥಿಗಳನ್ನು ಸಹಾಯಕ ಪ್ರಾದ್ಯಾಪಕರಾದ. ವಿಶ್ವನಾಥ ಎಸ್. ನಾಯ್ಕ ಇವರು ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ದಾಖಲಾತಿಗೆ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಸಿ ಸಂವಾದದಲ್ಲಿ ಪಾಲ್ಗೊಂಡರು.

error: